ಕವಿತೆ: ಮೌನದ ಮಾತಿನ ದನಿ

– ನಿತಿನ್ ಗೌಡ.

ಕರೆಯದೆ ಕನಸಿಗೆ ಬರುವೆ ನೀನು
ತೆರೆಯೆದೆ ಕಣ್ಣನು; ಮನದಲಿ‌ ಕುಣಿವೆನು ನಾನು
ಏನೆಂದು ಬರೆಯಲಿ, ಒಲವೆಂಬ ಕಾಲಿ ಹಾಳೆಯಲಿ
ಬರೆದಶ್ಟೂ ಮುಗಿಯದ ಅದ್ಯಾಯ ನೀನು

ಕೊನೆಯಿರದ ಒಲುಮೆಯ ಚಿಲುಮೆ ನೀನು,
ಹರಿಯುತಿದೆ ಅದರಿಂದ ಎಡೆಬಿಡದೆ ಹೆಜ್ಜೇನು,
ಬಾನದಾರಿಯಲ್ಲಿ, ಹೊಳೆಯುವ ಕಾಮನಬಿಲ್ಲು‌ ನೀನು
ಅದರ ಚೆಲುವಿಗೆ ಇತಿಮಿತಿಯಿದೆಯೇನು?

ಹೊಗಳಿ ಹೊಗಳಿ ಸುಸ್ತಾದೆ ನಾನು
ಇನ್ನೂ ಹೊಗಳಿಕೆ ಬೇಕೇನು? ಸಾಕಿನ್ನು.
ಎದೆ ಬಡಿತ ಪಿಸುಗುಡುತಿದೆ; ನಿನ್ನ ಹೆಸರೇಳಲು
ಹೇಳಲೇ ಹೇಳು ನೀ? ನಸು ನಗುತಿರುವೆ ಏಕೆ

ಮೌನದ ಮಾತಿಗೆ ದನಿಯಾಗು ನೀನು
ದಣಿವರಿಯದ ಬಾಳಪಯಣಕೆ ಮೊದಲಾಗುವ ನಾವಿನ್ನು
ಈ ನಸುಕಿನ ಕನಸನು‌, ನನಸಾಗಿಸು ನೀನು
ನಮ್ಮ ಬಾಳ ಪಯಣವ ಹಸನಾಗಿಸು ಬಾ ಇನ್ನು

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks