ಕೋಳಿ ಹುಳಿ ಗೊಜ್ಜು

– ಕಿಶೋರ್ ಕುಮಾರ್.

ಏನೇನು ಬೇಕು

  • ಚರ್‍ಮ ತೆಗೆದ ಕೋಳಿ ಮಾಂಸ (Skinless Chicken) – ½ ಕಿಲೋ
  • ಶುಂಟಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
  • ಚಿಕನ್ ಮಸಾಲ ಪುಡಿ – 50 ಗ್ರಾಮ್
  • ಕರಿಮೆಣಸಿನಪುಡಿ – ಸ್ವಲ್ಪ
  • ಈರುಳ್ಳಿ – 2
  • ಟೊಮೆಟೋ – 4
  • ಹಸಿ ಮೆಣಸಿನಕಾಯಿ – 4
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ನಿಂಬೆಹಣ್ಣು – ½ ಹೋಳು
  • ಅರಿಶಿಣಪುಡಿ – ಸ್ವಲ್ಪ

ಮಾಡುವ ಬಗೆ

ಕಾದ ಬಾಣಲೆಗೆ ಸ್ವಲ್ಪ ಅಡುಗೆ ಎಣ್ಣೆ ಸೇರಿಸಿ ಕಾಯಿಸಿ, ನಂತರ ಕತ್ತರಿಸಿದ ಮೆಣಸಿನಕಾಯಿ ಹಾಗೂ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಚೆನ್ನಾಗಿ ಹುರಿಯಿರಿ. ಈಗ ಕತ್ತರಿಸಿದ ಟೊಮೆಟೋ ಹಾಗೂ ಶುಂಟಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 5 ನಿಮಿಶ ಹುರಿಯಿರಿ. ಇದಕ್ಕೆ ತೊಳೆದಿಟ್ಟಿದ್ದ ಕೋಳಿ ಮಾಂಸ ಹಾಗೂ ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ 10 ನಿಮಿಶ ಹುರಿಯಿರಿ. 

ಈಗ ಅರಿಶಿಣಪುಡಿ ಸೇರಿಸಿ, ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ಚಿಕನ್ ಮಸಾಲ ಹಾಗೂ ಮೆಣಸಿನಪುಡಿ ಸೇರಿಸಿ ಹೆಚ್ಚು ಗಟ್ಟಿಯಾಗದಂತೆ ನೋಡಿಕೊಳ್ಳಿ, ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ. ಈಗ ಕತ್ತರಿಸಿಟ್ಟಿದ್ದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬೇಯಿಸಿ ನಂತರ ನಿಂಬೆಹಣ್ಣನ್ನು ಹಿಂಡಿ ಕಡಿಮೆ ಉರಿಯಲ್ಲಿ ಬೇಯಿಸಿ ಆರಿಸಿ. ಬೇಕಿದ್ದರೆ ಸ್ವಲ್ಪ ಪುದೀನ ಸೊಪ್ಪನ್ನು ಉದುರಿಸಬಹುದು. ಈಗ ರುಚಿಯಾದ ಕೋಳಿ ಹುಳಿ ಗೊಜ್ಜು ಸವಿಯಲು ರೆಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks