ಕವಿತೆ: ಬದುಕು – ಒಂಟಿ ಪಯಣ

– ರಾಮಚಂದ್ರ ಮಹಾರುದ್ರಪ್ಪ.

ಒಬ್ಬಂಟಿ, Loneliness

ನಿನ್ನವರು ಎಂದು ನೆನೆದಾಕ್ಶಣ
ಯಾರೂ ನಿನ್ನವರಾಗೊಲ್ಲ!

ಮನುಜ ಸಂಗಜೀವಿಯೇ!
ಅವನ ಸುತ್ತಲೂ ಜನರಿರುವರು
ಆದರೂ, ಅವರ ಬದುಕು ಅವರದು
ನಿನ್ನ ಬದುಕು ನಿನ್ನದು!

ಈ ಬದುಕೆಂಬ ಕೆಲಕಾಲದ ಸಂತೆಯಲಿ
ನೀನೆಂದಿಗೂ ಒಬ್ಬಂಟಿಯೇ!
ಸೋಲು-ಗೆಲುವು ನಿನ್ನದೇ
ನೋವು-ನಲಿವು ನಿನ್ನೊಬ್ಬನದೇ

ನಿನ್ನ ಸಂತಸದಲಿ ಪಾಲ್ಗೊಂಡಾರು
ನಿನ್ನ ನೋವಿಗೆ ಕಿವಿಗೊಟ್ಟಾರು
ಆದರೂ, ಸಂತಸದಲಿ ಹಿಗ್ಗದೆ
ನೋವಿನಲಿ ಕುಗ್ಗದೆ

ಬಾಳಿನಲಿ ನಿಲ್ಲದೆ
ಓಡುವ ಹೊಣೆ ನಿನ್ನದು
ಇದು ಒಂಟಿ ಪಯಣ
ಹಿಂದಿರುಗಿ ನೋಡದಿರು

(ಚಿತ್ರಸೆಲೆ: home.bt.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks