ಕವಿತೆ: ಕಿರುಗವಿತೆಗಳು
– ನಿತಿನ್ ಗೌಡ.
ಕವಲುದಾರಿ
ಹೇಳದೆ ಉಳಿದ ಮಾತುಗಳೆಶ್ಟೋ,
ಸವೆಸದೇ ಇರದ ಹಾದಿಗಳೆಶ್ಟೋ,
ಗಮ್ಯಗಳು ಕವಲುದಾರಿಗಳಾದಾಗ,
ನಿಲ್ಲದಿರು ಎಲ್ಲಿಯೂ ಮಂಕು ಕವಿದಂತೆ
ಮೆಚ್ಚಿಸಲಾರ
ಎಲ್ಲರನು ಮೆಚ್ಚಿಸಲು ಬಯಸುವವ
ತನ್ನ ತಾ ಮೆಚ್ಚಿಸಲಾರ..
ಎಲ್ಲರೊಳು ಒಂದಾಗಿ ಬದುಕುವವ
ಜಗವ ಮೆಚ್ಚಿಸದೆ ಇರಲಾರ..?
ಮಡಿಲು
ಮಡಿಲ ಹುಡುಕುತಿದೆ, ಮನಸು;
ತಡವಾದರೂ ತರವಾಗಿ ದೊರೆದಂತಿದೆ,
ನಿನ್ನೊಲವೆಂಬ ನೆಮ್ಮದಿಯ ಸೂರು;
ಹಸನಾಗುವುದು ಇನ್ನು ನಮ್ಮ ಬಾಳು,
ಇದ ತಡೆಯುವರು ಇನ್ನಾರು
( ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು