ಕವಿತೆ: ಓ ಪ್ರೀತಿಯೇ

– ಸವಿತಾ.ಒಲವು, love

ಏನೆಂದು ಹೇಳಲಿ ಆ ನಿನ್ನ ಪ್ರೀತಿಗೆ
ಮಗುವಾದ ಮನಸಿಗೆ
ಹರುಶವ ತಂದ ಗಳಿಗೆಗೆ

ಜೀವನ ಜೋಕಾಲಿಗೆ
ಒಂದಾದ ಮನಸಿಗೆ
ತನ್ಮಯತೆಯಲಿ ಮೈ ಮರೆತಿದೆ

ಕಶ್ಟದಲಿ ಕೈಹಿಡಿದೆ
ಸಂತೈಸಿ ಕಣ್ಣೀರು ಒರೆಸಿದೆ
ಒಡೆದ ಮನಗಳ ಬೆಸೆದೆ

ನೀನ್ಯಾರೋ ನಾನ್ಯಾರೆಂಬುದು ಗೊತ್ತಿಲ್ಲದೇ
ಪ್ರೀತಿಯೊಂದು ನುಸುಳಿ ಜೊತೆ ಜೊತೆ
ಸಾಗುವ ಬಯಕೆ ಹುಟ್ಟಿದ್ದು ಹೇಗೆ

ಓ ಪ್ರೀತಿಯೇ ನೀನ್ಯಾಕೆ ಹೀಗೇ
ಸೆಳೆವೆ, ಎಲ್ಲರನ್ನೂ ಬಂದಿಸಿ ಆಳುವೆ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: