ಮಾಡಿ ನೋಡಿ ರುಚಿ ರುಚಿ ರವೆ ಇಡ್ಲಿ!

ಪ್ರೇಮ ಯಶವಂತ

Rave-idli

ರಾತ್ರಿ ಇಡೀ ನೆನೆಸಿಡುವುದು ಬೇಕಿಲ್ಲ, ರುಬ್ಬುವ ಹಾಗಿಲ್ಲ ! ಕೂಡಲೇ ಮಾಡಿ, ಆಗಲೇ ತಿನ್ನಿ

ಬೇಕಾಗುವ ಪದಾರ್‍ತಗಳು :
ಉಪ್ಪಿಟ್ಟಿನ ರವೆ – 2 ಬಟ್ಟಲು
ಗಟ್ಟಿ ಮೊಸರು – 1 ½ ಬಟ್ಟಲು
ಕೆಂಪು ಮೂಲಂಗಿ (carrot) ತುರಿ – ½ ಬಟ್ಟಲು
ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ – 3
ಕೊತ್ತಂಬರಿ ಸೊಪ್ಪು – ½ ಬಟ್ಟಲು
ಕರಿಬೇವು ಮತ್ತು ¼ ಇಂಚು ಹಸಿ ಶುಂಟಿ
ಇನೋ ಪುಡಿ (Eno powder) – 1 ಚಮಚ

ವಗ್ಗರಣೆಗೆ:
ಎಣ್ಣೆ – 2 ಚಮಚ
ಸಾಸಿವೆ – ¼ ಚಮಚ
ಉದ್ದಿನಬೇಳೆ – ½ ಚಮಚ
ಗೋಡಂಬಿ
ಕರಿಬೇವು

ಮಾಡುವ ಬಗೆ :
ರವೆಯನ್ನು ಮೊಸರಿನಲ್ಲಿ ಅರ್‍ದ ಗಂಟೆ ನೆನೆಯಿಡಿ. ಈ ಬೆರಕೆಯನ್ನು ಇನ್ನಶ್ಟು ತೆಳು ಮಾಡಲು (ಇಡ್ಲಿ ಹಿಟ್ಟಿನ ಮಂದಕ್ಕೆ ತರಲು) ನೀರು ಬಳಸಬಹುದು. ಅದಕ್ಕೆ ವಗ್ಗರಣೆಯ ಬೆರಕೆ ಮತ್ತು ಹಸಿ ಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಹಸಿ ಶುಂಟಿ, ಕೆಂಪು ಮೂಲಂಗಿ ತುರಿ ಹಾಗು ರುಚಿಗೆ ತಕ್ಕಶ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ. ಇಡ್ಲಿ ಪಾತ್ರೆಗೆ ಇಡುವ ಮುನ್ನ ಇನೋ ಪುಡಿಯನ್ನು ಒಂದು ಚಮಚದಶ್ಟು ಹಾಕಿ ಚೆನ್ನಾಗಿ ಕಲಸಿ. ಹೀಗೆ ಕಲಸಿದ ಇಡ್ಲಿ ಬೆರಕೆಯನ್ನು ಇಡ್ಲಿ ಪಾತ್ರೆಯಲ್ಲಿ 15-20 ನಿಮಿಶ ಬೇಯಿಸಿರಿ. ರುಚಿ ರುಚಿಯಾದ ರವೆ ಇಡ್ಲಿಯನ್ನು ಚಟ್ನಿಯೊಂದಿಗೆ ಸವಿಯಿರಿ.

ಇವುಗಳನ್ನೂ ನೋಡಿ

1 ಅನಿಸಿಕೆ

  1. // ಇನೋ ಪುಡಿ (Eno powder) – 1 ಚಮಚ //

    ತಿಂದಾಗ ಆಗಬಹುದಾದ ಗ್ಯಾಸ್ ತೊಂದರೆಗೆ ತಿಂಡಿಯಲ್ಲೇ ಮದ್ದೇ?!

ಅನಿಸಿಕೆ ಬರೆಯಿರಿ: