ಮಾಡಿ ಸವಿಯಿರಿ ಟೋಮೋಟೋ ಬೇಳೆ ಬಾತು
– ನಿತಿನ್ ಗೌಡ.
ಬೇಕಾಗುವ ಸಾಮಾನುಗಳು:
- ಟೊಮೋಟೋ – 4
- ತೊಗರಿ ಬೇಳೆ – ಅರ್‍ದ ಕಪ್ಪು
- ಅಕ್ಕಿ – ಅರ್‍ದ ಕಪ್ಪು
- ಉದ್ದಿನ ಬೇಳೆ – 1 ಚಮಚ
- ಕಡಲೆ ಬೇಳೆ – 1 ಚಮಚ
- ಇಂಗು – ಸ್ವಲ್ಪ
- ಜೀರಿಗೆ – 1 ಚಮಚ
- ಬೇವಿನೆಲೆ – ಸ್ವಲ್ಪ
- ಈರುಳ್ಳಿ – 1
- ಶುಂಟಿ – 1 ಇಂಚು
- ಹಸಿಮೆಣಸಿನ ಕಾಯಿ – 2
- ಸಾಸಿವೆ – 1 ಚಮಚ
- ಉಪ್ಪು ರುಚಿಗೆ ತಕ್ಕಶ್ಟು
- ಅರಿಶಿಣ – ಅರ್‍ದ ಚಮಚ
- ದನಿಯಾ ಪುಡಿ – 2 ಚಮಚ
- ಕಾರದ ಪುಡಿ – 2 ಚಮಚ
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ತುಪ್ಪ – 2 ಚಮಚ
- ಎಣ್ಣೆ – ಸ್ವಲ್ಪ
- ಗೋಡಂಬಿ – 10 ರಂದ 12
ಮಾಡುವ ಬಗೆ:
ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ ಮತ್ತು ತೊಗರಿ ಬೇಳೆ ಹಾಕಿ ತೊಳೆದಿಟ್ಟುಕೊಳ್ಳಿ. ನಂತರ ಇದಕ್ಕೆ ನೀರು ಹಾಕಿ ಒಂದು ಅರ್‍ದ ಗಂಟೆ ನೆನೆಸಿಡಿ. ಈಗ ಇದನ್ನು ಕುಕ್ಕರ್ ಗೆ ಹಾಕಿ, ನೀರು, ಉಪ್ಪು ಹಾಕಿ, 4 ಸೀಟಿ ಹೊಡೆಸಿ. ಈಗ ಬೆಂದಿರುವ ಅನ್ನ ಮತ್ತು ಬೇಳೆಯ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿರಿ. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಕಾದ ನಂತರ ಇದಕ್ಕೆ ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಗೋಡಂಬಿ ಹಾಕಿ ಕೊಂಚ ಕಂದು ಬಣ್ಣ ಬರುವವರೆಗೆ ಬಾಡಿಸಿ. ಈಗ ಇದಕ್ಕೆ ಸಾಸಿವೆ, ಈರುಳ್ಳಿ, ಇಂಗು, ಹಸಿಮೆಣಸಿನ ಕಾಯಿ, ಹೆಚ್ಚಿಟ್ಟುಕೊಂಡ ಶುಂಟಿ ಹಾಕಿ ಬಾಡಿಸಿ. ನಂತರ ಇದಕ್ಕೆ ಹೆಚ್ಚಿಟ್ಟುಕೊಂಡ ಟೋಮೋಟೋ ಹಾಕಿ, ಜೊತೆಗೆ ಇದಕ್ಕೆ ಅರಿಶಿಣ, ಉಪ್ಪು( 1 ಚಮಚ ) ಹಾಕಿರಿ. ನಂತರ ಇದಕ್ಕೆ ದನಿಯಾ ಪುಡಿ, ಕಾರದ ಪುಡಿ ಹಾಕಿ ಬಾಡಿಸಿ. ಇದಕ್ಕೆ ಒಂದೆರಡು ಕಪ್ಪು ನೀರು ಸೇರಿಸಿ ಒಂದೈದು ನಿಮಿಶ, ಹಸಿ ಗಮ ಹೂಗುವ ವರೆಗೆ ಕುದಿಸಿ. ಈಗ ಇದಕ್ಕೆ ಅನ್ನ ಮತ್ತು ಬೇಳೆಯ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಹಾಕಿ ನಡುಉರಿಯಲ್ಲಿ ಬೇಯಿಸಿ. ಈಗ ಇದರ ಮೇಲೆ ಕೊತ್ತೊಂಬರಿ ಸೊಪ್ಪು ಉದುರಿಸಿ ಸ್ವಲ್ಪ ಬೇಯಿಸಿ. ಈಗ ಇದರ ಮೇಲೆ ಒಂದು ಚಮಚ ತುಪ್ಪ ಹಾಕಿ ಕಲಸಿರಿ. ಈಗ ಬಿಸಿ ಬಿಸಿ ಟೋಮೋಟೋ ಬೇಳೆ ಬಾತು ಸವಿಯಲು ಸಿದ್ದ.
(ಚಿತ್ರಸೆಲೆ: chatgpt.com )
ಇತ್ತೀಚಿನ ಅನಿಸಿಕೆಗಳು