ಕವಿತೆ: ಕರುಣಾಮಯಿ ಬೂತಾಯಿ

– ಮಹೇಶ ಸಿ. ಸಿ.

ಕರುಣೆಯ ಕರುಣಾಮಯಿ ಬೂತಾಯಿ
ಎಲ್ಲರ ಕರುಣಾಮಯಿ
ಬೇದವಿಲ್ಲದೆ ತನ್ನೊಡಲೊಳಗೆ
ಕಾಪಾಡೋ ಕರುಣಾಮಯಿ, ಬೂತಾಯಿ

ಹಚ್ಚ ಹಸಿರಿನ ಮೈಸಿರಿಯವಳು
ಜರಿ ತೊರೆಗಳ ಸೇರಿ ನದಿಯಾಗಿಹಳು
ಸರೋವರ – ಸಾಗರ ಎಂತಹ ತಾಣವು
ಅದ್ಬುತ ಕರುಣಾಮಯಿ, ಬೂತಾಯಿ

ಪ್ರಾಣಿ ಪಕ್ಶಿಗಳು ಕೀಟಗಳೆನದೆ
ಸರೀಸ್ರುಪ ಜಲಚರ ನೆಲೆಸಿಹ ತಾಣವು
ಮನುಜರ ಸ್ವಾರ‍್ತಕೆ ನಲುಗುತ್ತಿದ್ದರೂ
ಈ ತಾಯಿ ಕರುಣಾಮಯಿ, ಬೂತಾಯಿ

ಮಕ್ಕಳ ಸಲಹುವ ತಾಯಿಯ ಹಾಗೆ
ಪ್ರೀತಿಯ ತೋರುವ ತಂದೆಯ ಹಾಗೆ
ಎಲ್ಲರ ತಿದ್ದುವ ಗುರುಗಳ ಹಾಗೆ
ಅವಳಂತೆ ಕರುಣಾಮಯಿ ಬೂತಾಯಿ

ಇರಲು ಜಾಗವ ನೀಡಿದ ದೇವತೆ
ತಿನ್ನಲು ಅನ್ನವ ನೀಡಿದ ಮಾತೆ
ಯಾರಿಗೂ ಬೇದ ಬಾವವ ಮಾಡದ
ನಿಸ್ವಾರ‍್ತಿ ಕರುಣಾಮಯಿ, ಬೂತಾಯಿ

ತನುವನು ಸೀಳುತ ಕ್ರೋದದಿ ಮನುಜರು
ಕ್ರೂರ ಕ್ರುತ್ಯಗಳ ಮ್ರುಗವಾಗಿಹರು
ಮುನಿಯದೆ ಎಲ್ಲವ ಸಹಿಸುವ ತಾಯಿ
ತಾಳ್ಮೆಯ ಕರುಣಾಮಯಿ, ಬೂತಾಯಿ

(ಚಿತ್ರ ಸೆಲೆ: stuartwilde.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: