ಮಾತನಾಡುವ ದೇವರುಗಳು

– .

ಈ ವಿಶ್ವದಲ್ಲಿ ಮಾನವನ ತರ‍್ಕಕ್ಕೆ ನಿಲುಕದಿರುವ ಎಶ್ಟೋ ವಿದ್ಯಮಾನಗಳಿವೆ. ಮಾನವ ವೈಜ್ನಾನಿಕವಾಗಿ ಎಶ್ಟೆಲ್ಲಾ ಮುಂದುವರೆದರೂ, ಅದನ್ನು ಮೀರಿಸುವ ಗಟನೆಗಳು ವಿಶ್ವದೆಲ್ಲೆಡೆ ನಡೆಯುತ್ತಲೇ ಇರುತ್ತದೆ. ಉದಾಹರಣೆಗೆ ಅಪೊಲೋ ಚಂದ್ರಯಾನವನ್ನೇ ತೆಗೆದುಕೊಳ್ಳಿ. ಅದು ಎಶ್ಟೆಲ್ಲಾ ಸಾದನೆಗಳನ್ನು ಮಾಡಿ ವಿಶ್ವವನ್ನೇ ವಿಸ್ಮಯಗೊಳಿಸಿದೆ. ಆದರೆ ಮಾನವನಲ್ಲಿ ಬಲವಾಗಿ ಬೇರೂರಿರುವ 13 ಸಂಕ್ಯೆಯ ಬಗೆಗಿನ ಅನುಮಾನದ ಅಬಿಪ್ರಾಯ ಇಲ್ಲೂ ಸಾಬೀತಾಯಿತು. ಅದಕ್ಕೆ ನಿಗದಿ ಪಡಿಸಿದ್ದ ಕಾರ‍್ಯವನ್ನು ಪೂರ‍್ಣಗೊಳಿಸದೆ ಯಾನ ಕೊನೆಗೊಂಡಿತು. ಇದು ಕಾಕತಾಳೀಯವೋ ಇಲ್ಲ ಕಾಣದ ಶಕ್ತಿಯ ಕೈವಾಡವೋ ದೇವರೇ ಬಲ್ಲ.

ಬಿಹಾರದ ಬಕ್ಸಾರ್‍‍ನಲ್ಲಿ ಒಂದು ದೇವಾಲಯವಿದೆ. ಅದು ದೇವಿ ರಾಜರಾಜೇಶ್ವರಿ ತ್ರಿಪುರ ಸುಂದರಿ ಅಮ್ಮನವರ ದೇವಾಲಯ. ಈ ದೇವಾಲಯ ಸಾಮಾನ್ಯ ಜನರನ್ನು ಮಾತ್ರವಲ್ಲದೆ, ಎಲ್ಲವನ್ನೂ ವೈಜ್ನಾನಿಕ ತಳಹದಿಯ ಮೇಲೆ ವಿಶ್ಲೇಶಿಸುವ ಬುದ್ದಿಜೀವಿಗಳನ್ನೂ ಸಹ ವಿಸ್ಮಯಗೊಳಿಸಿದೆ. ಸುಮಾರು ನಾಲ್ಕು ನೂರು ವರ‍್ಶಗಳ ಹಿಂದೆ ಬವಾನಿ ಮಿಶ್ರ ಎಂಬ ತಂತ್ರಿಯೊಬ್ಬರು ತಾಯಿ ತ್ರಿಪುರ ಸುಂದರಿ ಮತ್ತು ಇತರೆ ದೇವತೆಗಳ ದೇಗುಲವನ್ನು ನಿರ‍್ಮಿಸಲು ನಿರ‍್ದಿಶ್ಟ ಸ್ತಳದ ಆಯ್ಕೆ ಮಾಡಿದ್ದರು ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ಪೂಜಿಸುವ ವಿದಾನ, ಬೇರೆಲ್ಲಾ ದೇಗುಲದಂತಿಲ್ಲ. ಬಹಳ ಹಿಂದಿನಿಂದಲೂ ಇಲ್ಲಿನ ಪೂಜೆ ಪುನಸ್ಕಾರಗಳಲ್ಲಿ ವೈದಿಕ ಹಾಗೂ ತಾಂತ್ರಿಕ ಪದ್ದತಿಗಳೆರೆಡನ್ನೂ ಅಳವಡಿಸಿಕೊಂಡು ಬರಲಾಗಿದೆ. ತಂತ್ರ ಸಾದಕರು ಈ ದೇಗುಲದಲ್ಲಿ ನೆಲೆಸಿರುವ ದೇವತೆಗಳ ಶಕ್ತಿಯಲ್ಲಿ ಅಕಂಡ, ಅಚಲ ಮತ್ತು ಅಪಾರವಾದ ನಂಬಿಕೆಯನ್ನು ಹೊಂದಿದ್ದಾರೆ. ಈ ದೇಗುಲದ ಅದಿದೇವತೆ ಲಲಿತಾ ತ್ರಿಪುರ ಸುಂದರಿಯಾದರೂ, ಇದರೊಡನೆ ಕಾಳಿ, ತಾರಾ, ಬುವನೇಶ್ವರಿ, ಚಿನ್ನಮಸ್ತ, ಪೀತಾಂಬರ, ದೂಮಾವತಿ, ಮಾತಂಗಿ ಮತ್ತು ಕಮಲಾ ದೇವತೆಗಳ ಪ್ರತಿಶ್ಟಿತ ಚಿತ್ರಗಳು ಹಾಗೂ ಬಟುಕ್ ಬಹಿರವ, ದತ್ತಾತ್ರೇಯರ ಜೊತೆಗೆ ಇನ್ನೂ ಅನೇಕ ದೇವರುಗಳ ಸಮೂಹವೇ ಇಲ್ಲಿದೆ. ಚರಿತ್ರಕಾರರ ವಿಶ್ಲೇಶಣೆಯಂತೆ ಈ ದೇವಾಲಯವನ್ನು ತಂತ್ರ ಸಾದಕರು, ಅತೀಂದ್ರಿಯ ಶಕ್ತಿಯನ್ನು ಪಡೆಯಲು ನಿರ‍್ಮಿಸಿದ್ದರು ಎನ್ನುತ್ತಾರೆ.

