ವಚನಗಳು

– .

ದೇವರು. ಪ್ರಾರ‍್ತನೆ, ಕೋರಿಕೆ, prayer, god

 

***ಮಿತಿಮೀರಿ***

ಇತಿಮಿತಿಯನರಿಯದೇ
ಮತಿಬ್ರಮೆಗೊಂಡವರಂತೆ
ಮಿತಿಮೀರಿ ವರ‍್ತಿಸಿದರೆ
ಪತಿತಪಾವನ ಮ್ರುಡರೂಪಿ
ಶ್ರೀ ತರಳಬಾಳು ಸದ್ಗುರುವಿನ
ಕ್ರುಪೆಯು ದೊರೆಯಲಾರದಯ್ಯ

***ದವಸವ***

ಜೀವನವೆಂಬ ಒರಳಿನ ಕಲ್ಲಿನಲಿ
ಅನುಬವದ ಒನಕೆ ಹಿಡಿದುಕೊಂಡು
ಶ್ರೀ ತರಳಬಾಳು ಸದ್ಗುರುವ ನೆನೆದು
ನೋವು ನಲಿವುಗಳ ದವಸವ ಕುಟ್ಟುತ
ಬಾಳನು ಹದಗೊಳಿಸುವವರೇ ಶರಣರು

***ಏನು?***

ಸದ್ವಿಚಾರಗಳರಿಯದೇ
ವೇದಗಳೋದಿದರೇನು?
ಸದ್ಬಾವನೆಯ ಹೊಂದದೇ
ಪಾದಪೂಜೆಯ ಮಾಡಿದರೇನು?
ಚಿತ್ತಶುದ್ದಿಯು ಇಲ್ಲದೇ
ಪಾದೋದಕ ಸೇವಿಸಿದರೇನು?
ಸಹಬಾಳ್ವೆಯ ಪಾಟ ಕಲಿಯದೇ
ಮಹಾದೇವನ ಬಜಿಸಿದರೇನು?
ಶಿವಶರಣರ ತತ್ತ್ವಗಳ ಪಾಲಿಸದೇ
ಶ್ರೀ ತರಳಬಾಳು ಸದ್ಗುರುವ ಶಿಶ್ಯರಾದರೇನು?

 

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *