ಟೋಮೋಟೋ ಚಟ್ನಿ

– ಸವಿತಾ.

ಬೇಕಾಗುವ ಸಾಮಾನುಗಳು

  • ಟೊಮೆಟೊ – 3
  • ಈರುಳ್ಳಿ – 1
  • ಬೆಳ್ಳುಳ್ಳಿ – 1 ಗಡ್ಡೆ
  • ಕಡಲೇ ಬೇಳೆ – 1/2 ಚಮಚ
  • ಉದ್ದಿನ ಬೇಳೆ – 1/2 ಚಮಚ
  • ಜೀರಿಗೆ – 1/2 ಚಮಚ
  • ಮೆಂತೆ ಕಾಳು – 1/2 ಚಮಚ
  • ಕೊತ್ತಂಬರಿ ಕಾಳು – 1/2 ಚಮಚ
  • ಹಸಿ ಮೆಣಸಿನ ಕಾಯಿ – 1
  • ಒಣ ಕಾರದ ಪುಡಿ – 1/2 ಚಮಚ
  • ಉಪ್ಪು ರುಚಿಗೆ ತಕ್ಕಶ್ಟು
  • ಎಣ್ಣೆ – 1 ಚಮಚ

ಮಾಡುವ ಬಗೆ

ಮೊದಲಿಗೆ ಬೆಳ್ಳುಳ್ಳಿ ಹೋಳಿನ ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ಈರುಳ್ಳಿ, ಟೊಮೆಟೊ ಮತ್ತು ಹಸಿ ಮೆಣಸಿನಕಾಯಿ ಕತ್ತರಿಸಿಟ್ಟುಕೊಳ್ಳಿರಿ. ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ, ಕಡಲೇಬೇಳೆ, ಉದ್ದಿನ ಬೇಳೆ, ಮೆಂತೆ ಕಾಳು, ಕೊತ್ತಂಬರಿ ಕಾಳು, ಬೆಳ್ಳುಳ್ಳಿ ಎಸಳು, ಕತ್ತರಿಸಿದ ಹಸಿ ಮೆಣಸಿನಕಾಯಿ, ಈರುಳ್ಳಿ ಮತ್ತು ಟೊಮೆಟೊ ಹಾಕಿ ಚೆನ್ನಾಗಿ ಹುರಿದು ಒಲೆ ಆರಿಸಿ ಇಳಿಸಿ.ಇದು ಆರಿದ ಮೇಲೆ ಉಪ್ಪು, ಒಣ ಕಾರದ ಪುಡಿ ಹಾಕಿ ಮಿಕ್ಸರ್ ನಲ್ಲಿ ರುಬ್ಬಿ ತೆಗೆಯಿರಿ(ಕಲ್ಲಿನಲ್ಲಿಯೂ ರುಬ್ಬ ಬಹುದು). ಇದು ಇಡ್ಲಿ, ದೋಸೆ, ಚಪಾತಿ ಎಲ್ಲದಕ್ಕೂ ಹೊಂದುವ ಚಟ್ನಿಯಾಗಿದ್ದು ಊಟ, ತಿಂಡಿ ಜೊತೆ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: