ಕೊಬ್ಬರಿ ಮಿಟಾಯಿ
– ಸವಿತಾ.
ಬೇಕಾಗುವ ಸಾಮಾನುಗಳು
- ಹಸಿ ಕೊಬ್ಬರಿ ತುರಿ – 2 ಲೋಟ
- ಗೋಡಂಬಿ – 1/4 ಲೋಟ
- ಬಾದಾಮಿ – 1/4 ಲೋಟ
- ಒಣ ದ್ರಾಕ್ಶಿ – 1/4 ಲೋಟ
- ಕರ‍್ಜೂರ – 1/4 ಲೋಟ
- ಬೆಲ್ಲ – ಅರ‍್ದ ಅತವಾ ಮುಕ್ಕಾಲು ಲೋಟ
- ಏಲಕ್ಕಿ – 2
- ಗಸಗಸೆ – 2 ಚಮಚ
ಮಾಡುವ ಬಗೆ
ಮೊದಲಿಗೆ ಕೊಬ್ಬರಿ ತುರಿದು ಮಿಕ್ಸರ್‍ನಲ್ಲಿ ಹಾಕಿ ಒಂದು ಸುತ್ತು ತಿರುಗಿಸಿ ತೆಗೆದಿಡಿ. ಆಮೇಲೆ ಕರ‍್ಜೂರವನ್ನು ಜಜ್ಜಿ ಬೀಜ ತೆಗೆದು ಸಣ್ಣದಾಗಿ ಕತ್ತರಿಸಿಟ್ಟು ಕೊಳ್ಳಿರಿ. ಗೋಡಂಬಿ, ಬಾದಾಮಿ, ಒಣದ್ರಾಕ್ಶಿಯನ್ನು ಮಿಕ್ಸರ್ ಜಾರ್‍ಗೆ ಹಾಕಿ ಸ್ವಲ್ಪ ಪುಡಿ ಮಾಡಿ ತೆಗೆಯಿರಿ. ನಂತರ ಕರ‍್ಜೂರ ಹಾಕಿ ಪುಡಿ ಮಾಡಿಕೊಳ್ಳಿ. ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಎರಡೆಳೆ ಪಾಕ ಮಾಡಿರಿ. ಕೊಬ್ಬರಿ ತುರಿ, ಉಳಿದೆಲ್ಲ ಗೋಡಂಬಿ, ಒಣದ್ರಾಕ್ಶಿ, ಬಾದಾಮಿ, ಮತ್ತು ಕರ‍್ಜೂರದ ಪುಡಿ ಹಾಕಿ ಸಣ್ಣ ಉರಿಯಿಟ್ಟು ಚೆನ್ನಾಗಿ ತಿರುಗಿಸಿ. ಇದು ಗಟ್ಟಿಯಾಗುವಶ್ಟರಲ್ಲಿ ಒಲೆ ಆರಿಸಿ. ಆಮೇಲೆ ಇದಕ್ಕೆ ಏಲಕ್ಕಿ ಪುಡಿ ಮಾಡಿ ಸೇರಿಸಿ ಮತ್ತು ಗಸಗಸೆ ಹಾಕಿ ಇನ್ನೊಮ್ಮೆ ಚೆನ್ನಾಗಿ ತಿರುವಿ ಹಾಕಿ ಚಕಳಿ ಕತ್ತರಿಸಿ. ಬೇಕಾದರೆ ತುಪ್ಪ ಸವರಿ ಚಕಳಿ ಕತ್ತರಿಸಿರಿ ಅತವಾ ಬೇಕಾದ ಆಕಾರ ಕೊಟ್ಟು ಕತ್ತರಿಸಿರಿ. ಈಗ ಕೊಬ್ಬರಿ ಮಿಟಾಯಿ (ಚಕಳಿ) ಸವಿಯಲು ಸಿದ್ದವಾಗಿದೆ.
super