ಕವಿತೆ: ಮನದ ಕವಿತೆ

– ಮಹೇಶ ಸಿ. ಸಿ.

ಮನದ ಕವಿತೆಯ ನಾ
ಏನೆಂದು ಬರೆಯಲಿ?
ಬರೆದಿಹ ಪುಟವ
ನಾನೆಂದು ತೆರೆಯಲಿ?

ಏಕಾಂತದಲ್ಲಿ ಬರೆದಿರುವೆ ನಾನು
ತೆರೆದಿಡಲೆ ಆ ಪುಟಗಳ
ಓದುವೆಯಾ ನೀನು?
ಎಲ್ಲವೂ ನಿನಗಾಗಿ,
ನಿನ್ನ ನೆನಪಾಗಿ..

ಓ ಗೆಳತಿ ಕೇಳುವೆಯ
ನಿನ್ನೀ ಇನಿಯನಾ ಗೀತೆ,
ಹ್ರುದಯದೊಳು ಬರೆದಿರುವೆ,
ಸಂತಸದಿ ಬರೆದಿಹೆನು
ನಮ್ಮೊಲವ ಗೀತೆ
ಇರಲಿ ಹೀಗೆಯೇ ಸದಾ!

ಪ್ರೀತಿಯ ಅಲೆಯಲ್ಲಿ
ತೇಲುತಾ ಇಬ್ಬರೇ
ಹೋಗುತ್ತಿದ್ದ ಆ ಗಳಿಗೆ!

ಸಿಹಿ ತಿಂಡಿಯ ಹಾಗೆ
ಒಲವಿತ್ತು ನಿನ್ನ ಮನದಲ್ಲಿ
ಬರೆದಿಟ್ಟೆ ಆ ನೆನಪ!

ಸುತ್ತಲಿಲ್ಲ ನಾವು
ಆ ಪಾರ‍್ಕು – ಗೀರ‍್ಕು
ದೂರವೇ ಅಂದು ನಮ್ಮಿಬ್ಬರ ಸರಕು..

ಆಸೆಗಳು ತುಂಬಿತ್ತು
ಅರಗಿನ ಅರಮನೆಯಲ್ಲಿ
ವಿಶಾದವಿದೆ ನೋಡೀಗ ಕೊನೆಯಲ್ಲಿ,

ಮದುರ ಗಳಿಗೆಯು ಇಂದು
ನಮ್ಮ ಬಂದಿಸಿದೆ,
ಪ್ರೀತಿಯ ಕೊನೆ ಪುಟವು ತಾ ಮುಚ್ಚದೆ,
ಎಲ್ಲವೂ ನಿನಗಾಗಿ,
ನಿನ್ನ ನೆನಪಾಗಿ

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *