ಕವಿತೆ: ಬಯಕೆ

– ಕಿಶೋರ್ ಕುಮಾರ್.

ಮನ ಮನಕು ಬೇರೆಯಿದು
ಬದುಕಿನ ಬಯಕೆ
ತಣಿದಶ್ಟು ಮುಗಿಯದ
ಮನದ ಹರಕೆ

ಬಿಟ್ಟಶ್ಟೂ ಬೆಳೆಯುವುದು
ಆಸೆಗಳ ಸಾಲು
ಕೊನೆಯಿರದ ಬಾನಿನಂತೆ
ದಣಿವಿರದ ಬಾಳು

ದಿನ ದಿನವೂ ಬದಲಾಗೋ
ಯೋಚನಾ ಲಹರಿ
ಮನವೆಂಬ ಕುದುರೆಯ
ಎಗ್ಗಿಲ್ಲದ ಸವಾರಿ

ತನದೆಂದು ನಿನದೆಂದು
ಬಡಿದಾದೋ ಮಂದಿ
ಕೊನೆಯಲ್ಲಿ ನೆನೆದಾಗ
ಇರಲಿಲ್ಲ ನೆಮ್ದಿ

ನೋವೋ ನಲಿವೋ
ಇದು ಬಾಳಿನ ಹೂರಣ
ಇಂದೋ ನಾಳೆಯೋ
ಮುಗಿಯುವ ಪಯಣ

ನಕ್ಕೊಂಡು ನಗುಸ್ಕೊಂಡು
ನಗು ಹಂಚು ಜಗಕೆ
ಎಲ್ಲರ ಮನದಲ್ಲೂ
ಇದ್ದದ್ದೇ ಈ ಬಯಕೆ.

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: