ಕವಿತೆ: ಎಲ್ಲಿ ಹೋದೆ ಜೀವವೇ

– ವಿನು ರವಿ.

ಈಗ ಬರುವೆನೆಂದು ಹೇಳಿ
ಎಲ್ಲಿ ಹೋದೆ ಜೀವವೇ
ಇನ್ನೂ ನಿನಗೆ ಕಾಯುತಿರುವೆ
ತಿಳಿಯದೆ ಹೇಗಿರುವೆ

ಬಾನ ತೊರೆದ ಮೋಡದಂತೆ
ಎಲ್ಲೊ ಕರಗಿ ಹೋದೆಯಾ
ಬಾವ ತೊರೆದ ಹಾಡಿನಂತೆ
ಬಯಲ ರಾಗವಾದೆಯಾ

ಯಾವ ಗಿರಿಯ ಮೇಲೇರಿದೆ
ಯಾವ ಗುಡಿಯ ದೀಪವಾದೆ
ಯಾವ ಹೂವ ಬಣ್ಣವಾಗಿ
ದೇವ ಮಾಲೆಯಾದೆಯೋ?

ದೂರ ತಾರೆ ಮಿನುಗುತಿದೆ
ನಿನ್ನ ನೆನಪ ಬೆಳಕಿನಂತೆ
ಮೇಲೆ ಹಕ್ಕಿ ಹಾರುತಿದೆ
ನಿನ್ನ ಪ್ರೀತಿ ತೋರುವಂತೆ

ಯಾವ ರೂಪದಲ್ಲಿ ಬರುವೆ ಹೇಳು
ಕಣ್ಣು ಮುಚ್ಚಿ ಸ್ವೀಕರಿಸುವೆ
ನಿನ್ನ ಬರವ ಕಾಯುತಿರವೆ
ಹೇಗೆ ನೀನು ಬಂದರೂ
ಕೈಯ ಹಿಡಿದು ಕರೆದೊಯ್ಯುವೆ

(ಚಿತ್ರ ಸೆಲೆ: eyewillnotcry.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: