ಕವಿತೆ: ಹಣ್ಣು ಮಾರುವಾಕಿ
– ಸವಿತಾ.
ಹಣ್ಣ ಹಣ್ಣ ಮುದುಕಿ
ಬಾಳೆಹಣ್ಣು ಮಾರುವಾಕಿ
ದಿನಾ ಬಂದ್ ಒಂದ ಜಾಗಾದಾಗ ಕೂಂದ್ರಾಕಿ
ಬರ‍್ರಿ ಬರ‍್ರಿ ಅಂತ ಎಲ್ಲಾರನೂ ಕರೆಯಾಕಿ
ಸಂತ್ಯಾಗಿನ ಮಂದಿನೂ ಬರುವರು ಹುಡುಕಿ
ವ್ಯಾಪಾರ ಮುಗಿಸಿ ಸೀದಾ ಮನಿಗೇ ಹೋಗುವಾಕಿ
ಬಿಡಿಹಣ್ಣ ಮೊಮ್ಮಕ್ಕಳಿಗೆ ತಿನಿಸುವಾಕಿ
ದೇವರೆಡಿಗೆ ಎರಡು ಹಣ್ಣ ಎತ್ತಿಡಾಕಿ
ಈಕಿಯಂದರ ಮನಿಮಂದಿಗೆ ಪ್ರೀತಿ
ಎಲ್ಲಾರ ಬಾಯಾಗೂ ಈಕಿ ಹೆಸರೈತಿ
ದುಡಿದುಣ್ಣುವ ಚಲಗಾತಿ
ಸೋಮಾರಿತನ ಅಂದರ ಗೊತ್ತಿಲ್ಲದಾಕಿ
(ಚಿತ್ರ ಸಲೆ: pxhere.com)
ಇತ್ತೀಚಿನ ಅನಿಸಿಕೆಗಳು