ಹಾಗಾದರೆ ಈ ದೇವಾಲಯದ ವಿಶೇಶತೆ ಏನು? ತಂತ್ರ ಸಾದಕರನ್ನು ಮತ್ತು ಬಕ್ತರನ್ನು ಈ ದೇವಾಲಯ ಅಯಸ್ಕಾಂತದಂತೆ ಸೆಳೆಯಲು ಕಾರಣವೇನು? ಈ ದೇವಾಲಯ ಉಳಿದ ದೇವಾಲಯಗಳಿಗಿಂತ ಏಕೆ ಬಿನ್ನವಾಗಿದೆ?

ಈ ದೇಗುಲದ ವಿಶೇಶತೆಯಿರುವುದು, ಇಲ್ಲಿರುವ ದೇವತೆಗಳು ತಮ್ಮತಮ್ಮಳೊಗೆ ಮಾನವರಂತೆ ಮಾತನಾಡುವ ಕಾರಣದಿಂದ. ರಾತ್ರಿ ವೇಳೆಯಲ್ಲಿ ಬಕ್ತರ ದರ‍್ಶನವೆಲ್ಲಾ ಮುಗಿದ ನಂತರ, ದೇಗುಲದ ಬಾಗಿಲನ್ನು ಮುಚ್ಚಿದ ಮೇಲೆ, ಹಲವಾರು ಜನಕ್ಕೆ ದೇಗುಲದಲ್ಲಿನ ದೇವತೆಗಳು ತಮ್ಮತಮ್ಮಳೊಗೆ ಮಾತನಾಡುವ ದ್ವನಿ ಗೋಡೆಗಳ ಮೂಲಕ ಹೊರ ಹೊಮ್ಮಿರುವುದನ್ನು ಕೇಳಿಸಿಕೊಂಡಿದ್ದಾರೆ. ಈ ವಿಚಾರವನ್ನು ಬುದ್ದಿ ಜೀವಿಗಳು ಸಾರಾಸಗಟಾಗಿ ನಿರಾಕರಿಸಿದ್ದರು. ‘ಕಲ್ಲಿನಲ್ಲಿ ಕೆತ್ತಿದ ವಿಗ್ರಹಗಳ ಮತ್ತು ಪಟದಲ್ಲಿನ ಚಿತ್ರಗಳ ನಡುವೆ ನಡೆಯುವ ದ್ವನಿ ಸಂಬಾಶಣೆ ಹೊರಬರಲು ಸಾದ್ಯವೇ ಇಲ್ಲ’ ಎಂಬುದು ಅವರುಗಳ ವಾದವಾಗಿತ್ತು. ಇದರ ಸತ್ಯಾಸತ್ಯತೆಯನ್ನು ಅರಿಯಲು ವಿಜ್ನಾನಿಗಳ ತಂಡವೊಂದು, ರಾತ್ರಿಯಲ್ಲ್ಲಿ ಈ ದೇಗುಲಕ್ಕೆ ಬೇಟಿ ನೀಡಿತು. ಅವರುಗಳಿಗೂ ದೇವಾಲಯದ ಗೋಡೆಗಳಿಂದ ದ್ವನಿ ಪ್ರತಿದ್ವನಿಸಿದ್ದು ಕೇಳಿಬಂತು. ದ್ವನಿ ಎಲ್ಲಿಂದ ಉದ್ಬವವಾಯಿತು? ದ್ವನಿಯ ಬಾಶೆ ಯಾವುದು? ಯಾವುದೂ ಸ್ಪಶ್ಟಪಡಿಸಲಾಗಿಲ್ಲ. ಇಂದಿಗೂ ಈ ಅತೀಂದ್ರಿಯ ವಿದ್ಯಾಮಾನವು ಬಗೆಹರಿಯದೆ, ಹಾಗೇ ಉಳಿದಿದೆ. ದೇಗುಲದಲ್ಲಿನ ದೇವಿಗಳು ತಮ್ಮತಮ್ಮೊಳಗೆ ಮಾತನಾಡುತ್ತಿರುತ್ತಾರೋ ಇಲ್ಲ ಮನುಕುಲದೊಂದಿಗೆ ಸಂಬಾಶಣೆ ಮಾಡುತ್ತಾರೋ ತಿಳಿಯದು. ಈ ಚಮತ್ಕಾರಿಕ ವಿದ್ಯಮಾನ ಅನೇಕ ಬಕ್ತರನ್ನು ಆಕರ‍್ಶಿಸಿರುವುದಂತೂ ಸತ್ಯ.

( ಚಿತ್ರಸೆಲೆ ಮತ್ತು ಮಾಹಿತಿ ಸೆಲೆ: hindu-blog.com, timesofindia.indiatimes.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *