ಈ ಹೆಲ್ಮೆಟ್ಟಿದ್ದರೆ ದಾರಿ ತಪ್ಪಲಾರಿರಿ!
ಬಯ್ಕು ಓಡಿಸೋ ಹುಚ್ಚಿನಿಂದ ಕಾಡಿನಲ್ಲೆಲ್ಲೋ ಸಿಕ್ಕು ಹಾಕಿಕೊಂಡು ದಾರಿ ತಿಳಿಯದೆ ’ದಾರಿ ಕಾಣದಾಗಿದೆ ರಾಗವೇಂದ್ರನೆ’ ಎಂದು ದೇವರ ನೆನೆಸಿಕೊಳ್ಳುವಂತ ಪಾಡು ಈಗ ಇಲ್ಲವಾಗಿದೆ. ರಶಿಯಾದ ಅರಕೆಗಾರರು ಇದೀಗ ಹೊರತಂದಿದ್ದಾರೆ ಹೊಚ್ಚ ಹೊಸ ತಲುಪುದಾರಿ ಹೊಂದಿರೋ ತಲೆಕಾಪು (ಹೆಲ್ಮೆಟ್). ಲಯ್ವ್ ಮ್ಯಾಪ್ ಎಂಬ ಹೆಸರಿನ ಈ ತಲೆಕಾಪು ಬಣ್ಣ-ಬಣ್ಣದ, ಅರೆಪಾರಕ ತಿಟ್ಟ ಹಾಗೂ ವಿಸೋರ್ (visor) ಎಂಬ ಪದಗಳು ಕಾಣುವ ಹಲಗೆ ಹೊಂದಿದೆ. ಈ ಹಲಗೆಯ ಮೂಲಕ ಆಗಿನ ಹೊತ್ತು, ನಿಮ್ಮ ಬಂಡಿಯ ವೇಗ ಹಾಗೂ ನೀವು ಹೋಗಬೇಕಾಗಿರೋ ದಾರಿಯ ವಿವರಗಳನ್ನು ಅರಿಯಬಹುದಾಗಿದೆ.
ಇದು ಕೆಲಸ ಮಾಡುವ ಬಗೆ ಹೀಗಿದೆ ನೋಡಿ: ಇದರ ಮೇಲ-ಮುಂಬಾಗದಲ್ಲಿ ಒಂದು ಬೆಳಕಿನ ತಿಳಿಕ (light sensor) ಇದ್ದು, ಹೊರಗಡೆಯ ಬೆಳಕಿಗೆ ತಕ್ಕಂತೆ ತೋರ್‍ಕೆಯನ್ನು (display) ಬದಲಾಯಿಸುತ್ತದೆ. ಒಳಗಡೆ ಕಿವಿಗಳಿಗೆ ಹೊಂದುಕೊಳ್ಳುವಂತ ಕಿವಿಯುಲಿ (earphone) ಹಾಗೂ ಬ್ಯಾಟರಿ, ಕೆಳಬಾಗದಲ್ಲಿ ಒಂದು ಪುಟ್ಟ ಮಯ್ಕ್ರೋಪೋನ್ ಅಳವಡಿಸಲಾಗಿದೆ. ಹಿಂದಗಡೆ ಒಂದು ಚಿಕ್ಕತೋರ್‍ಕೆ (micro display), ಮಿನ್ನಿನ ಹಲಗೆ (electronic board) ಜೋಡಿಸಲ್ಪಟ್ಟಿವೆ.
ಹಾಗೆನೇ ಎಲ್ಲಕ್ಕಿಂತ ಮುಕ್ಯವಾದ ಕೆಲಸ ಮಾಡುವ ಸಲಕರಣೆ ಮಿಂಚೆಣಿ ಕಯ್ವಾರ (digital compass) ತಲೆಕಾಪಿನಲ್ಲಿದ್ದು, ಇದೇ ನಿಮಗೆ ದಾರಿ ತೋರಿ ಮುನ್ನಡೆಸುತ್ತದೆ.
ಹಾಗಾದರೆ ಇದರ ಬೆಲೆ ಎಶ್ಟೆಂದು ಕೇಳ್ತಿರಾ ? ಇದರ ತಯಾರಕರು ಹೇಳುವಂತೆ ಸದ್ಯಕ್ಕೆ 2 ಸಾವಿರ ಡಾಲರ್ ಅಂದರೆ ಸುಮಾರು 1 ಲಕ್ಶ 2 ಸಾವಿರ ರೂಪಾಯಿಗಳು! ನಮ್ಮಲ್ಲಿ ಈ ಬೆಲೆಗೆ ಎರಡು ಬಯ್ಕುಗಳನ್ನೇ ಕೊಂಡುಕೊಳ್ಳಬಹುದು ಅಲ್ಲವೇ ? ಹೊಸ ಚಳಕಗಳು ಹಾಗೆನೇ ಮೊದಲಿಗೆ ತುಟ್ಟಿ, ಆಮೇಲೆ ಅವುಗಳಲ್ಲಿ ಹಲವು ಏಳಿಗೆಗಳಾಗಿ ನಮಗೆ ಎಟುಕುವಂತ ಬೆಲೆಗಳಿಗೆ ದೊರೆಯುತ್ತವೆ. ಅಂತಹ ಹೊತ್ತಿಗೆ ಕಾದು ನೋಡೋಣ.
ಇದರಲ್ಲಿ ಗೂಗಲ್ ಮ್ಯಾಪ್ ತರಹದ ತಂತ್ರಜ್ಞಾನವನ್ನು ಅಳವಡಿಸಿದ್ದಾರಾ?
ಗೂಗಲ್ ಮ್ಯಾಪ್ ತರಹ ಎಂದರೆ ಹೇಗೆ? ಸ್ವಲ್ಪ ಬಿಡಿಸಿ ಹೇಳಿ ಮಹೇಶ್ ಅವರೇ?
ಗೂಗಲ್ ಮ್ಯಾಪ್ ನಲ್ಲಿ ಎರಡು ಪ್ರದೇಶಗಳನ್ನು ಕೊಟ್ಟರೆ ಅವುಗಳ ನಡುವಿನ ದಾರಿಯನ್ನು ಅದು ತೋರಿಸುತ್ತದೆ. ಉದಾಹರಣೆಗೆ https://maps.google.co.in/maps?q=Kumta,+Karnataka+to+Bijapur,+Karnataka&saddr=Kumta,+Karnataka&daddr=Bijapur,+Karnataka&hl=en&ll=15.188784,74.542236&spn=6.008943,10.755615&sll=13.941916,75.552699&sspn=0.094465,0.168056&geocode=FXcj3AAda4pvBCljxpanECa8OzGKZndtmvYUwg%3BFdS2AAEdDFODBClvcKqYfVXGOzHS6I9OeaHU7Q&oq=Kumta+to+Bija&t=h&z=7 ಇದು ಕುಮಟಾ ಮತ್ತು ಬಿಜಾಪುರಕ್ಕೆ ಇರುವ ದಾರಿಯನ್ನು ತೋರಿಸುತ್ತದೆ. ಅದೇ ರೀತಿ ನಮ್ಮ ಮೊಬೈಲ್ ನಲ್ಲಿರುವ ಮ್ಯಾಪ್ ಅಪ್ಲಿಕೇಷನ್ ಕೂಡಾ ನಮ್ಮ ಈಗಿರುವ ಸ್ಥಳದಿಂದ ಮುಂದಿನ ಹಾದಿಯನ್ನು ತೋರಿಸುತ್ತದೆ. ಅದೇ ತಂತ್ರಜ್ಞಾನವನ್ನು ಈ ಹೆಲ್ಮೆಟ್ ಗೆ ಅಳವಡಿಸಿದ್ದಾರೆಯೇ?
ಮಹೇಶ್ – ಈ ಗೂಗಲ್ ಮ್ಯಾಪ್ ನ ಅಳವಡಿಕೆ ಇದರಲ್ಲಿ ಸದ್ಯಕ್ಕೆ ಇಲ್ಲವೆನಿಸುತ್ತದೆ. ಮುಂದಿನ ದಿನಗಳಲ್ಲಿ ಬಂದರೂ ಬರಬಹುದು.