ಕವಿತೆ: ತಿಳಿ ಹಸಿರ ಬಳಿ ಸಾರಿ
ಅಂತರವೇ ಅಂತರವೇ
ಹಸಿರಿನ ಗಿರಿಗಳ ಅಂತರವೇ
ಬಳಿ ಸಾರಿ ತಿಳಿಯಾಗಿಸು
ಮನದಲಿ ಹುದುಗಿದ ಗೊಂದಲವೇ
ಹಸಿರಿನ ಒಡಲಲಿ ವಿಹರಿಸೇ
ಮನಸಿಗೆ ಮುದವನು ನೀಡುತಿಹೇ
ಹಸಿರಿನ ಚಾಮರ ಬೀಸುತಿರೇ
ಮುಂಗುರುಳು ನರ‍್ತಿಸಿ
ಚಂದಿರ ವದನವ ಸೋಕುತಿರೇ
ಮನದಲ್ಲಿ ಸಂತೋಶ ಉಕ್ಕಿದೆ!
ಬಾವಗಳು ತೇಲಿ ತೇಲಿ
ದೇಹ ಹಗುರಾಗಿದೆ
ನನ್ನನೇ ನಾನು ಮರೆತು ಮರೆತು
ಹಸಿರ ಒಡಲಲ್ಲಿ ಮಗುವಾಗಿರುವೇ
ಅಮ್ಮನ ಬಳಿ ಸಾಗಿ ಕಚಗುಳಿ ಇಟ್ಟಿಹುದೇ
ಚಿರಿಪಿರಿ ಕಿರಿ ಕಿರಿ ಇಲ್ಲದಯೇ
ವನಸಿರಿ ನಡುವಿನ ಆಗಸದಿ
ಚಿಲಿಪಿಲಿಗುಟ್ಟುತ ಹಾರುವ ಹಕ್ಕಿಗಳೇ
ಲಾಲಿ ಹಾಡಿ ನೆಮ್ಮದಿ ನೀಡಿರುವೆ
ಹಸಿರಿನ ಸೊಬಗಿನ ಸುಂದರಿಯೇ
ನಾನಿಲ್ಲಿಂದ ಕದಲದೆ ಕುಳಿತಿಹೆನು
ಹಸಿರಿನ ನಡುವೆಯೇ
ಮನೆಯನು ಕಟ್ಟಿ
ಬದುಕಿ ಬಾಳುವೆನು
ಇಲ್ಲೆ ಹಸಿರಿನ ಒಡಲಲಿ
ಮೈಮನ ತುಂಬಿಕೊಂಡು
ಜಗವನು ಮರೆತು ಲೀನವಾಗುವೆನು
ಬದುಕಿಗೊಂದು ಅರ‍್ತ ಬರೆದುಕೊಳುವೆನು
(ಚಿತ್ರ ಸೆಲೆ: stuartwilde.com)
ಇತ್ತೀಚಿನ ಅನಿಸಿಕೆಗಳು