ಕವಿತೆ : ಕಂಗೊಳಿಸಲಿ ನಮ್ಮ ಬದುಕು

ರಾಮಚಂದ್ರ ಮಹಾರುದ್ರಪ್ಪ.

Life, ಬದುಕು

ಬೆಳಕು-ಕತ್ತಲೆಯ ನಡುವಿನ
ಕಣ್ಣಾಮುಚ್ಚಾಲೆಯೇ ಮನುಜನ ಬದುಕು
ಕಾರ‍್ಮೋಡ ಆವರಿಸಿ
ಎಲ್ಲೆಡೆ ಕತ್ತಲೆಯೇ ಕವಿದು
ಇದು ಜಗದ ಅಳಿವಂತೆ ಕಂಡರೂ
ಮಿಂಚಿನ ಒಂದು ಕಿಡಿ ಸಾಕು
ಮತ್ತೆ ಆಗಸ ಜಗಮಗಿಸಲು
ಬದುಕಿನ ಹಣತೆ ಹತ್ತಿ ಉರಿಯಲು

ನಂಬಿಕೆಯ ಬೆಳಕು ಬೇಕು
ಬದುಕಿನ ಕಗ್ಗತ್ತಲೆಯ ದೂರ ಮಾಡಲು
ಕತ್ತೆಲೆಯೆಂದೂ ಕಾಡದಿರಲಿ
ದುಗುಡವೆಂದೆಂದಿಗೂ ಸುಳಿಯದಿರಲಿ
ಹುರುಪಿನ ತೊರೆ ಉಕ್ಕಿ ಹರಿದು
ಬದುಕಲಿ ನಲಿವು ತರಲಿ
ಪ್ರಕ್ರುತಿಯ ಬೆರಗಿನಂತೆ
ಕಂಗೊಳಿಸಲಿ ನಮ್ಮ ಬದುಕು

(ಚಿತ್ರ ಸೆಲೆ: fearlessmotivation.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications