ಅವ್ವನ ನೆರಳಲ್ಲಿ ಕಂದಮ್ಮನ ಕಲಿಕೆ – 1

jppic

ಆಟ, ಊಟ ಮತ್ತು ಓಟದಲ್ಲೇ ಮುಳುಗುವ ಕಂದಮ್ಮಗಳು (ಎತ್ತುಗೆಗೆ – ಉಲಿಯುವುದನ್ನು ಕಲಿಯುತ್ತಿರುವ ಎರಡೂವರೆ ವರುಶದ ಮಕ್ಕಳು) ಕಲಿಯುವ ಪರಿ ಅಚ್ಚರಿ ಮೂಡಿಸುವಂತದ್ದು! ಅಶ್ಟೇ ಅಚ್ಚರಿ ಮೂಡಿಸುವಂತದ್ದು ಒಬ್ಬ ಅವ್ವ ತನ್ನ ಕಂದನೊಂದಿಗೆ ಕಳೆಯುವ ಒಂದೊಂದು ಗಳಿಗೆಯಲ್ಲೂ ತನ್ನ ಒಡನಾಡದ ಜೊತೆಜೊತೆಯಲ್ಲೇ ಜೀವನದ ಚಳಕಗಳನ್ನು ಕಲಿಸುವುದು. ಒಮ್ಮೊಮ್ಮೆ ತನಗೆ ಅರಿವೇ ಇಲ್ಲದಂತೆ ತನ್ನ ಮಕ್ಕಳ ಕಲಿಕೆ ಮೇಲೆ ಅಪ್ಪ-ಅವ್ವ ಮತ್ತು ಮನೆ ಪರಿಸರದೆಲ್ಲರೂ ಪರಿಣಾಮ ಬೀರುತ್ತಾರೆ.

ಇಂತಹ ಕಲಿಕೆ ಪ್ರಕ್ರಿಯೆಯ ಒಳಹೊಕ್ಕು ನೋಡಿದಾಗ ನನಗನಿಸಿದ್ದನ್ನು ಒಬ್ಬ ಅವ್ವನು ತನ್ನ ಮಕ್ಕಳ ನಲ್ಕಲಿಕೆಗೆ (ಒಳ್ಳೆಯ ಕಲಿಕೆಗೆ) ಹೇಗೆ ಕೊಡುಗೆ ನೀಡಬಹುದು ಎಂದು ಬಿಡಿ ಬರಹಗಳಲ್ಲಿ ನಿಮ್ಮೊಡನೆ ಹಂಚಿಕೊಳ್ಳಬಯಸುತ್ತೇನೆ. ಆಯಕ್ಕಿಳಿದು ಗಮನಿಸಿದರೆ, ಚಿಕ್ಕ ಮಕ್ಕಳ ಮನೆಕಲಿಕೆಯಲ್ಲಿ ಎರಡು ಬಾಗಗಳು ಗೋಚರಿಸುತ್ತವೆ:

  1. ಒಂದು ಮಗು ತಾನಾಗೇ ಕಲಿಯುವುದು
  2. ಮಗುವಿನ ಅವ್ವ/ಅಪ್ಪ ಇಲ್ಲವೇ ಮನೆಯವರು ಕಲಿಸುವುದು

ಚಿಕ್ಕ ಮಕ್ಕಳು ಕಲಿಯಬೇಕಾದ ವಿಶಯಗಳು:

  • ತಿನ್ನುವುದು: ಯಾವುದನ್ನು ತಿನ್ನಬೇಕು, ತಿನ್ನಬಾರದು, ವಿವಿದ ಬಗೆಯ ತಿನಿಸುಗಳು – ಹಣ್ಣು, ತರಕಾರಿ, ಕಾಳು, ಸೊಪ್ಪು…,ತಿನ್ನುವ ಪದಾರ್‍ತಗಳ ಹೆಸರು, ಬಣ್ಣ, ಆಕಾರ, ರುಚಿ, ತಿನ್ನುವ ಬಗೆ
  • ಮಾತಾಡುವುದು: ಪದಗಳ ಉಲಿಯುವುದು, ಉಲಿದ ಪದಗಳನ್ನು ತನ್ನ ಬಯಕೆಗೆ ತಕ್ಕಾಗಿ ಬಳಸುವುದು,ಉಲಿಗಳನ್ನು ತಿಟ್ಟವಾಗಿ/ಕಯ್ಬರಹವಾಗಿ ಗುರುತಿಸಿವುದು
  • ಬಣ್ಣಗಳನ್ನು ಗುರುತಿಸುವುದು
  • ಸುತ್ತಮುತ್ತಣ ಉಸುರಿಗಳು (ಪ್ರಾಣಿಗಳು) ಮತ್ತು ಹಕ್ಕಿಗಳನ್ನು ಗುರುತಿಸುವುದು
  • ನಲ್ಬಳಕೆಗಳು (ಹಲ್ಲುಜ್ಜುವುದು, ಮೋರೆ/ಮಯ್ತೊಳೆದುಕೊಳ್ಳುವುದು…)

ಮುಂದಿನ ಬಾಗದಲ್ಲಿ ಈ ಮೇಲಿನ ಹುರುಳುಗಳನ್ನು ಒಬ್ಬ ಅವ್ವನಾಗಿ ಹೇಗೆ ಕಲಿಸುವುದು ಎಂದು ನೋಡೋಣ.

ಮದು ಜಯಪ್ರಕಾಶ್

ನಿಮಗೆ ಹಿಡಿಸಬಹುದಾದ ಬರಹಗಳು

6 Responses

  1. vivekshankar153 says:

    ಬರಹ ತುಂಬ ಚೆನ್ನಾಗಿದೆ. ನನ್ನ ಎಳೆತನ ನೆನಪು ಆಯಿತು. ಮುಂದಿನ ಬರಹಕ್ಕೆ ನಾನು ಕಾದಿರುವೆ.

  2. ನಲ್ಬಳಕೆಗಳು – ಈ ಪದಬಳಕೆ ಚೆನ್ನಾಗಿದೆ

  3. Maaysa says:

    ಬರಹ ಹಾಗು ವಿಷಯ ತುಂಬಾ ಚೆನ್ನಾಗಿದೆ . ಚಿತ್ರದ ಜತೆ ವಿವರಣೆಯನ್ ಕೊಟ್ಟಿದ್ದು ಇನ್ನೂ ಮೆರೆಗು ತಂತು ಬರಹಕ್ಕೆ.

    ಅತಿವ್ಯಾಕರಣ-ಉತ್ಸಾಹಿಯಾದ ನಾನು ಕೆಲವು ದೋಷ-ಅನ್ವೇಷ ಮಾಡಿಹೆನು. ತಪ್ಪು-ತಿಳಿಯದೇ ಒಪ್ಪಿಸಿಕೊಳ್ಳಿ .

    ೧. ‘ಒಬ್ಬ ಅವ್ವ ‘ => ಒಬ್ಬಳು ಅವ್ವ
    ೨. ‘ಒಡನಾಡದ’ => ಒಡನಾಟದ
    ೩. ‘ಮತ್ತು ಮನೆ ಪರಿಸರದೆಲ್ಲರೂ ಪರಿಣಾಮ ಬೀರುತ್ತಾರೆ.’ = ಮತ್ತು ಮನೆಯ ಪರಿಸರದೆಲ್ಲರೂ ಪರಿಣಾಮವನ್ನು/ಗಳನ್ನು ಬೀರುತ್ತಾರೆ.

    ಮುನ್ತಾದವು.

    ಯಾಕೋ ವಿಭಕ್ತಿ ತಪ್ಪುಗಳನ್ನು ಮಂದಿ ಹೆಚ್ಚು-ಹೆಚ್ಚು ಮಾಡುತ್ತಿದ್ದಾರೆ. ಕನ್ನಡದಲ್ಲಿ ವಿಭಕ್ತಿ-ಪಲ್ಲಟ ಅತಿಯಾಗಿದೆಯೇ ಇತ್ತೀಚಿಗೆ?

  4. ಬರಹ ತುಂಬಾ ಚೆನ್ನಾಗಿದೆ. ’ಅವ್ವ’ ಪದ ಬಳಕೆ ಇಡೀ ಬರಹಕ್ಕೆ ತನ್ನತನ/ಕನ್ನಡತನ ತಂದು ಕೊಟ್ಟಿದೆ.

  5. Madhu Kc says:

    ಮಾಯ್ಸ ಅವರೆ, ನೀವು ತಿಳಿಸಿದ ವಿಶಯಗಳಿಗೆ ನನ್ನಿ. ಮುಂದೆ ಬರೆಯುವಾಗ ಅದರ ಬಗ್ಗೆ ಹೆಚ್ಚು ಗಮನವಹಿಸುತ್ತೇನೆ.

    ವಿವೇಕ್, ಪ್ರಶಾಂತ್ ಮತ್ತು ಬರತ್ ಅವರೆ, ನಿಮ್ಮ ಉತ್ತೇಜನಕ್ಕೆ ನನ್ನಿ. ಹೀಗೇ ಬೆಂಬಲ ನೀಡುತ್ತಿರಿ.

  1. 30/05/2013

    […] ಕಳೆದ ಬರಹದಲ್ಲಿ ತಿಳಿಸಿದಂತೆ ಚಿಕ್ಕ ಮಕ್ಕಳ ಬೇಕು-ಬೇಡಗಳನ್ನು ಈಡೇರಿಸುವಾಗ ಅವ್ವನಾದವಳು ತನ್ನ ಅರಿವಿಗೆ ಬಾರದಂತೆಯೇ ಸಹಜವಾಗಿ ಒಬ್ಬ ಕಲಿಸುಗಳಾಗಿಬಿಡುತ್ತಾಳೆ. ಈ ಗುಟ್ಟನ್ನು ಅರಿತು, ಅವ್ವಂದಿರು ಮಕ್ಕಳೊಡನೆ ನಡೆಸುವ ಆಟ-ಊಟ-ಪಾಟದ ಸಹಜ ಒಡನಾಟಗಳಲ್ಲಿ ಮಕ್ಕಲಿಕೆ (ಮಕ್ಕಳ ಕಲಿಕೆ) ಕುರಿತು ಈ ಮೂರು ವಿಚಾರಗಳನ್ನು ಗಮನಿಸಬೇಕು, […]

ಅನಿಸಿಕೆ ಬರೆಯಿರಿ:

%d bloggers like this: