ಮಾಡಿ ನೋಡಿ ಬೆಣ್ಣೆಯಂತೆ ಕರಗುವ ಕೇಸರಿ ಬಾತು
– ನಿತಿನ್ ಗೌಡ.
ಏನೇನು ಬೇಕು ?
- ಚಿರೋಟಿ ರವೆ – ಒಂದು ಕಪ್ಪು
- ಸಕ್ಕರೆ – ಒಂದು ಕಪ್ಪು
- ತುಪ್ಪ – ಕಾಲು ಕಪ್ಪು
- ಏಲಕ್ಕಿ – 1
- ಲವಂಗ – 2
- ಗೋಡಂಬಿ – 12
- ದ್ರಾಕ್ಶಿ- 12
- ಅರಿಶಿಣ/ಕೇಸರಿ – ಸ್ವಲ್ಪ
- ಉಪ್ಪು – ಚಿಟಿಗೆ
ಮಾಡುವ ಬಗೆ
ಮೊದಲಿಗೆ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿಕೊಂಡು ಗೋಡಂಬಿ ಮತ್ತು ದ್ರಾಕ್ಶಿಯನ್ನು ನಡು ಒಲೆಯುರಿಯಲ್ಲಿ ಹುರಿದು ಎತ್ತಿಟ್ಟುಕೊಳ್ಳಿರಿ. ಆಮೇಲೆ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಅದಕ್ಕೆ ರವೆ ಹಾಕಿ, ಹುರಿದು ಎತ್ತಿಟ್ಟುಕೊಳ್ಳಿರಿ. ಈಗ ಜೊತೆ ಜೊತೆಗೆ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರು ಹಾಕಿ ಕುದಿಯಲು ಇಡಿ. ಈಗ ಇದಕ್ಕೆ ಚಿಟಿಗೆ ಅರಿಶಿಣ ಇಲ್ಲವೆ ಸ್ವಲ್ಪ ಕೇಸರಿ ಮತ್ತು ಚಿಟಿಗೆ ಉಪ್ಪು ಹಾಕಿರಿ. ಇದು ಕುದಿಯುತ್ತಿದ್ದಂತೆ, ಹುರಿದಿಟ್ಟುಕೊಂಡ ರವೆ ಹಾಕಿ, ಅಲ್ಲಾಡಿಸಿ. ಈಗ ನೀರು ಮಳ್ಳುತ್ತಿದ್ದಂತೆ (ನೀರಿನಾಂಶ ಕಡಿಮೆಯಾದಂತೆ), ಅದಕ್ಕೆ ಸಕ್ಕರೆ, ಏಲಕ್ಕಿ ಮತ್ತು ಲವಂಗ ಹಾಕಿ ಚೆನ್ನಾಗಿ ಅಲ್ಲಾಡಿಸಿ, ಎರಡು ನಿಮಿಶ ಕುದಿಸಿ. ಈಗ ಇದಕ್ಕೆ ತುಪ್ಪು ಹಾಕಿ ಚೆನ್ನಾಗಿ ಕಲಸಿ, ಒಂದು ನಿಮಿಶ ಬೇಯಿಸಿ ಒಲೆ ಆರಿಸಿ. ಈಗ ಬೆಣ್ಣೆಯಂತೆ ಕರುಗುವ, ಬಿಸಿ ಬಿಸಿ ಕೇಸರಿ ಬಾತು ತಯಾರಿದ್ದು, ಉಪ್ಪಿಟ್ಟಿನ ಜೊತೆ ಸವಿಯಲು ಚೆನ್ನಾಗಿರುತ್ತದೆ.
(ಚಿತ್ರಸೆಲೆ: wikimedia.org )
ಇತ್ತೀಚಿನ ಅನಿಸಿಕೆಗಳು