ಕವಿತೆ: ಹಸಿರು ಉಳಿಯಲಿ

– ಶ್ಯಾಮಲಶ್ರೀ.ಕೆ.ಎಸ್.ಪ್ರಕೃತಿ

ಇಳೆಯ ಒಡಲ ಸೀಳಿ ಬಂದು
ಮೊಳೆತು ಸಸಿಯಾಗಿ ನಿಂತೆ
ಹಚ್ಚ ಹಸಿರಾಗಿ ಬೆಳೆದು
ಜೀವದುಸಿರಲ್ಲಿ ಬೆರೆತೆ

ಬೀಸುವ ಗಾಳಿಗೆ ಮೈಯೊಡ್ಡಿ
ತಂಗಾಳಿಯ ಎರೆದೆ
ದಣಿದ ಜೀವದ ಮೊಗವರಳಿಸಲು
ತಣ್ಣನೆಯ ನೆರಳ ಚೆಲ್ಲಿದೆ

ಮನುಕುಲವ ಬೆಳಗಲು
ಹರಡಿ ದಟ್ಟಕಾನನವಾದೆ
ಅವರ ಸ್ವಾರ‍್ತಕೆ ಬಲಿಯಾಗಿ
‌ನೋವುಂಡು ಜೀವತೆತ್ತೆ

ಹಸಿರಿನ ಆಕ್ರಂದನ
ಇನ್ನಾದರೂ ನಿಲ್ಲಲಿ
ವನಸಿರಿಯು ಜೀವತಳೆದು
ನಾಡಿನ ಉಸಿರು ಉಳಿಯಲಿ
ಪರಿಸರದ ಸಂರಕ್ಶಣೆಯಾಗಲಿ

(ಚಿತ್ರ ಸೆಲೆ: stuartwilde.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *