ಬರಲಿದೆ ಕೊಳವೆ ಸಾರಿಗೆ: ಇನ್ನು ಕಾರು, ಬಸ್ಸು, ರಯ್ಲೆಲ್ಲ ಮೂಲೆಗೆ?

– ಜಯತೀರ‍್ತ ನಾಡಗವ್ಡ

Picture1

ಮುಂದೊಮ್ಮೆ ಊರಿಗೆ ಹೋಗಬೇಕಾದರೆ ಜಾರುಬಂಡಿಯಂತಿರುವ ಕೊಳವೆಯಲ್ಲಿ ಕುಳಿತು ಹೋಗಬಹುದು, ಅದೂ ಬಸ್ಸು, ರಯ್ಲಿಗಿಂತ ವೇಗವಾಗಿ! ಹವ್ದು, ಮಿಂಚು ಬಂಡಿಗಳ (electrical vehicles) ಹೆಸರುವಾಸಿ ತಯಾರಕ ಟೆಸ್ಲಾ ಕಂಪನಿಯು ಇದೀಗ ಹೊಸ ತಲೆಮಾರಿನ ಸಾರಿಗೆಯನ್ನು ಜಗತ್ತಿನ ಮುಂದಿಡಲು ಹೊರಟಿದೆ. ಈ ಹೊಸ ಸಾರಿಗೆ ಏರ‍್ಪಾಟು ಕೊಳವೆಯ ಮೂಲಕವಾಗಿ ಮಂದಿಯನ್ನು ಅಮೆರಿಕೆಯ ಲಾಸ್ ಏಂಜಲಿಸ್ ನಿಂದ ಸಾನ್ ಪ್ರಾನಿಸ್ಕೊ ಪಟ್ಟಣಕ್ಕೆ ತಲುಪಿಸಬಲ್ಲದು.

ಮುಂದಿನ ಕೆಲವು ತಿಂಗಳೊಳಗೆ ಇದರ ಒಂದು ಮಾದರಿಯನ್ನು ಬಿಡುಗಡೆಗೊಳಿಸುವುದಾಗಿ ಟೆಸ್ಲಾ ಕೂಟದ ಮೇಲಾಳು (chairman) ಏಲೊನ್ ಮಸ್ಕ್ (Elon Musk) ಹೇಳಿದ್ದಾರೆ. ’ಹಾಯ್ಪರ್‍ ಲೂಪ’ ಎಂದು ಕರೆಯಲಾಗುವ ಈ ಹೊಸ ಹಮ್ಮುಗೆಯಲ್ಲಿ (project) ಪಾಲುದಾರರ ಜೊತೆ ಸೇರಿ ಕೆಲಸ ಮಾಡುವುದು ನಲಿವಿನ ವಿಶಯವೆಂದು ಮಸ್ಕ್ ಅವರು ಟ್ವಿಟರನಲ್ಲಿ ಹಂಚಿಕೊಂಡಿದ್ದಾರೆ.

ವೇಗದ ಹಾಗೂ ಕಡಿಮೆ ವೆಚ್ಚದ ಸಾರಿಗೆ ಚಳಕರಿಮೆಯನ್ನೆ ತಮ್ಮ ಕನಸಿನ ಕೂಸಾಗಿಸಿರುವ ಮಸ್ಕ್ ಕೆಲವೇ ದಿನಗಳಲ್ಲಿ ಆಸಕ್ತರಿಂದ ಹಿನ್ನುಣಿಕೆ ಪಡೆಯಲು ಸಿದ್ದವೆಂದು, ಇದನ್ನು ತೆರೆದ ಸೆಲೆಯಾಗಿ (open source) ಹೊಮ್ಮಿಸುವುದಾಗಿಯೂ ಹೇಳಿದ್ದಾರೆ. ಬ್ಲೂಮ್ಬರ‍್ಗ್ ಬಿಸಿನೆಸ್ ವೀಕ್ ಸುದ್ದಿ ಹಾಳೆಯವರೊಂದಿಗೆ ನಡೆಸಿದ ಕಾಣ್ಮೆಯಲ್ಲಿ (interview) ವಿವರಿಸಿದಂತೆ, ಈ ಹಾಯ್ಪರ್‍ ಲೂಪ್ ಕೊಳವೆ ಬಾನೋಡಗಳಿಗಿಂತ ಮಿಂಚಿನ ವೇಗದಿಂದ, ದುಬಾರಿ ಹಾಯ್-ಸ್ಪೀಡ ರಯ್ಲು ಬಂಡಿಯ ವೆಚ್ಚಕಿಂತ ಕಡಿಮೆ ಬೆಲೆಯಲ್ಲಿ ಲಾಸ್ ಏಂಜಲಿಸ್ ದಿಂದ ಸಾನ್ ಪ್ರಾನ್ಸಿಸ್ಕೊ ಪಟ್ಟಣಕ್ಕೆ ಬರಿ 30 ನಿಮಿಶಗಳಲ್ಲಿ ಮಂದಿಯನ್ನು ಸಾಗಿಸುತ್ತದಂತೆ.

ಈ ಸಾರಿಗೆಯಲ್ಲಿ ಚಿಪ್ಪುಗಳಂತೆ (pod) ಮುಚ್ಚಳಿಕೆ ಇರುವ ಕೊಳವೆಗಳನ್ನು ಸೆಳೆಗಲ್ಲುಗಳ ನೆರವಿನಿಂದ ಎತ್ತರದಲ್ಲಿ ಅಳವಡಿಸಲಾಗುತ್ತದೆ. ನೇಸರನ ಕಸುವಿನಿಂದ ಇಲ್ಲವೇ ಗಾಳಿಯೆಸಕದಿಂದ (pneumatic) ನಡೆಯುವ ಈ ಏರ‍್ಪಾಟನ್ನು ಮಂದಿಯ ದಿನ ಬಳಕೆಯ ಬಂಡಿಗಳು,ರಯ್ಲು, ದೋಣಿ-ಹಡಗು,ಬಾನೋಡಗಳ ನಂತರದ 5ನೇ ಬಗೆಯ ಸಾರಿಗೆ ಎಂದು ಕರೆದಿದ್ದಾರೆ ಮಸ್ಕ್.

ಬ್ಲೂಮ್ಬರ‍್ಗ್ ಸುದ್ದಿ ಕೂಟ ಹೊರತಂದ ಕೋಟ್ಯಾದಿಪತಿಗಳ ಪಟ್ಟಿಯಲ್ಲಿ 182 ಹಣವಂತನ ಪಟ್ಟದಲ್ಲಿರುವ ಏಲೊನ್ ಮಸ್ಕ್ ಪೆಯ್ಪಾಲ್ ಇಂಕ್  (Paypal Inc) ಎಂಬ ಮಿಂಬಲೆ ಹಣಕಾಸು ಕಂಪನಿಯನ್ನ ಹುಟ್ಟು ಹಾಕಿದವರಲ್ಲೊಬ್ಬರು.ನೇಸರ ಕಸುವಿನ ಮೇಲ್ಚಾವಣಿ ತಯಾರಕ ಸಂಸ್ತೆ ಸೋಲಾರ್‍ ಸಿಟಿ ಕಾರ್‍ಪ್ (solarcity corp)  ಮೇಲಾಳು ಕೂಡ ಇವರೆ. ಈ ಕೂಟ ಇತ್ತೀಚಿಗಶ್ಟೇ ತನ್ನ ಬೆಲೆಯನ್ನು ನಾಲ್ಕು ಪಟ್ಟು ಹೆಚ್ಚಿಸಿಕೊಂಡದ್ದು ಇನ್ನೊಂದು ವಿಶೇಶ.

ಹಾಗೇ ನೋಡಿದರೆ ಕೊಳವೆಗಳ ಮೂಲಕ ಮಂದಿಯನ್ನು ಸಾಗಿಸುವ ಈ ತರಹದ  ಹೊಳಹು (idea) ತುಂಬಾ ಹೊಸದೇನಲ್ಲ. 1908 ಮತ್ತು 1972 ರಲ್ಲಿ ಈ ಬಗೆಯ  ಕೆಲಸಗಳು ಕೆಲವೆಡೆ ನಡೆದಿದ್ದವು. ಆದರೆ ಈ ಸಾರತಿ ಹೊಳುಹಿನ ಜೊತೆ ಮಸ್ಕ್ ಅವರ ಹಣ ಸೇರಿರುವುದು ’ಕೊಳವೆ’ ಸಾಗಾಟದ ಕನಸು ನನಸಾಗುವ ಸಾದ್ಯತೆ ಹೆಚ್ಚಿಸಿದೆ.

tubular transport by tesla

  (1908 ರಲ್ಲಿ ಚಿಕಾಗೊ ಪಟ್ಟಣದ ಕಯ್ಗಾರಿಕೆಯೊಂದರಲ್ಲಿ ಡಬ್ಬಿಯಂತಿರುವ ಉದ್ದದ ಗಾಳಿಯೆಸಕದ ಕೊಳವೆಯ ಒಂದು ತುದಿಯಲ್ಲಿ ಹುಡುಗನೊಬ್ಬನನ್ನು ಮಲಗಿಸಿ ಸಾಗಿಸುವ ಹೊಳಹು)

ಮೆಟ್ರೊ, ಮೊನೊ ಸಾರಿಗೆ ಬೆಳೆಸುವಲ್ಲಿ ಗುದ್ದಾಡುವ ನಮ್ಮ ನಾಡಿನಲ್ಲಿ ಬಂದೀತೆ ಈ ಕೊಳವೆ-ಸಾರಿಗೆ? ಹಣದೊಡೆಯ ಮಸ್ಕ್ ಅವರ ಹೊಸ ಹೊಳಹುಗೆ ಇಡೀ ಜಗತ್ತಿನಂತೆ ನಾವು ಎದುರು ನೋಡೋಣ.

 (ಚಿತ್ರ: www.reason.com)

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. 06/09/2013

    […] ಹೊಮ್ಮಲಿರುವ ಕೊಳವೆ ಸಾರಿಗೆ ಹಮ್ಮುಗೆಯ ಬಗ್ಗೆ ಈ ಮುಂಚೆ ತಿಳಿಸಿದ್ದೆ. ಈ […]

  2. 01/10/2013

    […] ಕೊಳವೆ ