ಹಳ್ಳಿ ಶೈಲಿಯ ಬದನೆಕಾಯಿ ಗೊಜ್ಜು
ಏನೇನು ಬೇಕು
- ಎಳೆ ಬದನೆಕಾಯಿ – 6
- ಟೊಮೇಟೊ – 3
- ಹಸಿಮೆಣಸಿನಕಾಯಿ – 6
- ಬೆಳ್ಳುಳ್ಳಿ ಎಸಳು – 8 ರಿಂದ 10
- ಕೊತ್ತಂಬರಿಸೊಪ್ಪು – ಸ್ವಲ್ಪ
- ರುಚಿಗೆ ತಕ್ಕಶ್ಟು ಉಪ್ಪು
ಮಾಡುವ ಬಗೆ
ಬದನೆಕಾಯಿಯ ಮೇಲೆ ಎಣ್ಣೆ ಸವರಿ ಸ್ಟವ್ ಮೇಲೆ ಇಟ್ಟು ಮದ್ಯಮ ಉರಿಯಲ್ಲಿ ಸುಡಬೇಕು (ಹಳ್ಳಿ ಕಡೆ ಒಲೆ ಅತವಾ ಕೆಂಡದಲ್ಲಿ ಸುಡುತ್ತಾರೆ). ನಂತರ ಟೊಮೇಟೊ ಹಾಗೂ ಹಸಿಮೆಣಸಿನಕಾಯಿಯನ್ನು ಕಡಿಮೆ ಉರಿಯಲ್ಲಿ ಹಾಗೆಯೇ ಸುಡಬೇಕು.
ತಣ್ಣಗಾದ ಬಳಿಕ ಬದನೆಕಾಯಿ ಹಾಗೂ ಟೊಮೇಟೊ ಸಿಪ್ಪೆ ಸುಲಿದು ಕಿವುಚಿ, ಜಜ್ಜಿದ ಬೆಳ್ಳುಳ್ಳಿ ಎಸಳುಗಳು, ಜಜ್ಜಿದ ಸುಟ್ಟ ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಕೊತ್ತಂಬರಿಸೊಪ್ಪು ಸೇರಿಸಿ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಬೆರೆಸಿದರೆ ಬದನೆಕಾಯಿ ಗೊಜ್ಜು ತಯಾರಾಗುತ್ತದೆ. ಬಿಸಿ ರಾಗಿಮುದ್ದೆ, ಅನ್ನದ ಜೊತೆ ತುಂಬಾ ರುಚಿಯಾಗಿರುತ್ತದೆ. ಬೇಕಿದ್ದಲ್ಲಿ ಕತ್ತರಿಸಿದ ಹಸಿ ಈರುಳ್ಳಿಯನ್ನು ಸೇರಿಸಿ ಸವಿಯಬಹುದು. ಮಳೆಗಾಲ ಅತವಾ ಚಳಿಗಾಲದಲ್ಲಿ ಸವಿಯಲು ಇದು ತುಂಬಾ ಸೊಗಸಾಗಿರುತ್ತದೆ.
ಇತ್ತೀಚಿನ ಅನಿಸಿಕೆಗಳು