ಕವಿತೆ: ಸಂಯುಕ್ತ ಸಂಕ್ರಾಂತಿ

– ಮಂಜುಳಾ ಪ್ರಸಾದ್.

ಸಂಕ್ರಾಂತಿ, Sankranti

ಸಂಕ್ರಮಣ ಕಾಲಕೆ ಸಂಗರ‍್ಶ ತೊರೆದು
ಸಂಕುಚಿತ ಮನದ ಸಂಕೋಲೆ ಕಳಚಲಿ,
ಸಂಕೀರ‍್ಣ ಜಗದ ಸಂಬಾವ್ಯ ಪ್ರೀತಿಗೆ
ಸಂಕ್ರಾಂತಿ ಹಬ್ಬವು ಸಂಪ್ರತಿ ಆಗಲಿ!

ಸಂಪ್ರದಾಯ ಉಳಿದು ಸಂಪ್ರೀತಿ ಮೂಡಿಸಿ
ಸಂಪ್ರೋಕ್ತ ಮನದಿ ಸಂಸ್ಕ್ರುತಿ ಕಾಣಲಿ,
ಸಂಬ್ರಾಂತಿ ಕಾಣದ ಸಂಕುಚಿತ ಜನರಿಗೆ
ಸಂವೇದ್ಯ ಮಾಡುತ ಸಂತುಶ್ಟಿ ಬೆಳೆಯಲಿ!

ಸಂಕಲೆ ಬಿಡುಗಡೆಗೆ ಸಂಚಯಿಸಿ ಬುದ್ದಿಯ
ಸಂಬಾವ್ಯ ಗೌರವ ಸಂವರ‍್ದನೆ ಮಾಡಿಸಲಿ,
ಸಂಯುಕ್ತ ಬಾಂದವ್ಯ ಸಂಗಮಿಸಿ ಬವಿತದಿ
ಸಂಪತ್ತು ವರ‍್ದಿಸಿ ಸಂತೋಶ ಉಳಿಯಲಿ!

( ಚಿತ್ರ ಸೆಲೆ: apk-cloud.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: