ಕವಿತೆ: ಕಾಲದ ಹಿಡಿಯಲ್ಲಿದೆ
ಕಾಲದ ಹಿಡಿಯಲ್ಲಿದೆ
ಬದುಕಿನ ಬೇವು ಬೆಲ್ಲ
ಸಿಹಿ ಕಹಿಗಳ ಸಂಗಮವು
ಬದುಕಿನ ತುಂಬೆಲ್ಲ
ಕಾಲಚಕ್ರದ ಮೇಲೆ
ಕುಳಿತಿದೆ ಬಾಳಿನ ಬಂಡಿ
ಸುಕ ದುಕ್ಕಗಳನ್ನು
ಬೆಸೆದಿದೆ ಸಮಯದ ಕೊಂಡಿ
ಕಾಲ ಕಾಲಕೂ
ದುಕ್ಕ ದುಗುಡಗಳ ತಾಳಮೇಳ
ಕಾಲ ಬಂದಾಗ ಕರಗುವುವು
ಹಾಕಲು ಸಂಯಮದ ಗಾಳ
ಕಾಲದ ಪರಿದಿಯಲ್ಲಿ
ಕೊನೆಗಾಣಲಿ ನೋವು
ಸಂಕಶ್ಟಗಳು ಸರಿದು
ಸದಾ ಸಾಗುತಿರಲಿ ನಲಿವು
(ಚಿತ್ರಸೆಲೆ : pixabay.com )
ಇತ್ತೀಚಿನ ಅನಿಸಿಕೆಗಳು