ಸವತೆಕಾಯಿ ದೋಸೆ

– ಸವಿತಾ.

ಬೇಕಾಗುವ ಸಾಮಾನುಗಳು

ಗೋದಿ ರವೆ – 1/2 ಲೋಟ
ಅಕ್ಕಿ ಹಿಟ್ಟು – 1/2 ಲೋಟ
ಸವತೆಕಾಯಿ – 1/2 (ಚಿಕ್ಕದಾದರೆ ಒಂದು)
ಎಣ್ಣೆ – 1 ಚಮಚ
ಉಪ್ಪು ರುಚಿಗೆ ತಕ್ಕಶ್ಟು
ಜೀರಿಗೆ – 1/2 ಚಮಚ
ಹಸಿ ಮೆಣಸಿನಕಾಯಿ – 2
(ಕೊತ್ತಂಬರಿ ಸೊಪ್ಪು ಸ್ವಲ್ಪ ಇದ್ದರೆ ಸೇರಿಸಬಹುದು)

ಮಾಡುವ ಬಗೆ

ಹಸಿ ಮೆಣಸಿನಕಾಯಿ, ಸವತೆಕಾಯಿ, ಜೀರಿಗೆ, ಕೊತ್ತಂಬರಿ ಸೊಪ್ಪು, ಸಣ್ಣ ಗೋದಿ ರವೆ, ಉಪ್ಪು, ಸ್ವಲ್ಪ ನೀರು ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ ತೆಗೆಯಿರಿ. ಅಕ್ಕಿ ಹಿಟ್ಟು ಸೇರಿಸಿ, ಸ್ವಲ್ಪ ನೀರು ಹಾಕಿ ಕಲಸಿ ಇಟ್ಟುಕೊಳ್ಳಿ (ಬಹಳ ನೀರಾಗಿರಬಾರದು). ಒಂದು ಚಮಚ ಎಣ್ಣೆ ಹಾಕಿ ಇನ್ನೊಮ್ಮೆ ಕಲಸಿ ಕೊಂಡು ಕಾದ ತವೆಗೆ ಸ್ವಲ್ಪ ಎಣ್ಣೆ ಸವರಿ ದೋಸೆ ಹಾಕಿ ಎರಡು ಬದಿ ಬೇಯಿಸಿ ತೆಗೆಯಿರಿ. ಈಗ ಬಿಸಿ ಸವತೆಕಾಯಿ ದೋಸೆ ಸವಿಯಲು ಸಿದ್ದ. ಕೊಬ್ಬರಿ ಚಟ್ನಿ ಅತವಾ ಟೊಮೆಟೊ ಚಟ್ನಿ, ಪಲ್ಯ ಮತ್ತು ಸಾಂಬಾರು ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: