ಅಕ್ಕಿ ಹಿಟ್ಟಿನ ಹಲ್ವಾ

– ಸವಿತಾ.

ಬೇಕಾಗುವ ಸಾಮಾನುಗಳು

ಅಕ್ಕಿ ಹಿಟ್ಟು – 1 ಲೋಟ
ಹಸಿ ಕೊಬ್ಬರಿ – ಅರ‍್ದ ತೆಂಗಿನ ಹೋಳು
ಬೆಲ್ಲ – 1 ಲೋಟ
ತುಪ್ಪ – 1 ಲೋಟ
ಏಲಕ್ಕಿ – 2

ಮಾಡುವ ಬಗೆ

ಅರ‍್ದ ಲೋಟ ತುಪ್ಪ ಮತ್ತು ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಹುರಿದು ತೆಗೆಯಿರಿ. ಹಸಿ ಕೊಬ್ಬರಿ ತುರಿ ಮತ್ತು ಒಂದು ಲೋಟ ನೀರು ಸೇರಿಸಿ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿ ತೆಗೆಯಿರಿ.

ತೆಂಗಿನ ಹಾಲು ಸಣ್ಣ ಉರಿಯಲ್ಲಿಟ್ಟು ಅಕ್ಕಿ ಹಿಟ್ಟು ಸೇರಿಸಿ ತಿರುಗಿಸುತ್ತಾ ಇರಿ. ಬೆಲ್ಲ ಮತ್ತು ತುಪ್ಪ ಸೇರಿಸಿ. ಎಲ್ಲಾ ಹೊಂದಿಕೊಂಡು ಗಟ್ಟಿಯಾದ ಮೇಲೆ ಒಲೆ ಆರಿಸಿ ಏಲಕ್ಕಿ ಪುಡಿ ಮಾಡಿ ಹಾಕಿ. ಒಂದು ತಟ್ಟೆಗೆ ತುಪ್ಪ ಸವರಿ, ಹಲ್ವಾ ಮಿಶ್ರಣ ಸುರುವಿಕೊಳ್ಳಿ. ಬೇಕಾದ ಆಕಾರದಲ್ಲಿ ಕತ್ತರಿಸಿ. ಈಗ ಅಕ್ಕಿ ಹಿಟ್ಟಿನ ಹಲ್ವಾ ಸಿದ್ದವಾಯಿತು. ಆರೋಗ್ಯಕರ ಸಿಹಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: