ಹೊಸಗಾಲದ ನಲ್ಸಾಲು

– ಬರತ್ ಕುಮಾರ್.

modern-art-watercolor-portrait-color-brains-head-exploding-drip-dribble-splatter-splash-ink-spill-painting_large
ಒಳನೋಟಗಳು ಹೇಗೆ ಉಕ್ಕುವವೋ?
ವಿಶಯವಾವುದೇ ಇರಲಿ
ಮಿದುಳು ಮಲಗುವುದೇ ಇಲ್ಲ
ಎಚ್ಚರ ! ಎಚ್ಚರ ! ಎಚ್ಚರ !
ಮಯ್ ಓಗೊಡದೆ
ಮಿದುಳಿಗೇನು ಕೆಲಸ ?
ಅಲ್ಲ! ಮಿದುಳಿನಂತೆ ಮಯ್ಯಲ್ಲವೆ?
ತೊದಲುವ ಮಿದುಳಿಗೆ
ಮೊದಲು ಮಾತು ಕಲಿಸೋಣ
ಆಮೇಲೆ ಮಯ್
ದಾರಿಗೆ ಬರುತ್ತದೆ
ಪಣ ಪಣ ನೆಗೆಯುವ ಬಗೆಗೆ
ಪಟೀರ್ ಎಂಬ ಚಾಟಿ ಏಟು ಬೇಕೆ?
ಬೇಡ! ಹಗ್ಗವಾದರೆ ಸಾಕು
ಬಿಗಿದು ಕಟ್ಟೋಕೆ
ಗೋಜಲು ಗೋಜಲಾಗಿದ್ದರೆ ಚೆಂದ!
ಬಿಡಿಸಿದರೆ ತೀರ ಸರಳ ಎನಿಸುವುದು
ಮಿದುಳನ್ನು ಮಿದುಳಿಗೆ ಬಿಡೋಣ
ಎಲ್ಲಿಗೆ ಹೋಗುವುದೋ ನೋಡೋಣ !
ಯಾವುದಕ್ಕೂ ಕಾಯೋಣ

(ಚಿತ್ರ: http://data.whicdn.com/)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *