1 ವ್ಯಾಟಿಗೆ 200 ಲೂಮೆನ್ ಸೂಸುವ ಬೆಳ್ಗೊಳವೆ

Philips_LED

ಬೆಳಕಿನ ಸಲಕರಣೆಗಳನ್ನು ಮಾಡುವುದರಲ್ಲಿ ಮುಂಚೂಣಿಯಲ್ಲಿರುವ ಪಿಲಿಪ್ಸ್ ಕೂಟ, ಇಲ್ಲಿಯವರೆಗಿನ ಎಲ್ಲ ಬೆಳ್ಗೊಳವೆಗಳನ್ನು (tube-light) ಹಿಂದಿಕ್ಕಿ ಹೊಸ ಹುರುಪಿನ, ಅತಿ ಹೆಚ್ಚು “ಬೆಳಕು ಸೂಸೂವ ಡಾಯೋಡ್ ” (LED) ಬೆಳ್ಗೊಳವೆಗಳನ್ನು ಹೊರತರುತ್ತಿರುವುದಾಗಿ ಸುದ್ದಿಯಾಗಿದೆ. ಈಗಿರುವ LED ಗಳ ಮುಂದಿನ ತಲೆಮಾರಿದು.

ಈ ಹೊಸ ಸೊಡರುಗಳು ಈಗಿರುವ ಸೊಡರುಗಳಿಗಿಂತ ಹೆಚ್ಚಿನ ಕಸುವು ಹೊಂದಿದ್ದು, ಅಶ್ಟೇ ಮಿಂಚು ಬಳಸಿ ಹೆಚ್ಚು ಬೆಳಕನ್ನು ನೀಡುತ್ತವೆ. ಇಂದು ಜಗತ್ತಿನೆಲ್ಲೆಡೆ ಬಳಕೆಯಾಗುವ ಒಟ್ಟು ಮಿಂಚಿನಲ್ಲಿ ಬೆಳ್ಗೊಳವೆಗಳು ಬಳಸುವ ಮಿಂಚು ಸುಮಾರು 19%. ಹಾಗಾಗಿ ಕಡಿಮೆ ಮಿಂಚು ಬಳಸುವ ಇಂತಹ ಬೆಳಕಿನ ಕೊಳವೆಗಳಿಂದಾಗಿ ತುಂಬಾ ಹಣ ಉಳಿಯಲಿದೆ. ಜತೆಗೆ, ಬೆಳಕಿನ ಕೊಳವೆಗಳು ಉರಿಯುವುದರಿಂದ ಕೆಡುಕುಂಟುಮಾಡುವ ಕಾರ್ಬಕನ್-ಡಯ್-ಆಕ್ಸಯ್ಡ್ ಬಿಡುಗಡೆ ಕೂಡ ಟನ್ನುಗಟ್ಟಲೆ ಕಡಿಮೆಯಾಗಲಿದೆ.

ಈ ಹೊಸ ಬೆಳ್ಗೊಳವೆಗಳು ಪ್ರತಿ ವ್ಯಾಟಗೆ 200 ಲೂಮೆನ್ ಬೆಳಕು ಸೂಸಬಲ್ಲವು. ಈಗಿರುವವ ಹೆಚ್ಚಿನ ಬೆಳಕಿನ ಕೊಳವೆಗಳು 100  ಲೂಮೆನ್ ಬೆಳಕಶ್ಟೇ ನೀಡಬಲ್ಲವು (ಲೂಮೆನ್ ಎಂದರೆ ಬೆಳಕು ಸೂಸುವ ಪ್ರಮಾಣ. ಹೆಚ್ಚು ಲೂಮೆನ್ = ಹೆಚ್ಚು ಬೆಳಕು).

ಪಿಲಿಪ್ಸ್ ತಿಳಿಸಿರುವಂತೆ 2015 ರಲ್ಲಿ ಈ ಹೊಸ ಬೆಳ್ಗೊಳವೆಗಳು ಮಾರುಕಟ್ಟೆಗೆ ಬರಲಿವೆ. ಮೊದಲು ಕೆಲಸದೆಡೆಗಳಲ್ಲಿ ಹೊಂದುವಂತಹ ಕೊಳವೆಗಳನ್ನು ಬಿಡುಗಡೆ ಮಾಡಲಿದ್ದು, ಮನೆಗಳಿಗೆ ಹೊಂದುವಂತಹವು ಆಮೇಲೆ ಹೊರಬರಲಿವೆ ಎಂದು ಪಿಲಿಪ್ಸ್ ತಿಳಿಸಿದೆ. ಈಗಿರುವ ಬೆಳ್ಗೊಳವೆಗಳಿಗೆ ಹೋಲಿಸಿದಾಗ ಇವುಗಳ ಬೆಲೆ ಒಂಚೂರು ಹೆಚ್ಚಿಗೆ; ಆದರೆ ಈ ಹೆಚ್ಚಿನ ಬೆಲೆ ಅವುಗಳಿಂದ ಒಟ್ಟಾರೆಯಾಗಿ ಆಗುವ ಉಳಿತಾಯಕ್ಕಿಂತ ತುಂಬಾ ಕಡಿಮೆ.

(ಒಸಗೆಯ ಸೆಲೆ :- http://www.bbc.co.uk/news/technology-22106718)

 ವಿವೇಕ್ ಶಂಕರ್.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: