ನಮ್ಮ ನೇಸರ ಬಳಗ – ಒಂದು ಅಚ್ಚರಿಯ ತೊಟ್ಟಿಲು

– ನಿತಿನ್ ಗೌಡ.

ನಮ್ಮ ನೇಸರ ಬಳಗ ಒಂದು ಅಚ್ಚರಿಯ ತೊಟ್ಟಿಲು. ನಮ್ಮ ನೇಸರ ಬಳಗದ ಬಗೆಗಿನ ಇಂತಹ ಕೆಲವು ಸೋಜಿಗದ ಸಂಗತಿಗಳನ್ನು ನೋಡೋಣ.

  • ಬುದಗ್ರಹದ ಮೇಲಿನ ಒಂದು ದಿನ ಅದರ ಒಂದು ವರುಶಕ್ಕಿಂತ ಎರಡು ಪಟ್ಟು ಹೆಚ್ಚಿರುತ್ತದೆ. ಅಂದರೆ, ಬುದ ಸುತ್ತುಗ ತನ್ನ ಸುತ್ತ ಒಂದು ಸುತ್ತು ಬರುವುದರೊಳಗೆ, ಅದು ನೇಸರನ ಸುತ್ತ ಎರಡು ಬಾರಿ ಸುತ್ತು ಹಾಕಿರುತ್ತದೆ.
  • ನೆಪ್ಚೂನ್ ಸುತ್ತುಗವು(ಗ್ರಹ) , ಅದನ್ನು ನಾವು ಕಂಡುಹಿಡಿದಾಗಿನಿಂದ ಇಲ್ಲಿಯವರೆಗೆ ನೇಸರನ ಸುತ್ತ ಕೇವಲ ಒಂದೇ ಒಂದು ಸುತ್ತು ಹಾಕಿದೆ.
  • ನಮ್ಮ ನೇಸರ ಸೆಕೆಂಡಿಗೆ ನೂರು ಕೋಟಿಯಶ್ಟು ರಾಶಿಯನ್ನು ಕಳೆದುಕೊಳ್ಳ್ಳುತ್ತದೆ.
  • ನಮ್ಮ ಚಂದ್ರನು ಪ್ರತಿ ವರುಶಕ್ಕೆ ಬೂಮಿಯಿಂದ 3.8cm ನಶ್ಟು ದೂರ ಸಾಗುತ್ತಿದ್ದಾನೆ.
  • ಶುಕ್ರ ಸುತ್ತುಗವು ಬೂಮಿಯ ಲೆಕ್ಕ ತೆಗೆದುಕೊಂಡಲ್ಲಿ, ಕೇವಲ ಮೂರು ತಿಂಗಳಲ್ಲಿ ನೇಸರನನ್ನು ಸುತ್ತುಬರುತ್ತದೆ.
  • ಶನಿ ಸುತ್ತುಗದ ಸುತ್ತ ಉಂಗುರಗಳಿರುವುದು ತಿಳಿದಿರಬಹುದು. ಅಚ್ಚರಿಯೇನೆಂದರೆ, ಈ ಉಂಗುರಗಳ ತೊಂಬತ್ತು ಬಾಗ ನೀರಿನಿಂದ ಕೂಡಿರುತ್ತದೆ.
  • ಗುರು ಸುತ್ತುಗದ ಅತ್ಯಂತ ದೊಡ್ಡದಾದ ಚಂದಿರ ಗ್ಯಾನಿಮೇಡೆ ಮೇಲೆ ಉಪ್ಪು ಮಿಶ್ರಿತ ಕಡಲಿದ್ದು, ಅದರ ಮೇಲೆ ನಮ್ಮ ಬೂಮಿಯ ಮೇಲಿನ ಕಡಲಿಗಿಂತ ಹೆಚ್ಚು ನೀರಿದೆ ಎನ್ನಲಾಗಿದೆ.
  • ನೆಪ್ಚೂನ್ ಸುತ್ತುಗದ ಮೇಲಿನ ಗಾಳಿ ಗಂಟೆಗೆ 1,600 ಮೈಲಿ ವೇಗದಲ್ಲಿ ಬೀಸುತ್ತದೆ.
  • ಚಂದಿರನ ಮೇಲೆ ಹೆಜ್ಜೆ ಇಟ್ಟಲ್ಲಿ, ಆ ಹೆಜ್ಜೆಗುರುತುಗಳು, ಒಂದು ಕೋಟಿ ವರುಶಗಳವರೆಗೂ ಹೇಗಿದ್ದವೋ ಹಾಗೆ ಇರುತ್ತವೆ. ಚಂದಿರನ ಮೇಲೆ ಗಾಳಿ ಮತ್ತು ನೀರು ಇಲ್ಲದೇ ಇರುವುದೇ ಇದಕ್ಕೆ ಕಾರಣವಾಗಿದೆ.
  • ನೇಸರ ಬಳಗದಲ್ಲಿ, ಬುದ ಸುತ್ತುಗವು ನೇಸರಿನಿಗೆ ಅತ್ಯಂತ ಹತ್ತಿರವಿದ್ದರೂ ಕೂಡ, ಶುಕ್ರ ಸುತ್ತುಗವು ಅತ್ಯಂತ ಬಿಸಿಯಾಗಿರುವ ಸುತ್ತುಗವಾಗಿದೆ. ಇದಕ್ಕೆ ಕಾರಣ ಶುಕ್ರ ಸುತ್ತುಗದ ಮೇಲಿನ ಸುತ್ತಣದ ಗಾಳಿಹೊದಿಕೆ ಅತ್ಯಂತ ದಟ್ಟವಾಗಿದೆ(ಬುವಿಯ ಮೇಲಿನ ಗಾಳಿಹೊದಿಕೆಯ ದಟ್ಟಣೆಗಿಂತ ಸಾವಿರ ಪಟ್ಟು ಹೆಚ್ಚು).

( ಚಿತ್ರಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *