ಮಾಡಿ ನೋಡಿ ಟೊಮೋಟೋ ಬಾತು

– ನಿತಿನ್ ಗೌಡ.

ಏನೇನು ಬೇಕು ?

  • ಅಕ್ಕಿ – 1 ಕಪ್ಪು
  • ಟೋಮೊಟೋ – 3
  • ಈರುಳ್ಳಿ – 1
  • ದನಿಯಾ ಪುಡಿ – ಅರ್‍ದ ಚಮಚ
  • ಕಾರದ ಪುಡಿ – 2
  • ಹಸಿಮೆಣಸು – 1
  • ಉಪ್ಪು – ರುಚಿಗೆ ತಕ್ಕಶ್ಟು
  • ಅರಿಶಿಣ – ಸ್ವಲ್ಪ
  • ಸಾಸಿವೆ – ಸ್ವಲ್ಪ
  • ಸೋಂಪು – ಅರ್‍ದ ಚಮಚ
  • ಶುಂಟಿ-ಬೆಳ್ಳುಳ್ಳಿ ಗಸಿ – 1 ಚಮಚ
  • ಎಣ್ಣೆ – 3 ಚಮಚ

ಮಾಡುವ ಬಗೆ:

ಮೊದಲಿಗೆ ಒಂದು ಲೋಟ ಅಕ್ಕಿಯನ್ನು ತೊಳೆದು ಪಕ್ಕಕ್ಕಿಡಿ. ಈಗ ಕುಕ್ಕರ್ ಗೆ ಎಣ್ಣೆ ಹಾಕಿ, ಅದು ಕಾದ ನಂತರ ಸಾಸಿವೆ, ಸೋಂಪು, ಹೆಚ್ಚಿಟ್ಟುಕೊಂಡ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಶುಂಟಿ-ಬೆಳ್ಳುಳ್ಳಿ ಗಸಿ ಹಾಕಿ ಅಲ್ಲಾಡಿಸಿ. ಆಮೇಲೆ ಹೆಚ್ಚಿಟ್ಟುಕೊಂಡ ಟೋಮೊಟೋ, ಅರಿಶಿಣ ಹಾಕಿ ಬಾಡಿಸಿ. ಆಮೇಲೆ ಕಾರದ ಪುಡಿ, ದನಿಯಾ ಪುಡಿ ಹಾಕಿ ಬೇಯಿಸಿ. ಈಗ ಇದಕ್ಕೆ ಎರಡು ಕಪ್ಪು ನೀರು ಹಾಕಿ ಮತ್ತು ತೊಳೆದಿಟ್ಟುಕೊಂಡ ಒಂದು ಕಪ್ಪು ಅಕ್ಕಿ ಹಾಕಿ ಕುಕ್ಕರ್‍ ಮೂರು ಸೀಟಿ ಹೊಡೆಸಿ ಒಲೆ ಆರಿಸಿ. ಈಗ ಬಿಸಿ ಬಿಸಿ ಟೊಮೋಟೋ ಬಾತು ಸವಿಯಲು ಸಿದ್ದವಾಗಿದೆ.

(ಚಿತ್ರಸೆಲೆ: ಬರಹಗಾರರು )

 

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *