ಹನಿಗವನಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

*** ಹುಚ್ಚರು ***

ಈ ಜಗತ್ತಿನಲ್ಲಿ ಎಲ್ಲರೂ
ಒಂದು ರೀತಿಯಲ್ಲಿ ಹುಚ್ಚರು
ತಮ್ಮ ಹುಚ್ಚುತನವನ್ನು
ಒಪ್ಪಿಕೊಳ್ಳಲು
ಮನಸ್ಸೆಂದೂ ಬಿಚ್ಚರು

*** ರುಜು ***

ಅಂಗೈ ಮೇಲೆ ನೀ
ಹಾಕಿದ ರುಜು
ಅಳಿಸಿತು ಅಂದೇ
ಸ್ನೇಹ ಅಳಿಸಿದರೂ
ಹ್ರುದಯದ ಮೇಲೆ ಬರೆದ
ನಿನ್ ಹೆಸರು ಅಳಿಯದೇ
ನಾ ಬೆಂದೆ

*** ಜೀವನ ***

ಜೀವನದಲ್ಲಿ ಆಗಾಗ
ಹೇಳದೇ ಕೇಳದೇ
ಬರುತ್ತಲೇ ಇರುತ್ತವೆ ರಿಸ್ಕು
ಅಳುಕದೇ ಅಂಜದೇ
ದೈರ‍್ಯದಿಂದ ಎದುರಿಸಿ
ಸಂಬ್ರಮಿಸಬೇಕು
ಹೊಡೆದಂತೆ ಸಿಕ್ಸು

*** ಬಿಟ್ಟು ಬಿಡಿ ***

ಯಾರ‍್ಯಾರೋ ಏನೇನೋ
ಅನ್ನುತ್ತಾರೆ ನಮ್ಮಬಗ್ಗೆ
ಅದನ್ನೆಲ್ಲಾ ಬಿಟ್ಟುಬಿಡಿ
ಹೊಗಳಿಕೆಯೋ ತೆಗಳಿಕೆಯೋ
ಎಲ್ಲವೂ ಒಳ್ಳೆಯದಕ್ಕೆ
ಎಂದೊಮ್ಮೆ ನಕ್ಕುಬಿಡಿ

(ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks