ನಿಮ್ಮ ಕಿರುಮಣೆಗಳು ಮಡಚುವಂತಿದ್ದರೆ?
ಇಂದು ನಮ್ಮ ಒಡನಾಡಿಗಳಾಗಿರುವ ಎಣಿಕಗಳನ್ನು (computers) ನಮ್ಮ ಬದುಕಿಗೆ ಇನ್ನೂ ಹತ್ತಿರವಾಗಿಸುವಂತಹ ಕೆಲಸಗಳು ಜಗದೆಲ್ಲೆಡೆ ನಡೆಯುತ್ತಲಿವೆ. ಇದಕ್ಕೊಂದು ಹೊಸ ಸೇರ‍್ಪಡೆ, ಹಾಳೆಗಳಂತೆ ಮಡಚಬಹುದಾದ “ಕಿರುಮಣೆ ಎಣಿಕಗಳು” (tablet computers). ಈಗಿರುವ ಎಣಿಕಗಳ ಹಾಗೂ ಸೋಕುತೆರೆ ಚೂಟಿಯುಲಿಗಳ (smartphones) ಮುಂದುವರೆದ ತಲೆಮಾರಿನಂತೆ ಈ ಮಡಚಬಹುದಾದ ಕಿರುಮಣೆಗಳು ಹೊಮ್ಮಲಿವೆ. ಕೆನಡಾದ ಕ್ವೀನ್ಸ್ ಕಲಿಕೆವೀಡಿನ ಅರಕೆಗಾರರು ಮತ್ತು ಬ್ರಿಟನ್ನಿನ ಅರೆಕೆಗಾರರು, ಇಂಟೆಲ್ ಲ್ಯಾಬನೊಂದಿಗೆ ಸೇರಿಕೊಂಡು ಇಂತಹ “ಮಡಚು ಕಿರುಮಣೆ” ಗಳನ್ನು ಹುಟ್ಟುಹಾಕಿದ್ದಾರೆ.
ಈ ಮಡಚು ಕಿರುಮಣೆಗಳನ್ನು ಮುಟ್ಟಿದರೆ ಕಾಗದದ ಹಾಳೆಗಳನ್ನು ಮುಟ್ಟಿದಂತಾಗುತ್ತದೆ. ಈ ಹಾಳೆಗಳು ತೆಳುವಾಗಿದ್ದು ಇವುಗಳನ್ನು ಹಿಂದೆ-ಮುಂದೆ ಮಡಚಬಹುದು. ಸುಮಾರು ಹತ್ತು ಹಾಳೆ (ಗಳಂತಿರುವ) ಮಿಂಪುಟಗಳನ್ನು ಒಂದು ಕಿರುಮಣೆ ಹೊಂದಿದ್ದು, ಕಾಗದದ ಹಾಳೆಗಳಂತೆ ಒಂದರ ಮೇಲೊಂದು ಇಟ್ಟುಕೊಳ್ಳಬಹುದು, ಕಾಗದಗಳನ್ನು ಅಲ್ಲಿಲ್ಲಿ ಹರಡುವಂತೆ ಹರಡಲೂ ಬಹುದು! ಅಲ್ಲದೆ, ಒಮ್ಮೆಲೇ ಹಲವು ಕಡತಗಳಲ್ಲಿ ಬರೆಯಬಹುದು; ಒಂದರಿಂದ ಇನ್ನೊಂದಕ್ಕೆ ಚಿತ್ರ ಹಾಗೂ ಬರಹಗಳನ್ನು ಕೂಡ ಹಂಚಿಕೊಳ್ಳಬಹುದು.
ಒಸಗೆಯ ಸೆಲೆ:
– ವಿವೇಕ್ ಶಂಕರ್.
ಇತ್ತೀಚಿನ ಅನಿಸಿಕೆಗಳು