ಮಿನಿಹನಿಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

*** ಪ್ರಮಾಣ ***

‘ನಾವೀಗ ಬುದ್ದಿವಂತರು’
ಎಂದು ಬರೆಯಲಾಗಿದೆ
ಪ್ರಮಾಣ ಪತ್ರದ ಮೇಲೆ
ಪ್ರಮಾಣ ಮಾಡಿ

*** ದೇವರು ***

ನೀವೇ ದೇವರು
ಎಂದರು ಕೈಮುಗಿದು
ಗೆದ್ದಾಗ ಕಿತ್ತುಕೊಂಡರು
ಬಗೆದು ಬಗೆದು

*** ಮಳೆ – ನೆರೆ ***

ಅದೇ ಮಳೆ ಅದೇ ನೆರೆ
ಪ್ರತಿ ವರ‍್ಶ ಹೊಸ ಹೊರೆ
ಕರಗಿದ್ದು ಮಾತ್ರ
ಅನುದಾನದ ಹೊಳೆ

*** ಬುತ್ತಿ ***

ಯಾರೂ ತರಲಿಲ್ಲ
ಬರುವಾಗ ಬುತ್ತಿ
ಇರುವುದೆಲ್ಲಾ ನಮ್ಮದೇ
ಎನ್ನುತಿಹರಲ್ಲ
ಒತ್ತಿ ಒತ್ತಿ

*** ಬಿಳಿ ***

ತೊಟ್ಟುಕೊಂಡ ಬಟ್ಟೆ
ಅದೆಶ್ಟು ಬಿಳಿ
ಸತ್ಯವೇ ಅವರ ಬಳಿ
ಮನಕೆ ಮಾತ್ರ ಕರಿ ಕಂಬಳಿ

(ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: