ಕವಿತೆ: ಬದುಕಿನ ಪಾಟ

ಗುರಿಯಿರಲಿ ಇರದಿರರಿಲಿ
ನಿಲ್ಲದೀ ಓಟ
ನೀ ಕೇಳು ಕೇಳದಿರು
ಕಾದಿದೆ ದಿನಕ್ಕೊಂದು ಪಾಟ
ನೋವುಂಡು ನಲಿವುಂಡು
ಓಡಿಸೋ ಬಂಡಿ
ಎಲ್ಲರ ಮನೆ ಮನದಲ್ಲೂ
ಇದ್ದದ್ದೇ ಗಂಡಾಗುಂಡಿ
ಅದ ನೋಡು ಇದ ನೋಡು
ಎನ್ನುವ ಮನಸು
ಅದರಿಂದೆ ಓಡಿದರೆ
ನಿನಗುಳಿವುದು ಬರೀ ಕನಸು
ನೂರಾರು ಮಾತೇ ಬರಲಿ
ಕದಲದಿರಲಿ ನೋಟ
ಎಲ್ಲರಿಗೂ ಹೊಸದೆ
ಈ ಬದುಕಿನ ಓಟದ ಪಾಟ
(ಚಿತ್ರಸೆಲೆ: cainellsworth.com )

ಇತ್ತೀಚಿನ ಅನಿಸಿಕೆಗಳು