ಬಾಳೆಹಣ್ಣು-ಕಡಲೆ ಹಿಟ್ಟಿನ ಹಲ್ವಾ

– ಸವಿತಾ.

ಬೇಕಾಗುವ ಸಾಮಾನುಗಳು

ಬಾಳೆಹಣ್ಣು – 4
ಕಡಲೇ ಹಿಟ್ಟು – 4 ಚಮಚ
ತುಪ್ಪ – 5 ಚಮಚ
ಹಾಲು – 2 ಲೋಟ
ಬೆಲ್ಲದ ಪುಡಿ – 6 ಅತವಾ 8 ಚಮಚ
ಏಲಕ್ಕಿ – 2
ಬಾದಾಮಿ – 2
ಗೋಡಂಬಿ – 2

ಮಾಡುವ ಬಗೆ

ಬಾಣಲೆ ಬಿಸಿ ಮಾಡಿ, 4 ಚಮಚ ತುಪ್ಪದಲ್ಲಿ ಕಡಲೆ ಹಿಟ್ಟು ಹುರಿದು ತೆಗೆಯಿರಿ. ಅದೇ ಬಾಣಲೆಗೆ ಬಾಳೆ ಹಣ್ಣು ಕತ್ತರಿಸಿ ಹಾಕಿ ಸ್ವಲ್ಪ ತುಪ್ಪ ಸೇರಿಸಿ ಹುರಿಯಿರಿ. ಹಾಲು ಸೇರಿಸಿ ಮತ್ತು ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ತಿರುಗಿಸುತ್ತಾ ಇರಿ. ಬೆಲ್ಲದ ಪುಡಿ ಹಾಕಿ ಕರಗುವವರೆಗೆ ಕೈಯಾಡಿಸಿರಿ. ತುಪ್ಪ ಬಿಟ್ಟು ಕೊಳ್ಳುತ್ತ, ಹಲ್ವಾ ಗಟ್ಟಿಯಾಗುತ್ತಿದ್ದ ಹಾಗೇ ಒಲೆ ಆರಿಸಿ. ಏಲಕ್ಕಿ ಪುಡಿ ಮಾಡಿ ಸೇರಿಸಿ. ಗೋಡಂಬಿ, ಬಾದಾಮಿ ಕತ್ತರಿಸಿ ಮೇಲೆ ಹಾಕಿ. ಈಗ ಬಾಳೆಹಣ್ಣು-ಕಡಲೆ ಹಿಟ್ಟು ಹಲ್ವಾ ಸವಿಯಲು ಸಿದ್ದ. ಆರೋಗ್ಯಕರ ಸರಳವಾಗಿ ಮಾಡಬಹುದಾದ ಸಿಹಿ ಹಲ್ವಾ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications