ಕವಿತೆ: ಮುಗಿಲ ಮುತ್ತು

– ಕಿಶೋರ್ ಕುಮಾರ್.

ಮೋಡಗಳು ಕಪ್ಪಾಗಿ, ನೇಸರನ ಮರೆಮಾಚಿ
ಮಳೆ ತರುವ ಸೂಚನೆ ನೀಡಿವೆ
ಓ ಮರಗಿಡಗಳೇ ಬಳ್ಳಿಗಳೇ ಕಾದಿದೆ ನಿಮಗೆ
ಸುದಿನ, ನಿಮಗಾಗಿ ಬಂದಿದೆ ತಣ್ಣನೆಯ ದಿನ

ಸದ್ದನು ಮಾಡುತ, ಮಿಂಚನು ತೋರುತ
ಬರುತಿವೆ ನೋಡಿ ತಣ್ಣನೆಯ ಹನಿಗಳು
ಓ ನವಿಲುಗಳೇ ಕುಣಿಯಲು ಕಾಲ ಬಂದಿದೆ
ನಿಮ್ಮ ಕುಣಿತದ ಸವಿ ತೋರುವಿರಾ

ಬರಡಾದ ನೆಲಕೆ ನೀರಿನ ಮುತ್ತು
ಅದೆಶ್ಟು ದಿನಗಳಾಗಿತ್ತು ನೆಲಕೆ ತಂಪನೆರೆದು
ಬಹು ಬೇಗನೆ ಬಂದು ಮುದವ ನೀಡು
ನಿನಗಾಗೇ ಕಾದಿದೆ ಈ ನೆಲವು ಬರುವೆಯಾ

ಬೇಸಾಯ ಬೇಡಿದೆ ನಿನ್ನಯ ಬರುವಿಕೆಯ
ಬೇಸಾಯಗಾರನ ಮೊಗವ ನೋಡಿಹೆಯ
ನಿನ್ನ ದಾರಿ ಕಾದು ಕುಳಿತಿಹನು
ಬಾ ಇಳೆಗೆ ಮುತ್ತಿಟ್ಟು ನಗುವನ್ನು ಅರಳಿಸು

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: