ಕವಿತೆ: ಜೀವನ ಜ್ಯೋತಿ

– .

ಅರಿತವರು ಯಾರಿಲ್ಲ
ಹೆಣ್ಣಿನ ಮನದಾಳ
ಅರಿತರೆ ತಿಳಿಯುವರೆಲ್ಲಾ
ಹೆಣ್ಣೇ ಸ್ರುಶ್ಟಿಯ ಜೀವಾಳ

ಮನೆಗೆ ಮುದ್ದು ಮಗಳಾಗಿ
ಮನೆತನಕ್ಕೆ ಸೊಸೆಯಾಗುವಳು
ತವರಿನ ಮನೆಗೆ ಸಿರಿಯಾಗಿ
ಗಂಡನ ಮನೆಗೆ ಬೆಳಕಾಗುವಳು

ಗಂಡ ಮಕ್ಕಳ ತೊಳಲಾಟದಲ್ಲಿ
ತನ್ನೆಲ್ಲ ಸರ‍್ವಸ್ವವ ಮರೆಯುವಳು
ಅಡುಗೆ, ಮನೆಗೆಲಸದ ಜಂಜಾಟದಲ್ಲಿ
ತನ್ನೆಲ್ಲ ಜೀವನವ ಕಳೆಯುವಳು

ಮಕ್ಕಳಿಗೆ ಮೊದಲ ಗುರುವಾಗಿ
ಓದು ಬರಹ ಸಂಸ್ಕಾರವ ಕಲಿಸುವಳು
ಕಶ್ಟ ಸುಕದಲ್ಲಿ ಗಂಡನಿಗೆ ಜೊತೆಯಾಗಿ
ಸಂಸಾರ ಬಾರವ ಹೊತ್ತು ನಡೆಯುವಳು

ತನಗಾಗಿ ಎಂದು ಬಾಳದೇ
ತನ್ನವರಿಗಾಗಿಯೇ ಬದುಕುವಳು
ಏಳುಬೀಳುಗಳಲ್ಲಿ ಕೈಯ ಬಿಡದೇ
ಜೀವನ ಜ್ಯೋತಿಯಾಗುವಳು

(ಚಿತ್ರ ಸೆಲೆ: artponnada.blogspot.in)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. M âñd M says:

    ಸೊಗಸಾದ ಕವಿತೆ 🙏

ಅನಿಸಿಕೆ ಬರೆಯಿರಿ: