ನುಗ್ಗೆಸೊಪ್ಪಿನ ಹುರಿದ ಮೊಟ್ಟೆ
ಏನೇನು ಬೇಕು
ಮೊಟ್ಟೆ – 4
ಹಸಿ ಮೆಣಸಿನಕಾಯಿ – 3
ಈರುಳ್ಳಿ – 2 (ದೊಡ್ಡ ಗಾತ್ರದ)
ಬಿಡಿಸಿದ ನುಗ್ಗೆ ಸೊಪ್ಪು – ಒಂದು ಹಿಡಿ
ಸಾರಿನ ಪುಡಿ – ರುಚಿಗೆ ಬೇಕಾದಶ್ಟು
ಉಪ್ಪು – ರುಚಿಗೆ ಬೇಕಾದಶ್ಟು
ಮಾಡುವ ಬಗೆ
ಒಂದು ಬಾಣಲೆಗೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ, ಕಾದ ಎಣ್ಣೆಗೆ ಸಣ್ಣದಾಗಿ ಕತ್ತರಿಸಿಟ್ಟುಕೊಂಡಿದ್ದ ಈರುಳ್ಳಿ ಹಾಗೂ ಮೆಣಸಿನಕಾಯಿ ಹಾಕಿ ಬೇಯುವವರೆಗೂ ಚೆನ್ನಾಗಿ ಹುರಿಯಿರಿ. ಈಗ ಬಿಡಿಸಿಟ್ಟುಕೊಂಡಿದ್ದ ನುಗ್ಗೆಸೊಪ್ಪನ್ನು ಹಾಕಿ, ಸೊಪ್ಪಿನ ವಾಸನೆ ಹೋಗುವವರೆಗೂ ಹುರುಯಿರಿ.
ಸ್ಟವ್ ನಲ್ಲಿ ಸಣ್ಣ ಉರಿ ಮಾಡಿಕೊಂಡು, ಮೊಟ್ಟೆಗಳನ್ನು ಒಡೆದು ಸೇರಿಸಿ, ರುಚಿಗೆ ತಕ್ಕಶ್ಟು ಉಪ್ಪು ಹಾಗೂ ಸಾರಿನ ಪುಡಿ ಹಾಕಿ ತಿರುಗಿಸಿ ಹುರಿಯಿರಿ. ಸಣ್ಣ ಚೂರುಗಳಾಗುವವರೆಗೂ ಕಡಿಮೆ ಉರಿಯಲ್ಲಿ ಹುರಿಯಬೇಕು. ಈಗ ನುಗ್ಗೆಸೊಪ್ಪಿನ ಹುರಿದ ಮೊಟ್ಟೆ ರೆಡಿ.
ಇತ್ತೀಚಿನ ಅನಿಸಿಕೆಗಳು