ದಿಡೀರ್ ಆಲೂಗಡ್ಡೆ ಪಲ್ಯ

– ವಿಜಯಮಹಾಂತೇಶ ಮುಜಗೊಂಡ.

ಬೇಕಾಗುವ ಸಾಮಾನುಗಳು

ಆಲೂಗಡ್ಡೆ – 2 ದೊಡ್ಡದು
ಎಣ್ಣೆ – 4-5 ಚಮಚ
ಜೀರಿಗೆ – 2 ಚಮಚ
ಹಸಿ ಮೆಣಸಿನಕಾಯಿ – 2-3
ಒಣ ಕಾರದ ಪುಡಿ – 2 ಚಮಚ
ದನಿಯಾ ಪುಡಿ – 1 ಚಮಚ
ಅರಿಶಿಣ – ಚಿಟಿಕೆ
ಗರಂ ಮಸಾಲೆ – 1/2 ಚಮಚ
ಕರಿಬೇವು-ಕೊತ್ತಂಬರಿ – ಸ್ವಲ್ಪ
ಶುಂಟಿ-ಬೆಳ್ಳುಳ್ಳಿ ಪೇಸ್ಟ್ – 1/2 ಚಮಚ (ಬೇಕಿದ್ದರೆ)

ಮಾಡುವ ಬಗೆ

ಮೊದಲಿಗೆ ಆಲೂಗಡ್ಡೆಯ ಸಿಪ್ಪೆ ಸುಲಿದು ದಪ್ಪನೆಯ ಹೋಳುಗಳಾಗಿ ಕತ್ತರಿಸಿ ನೀರಿನಲ್ಲಿ ಮುಳುಗಿಸಿ ಇಟ್ಟುಕೊಳ್ಳಿ. 2 ಹಸಿ ಮೆಣಸಿನ ಕಾಯಿಯನ್ನು ಉದ್ದುದ್ದಕ್ಕೆ ಕತ್ತರಿಸಿ ಇಟ್ಟುಕೊಳ್ಳಿ.

ಒಂದು ಬಾಣಲೆಯಲ್ಲಿ 4-5 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಹಸಿ ಮೆಣಸಿನ ಕಾಯಿ, 2 ಚಮಚ ಜೀರಿಗೆ ಮತ್ತು ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಕಲಸಿಕೊಳ್ಳಿ. ಇದಕ್ಕೆ ಚಿಟಿಕೆ ಅರಿಶಿಣ ಪುಡಿ, ಉಪ್ಪು, ಕರಿಬೇವು, ಕೆಂಪು ಕಾರದ ಪುಡಿ, 2 ಚಮಚ ದನಿಯಾ ಪುಡಿ, ಚಿಟಿಕೆ ಗರಂ ಮಸಾಲೆ ಹಾಕಿ ಕಲಸಿಕೊಳ್ಳಿ. ಮಸಾಲೆ ಹೊತ್ತದಂತೆ ಉರಿ ಸಣ್ಣಗೆ ಮಾಡಿರಿ. 2 ನಿಮಿಶದ ಬಳಿಕ ಮೊದಲೇ ಕತ್ತರಿಸಿದ ಆಲೂಗಡ್ಡೆ ಹಾಕಿ, ಎಣ್ಣೆ-ಮಸಾಲೆಯ ಮಿಶ್ರಣ ಚೆನ್ನಾಗಿ ಮೆತ್ತಿಕೊಳ್ಳುವಂತೆ ತಿರುವಿಕೊಳ್ಳಿ. ಉರಿಯನ್ನು ಕೊಂಚ ಹೆಚ್ಚಿಸಿಕೊಂಡು ಚೆನ್ನಾಗಿ ಬೇಯಿಸಿ. ಇದಕ್ಕೆ ನೀರನ್ನು ಸೇರಿಸಿಕೊಳ್ಳಬೇಡಿ, ಕೇವಲ ಎಣ್ಣೆಯಲ್ಲೇ ಆಲೂಗಡ್ಡೆ ಚೆನ್ನಾಗಿ ಬೇಯುತ್ತದೆ.

ಬಾಣಲೆಯ ತಳಕ್ಕೆ ತಾಕದಂತೆ ಉರಿ ಹೊಂದಿಸಿಕೊಂಡು ಆಗಾಗ ಚೆನ್ನಾಗಿ ತಿರುವಿಕೊಳ್ಳಿ. ಆಲೂಗಡ್ಡೆ ಬೆಂದ ಬಳಿಕ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲಸಿ, ಒಲೆ ಆರಿಸಿ. ಈಗ ದಿಡೀರ್ ಆಲೂಗಡ್ಡೆ ಪಲ್ಯ ತಯಾರು. ಇದನ್ನು ಚಪಾತಿ ಇಲ್ಲವೇ ಅನ್ನ-ಸಾರಿನೊಂದಿಗೆ ಸವಿಯಬಹುದು.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks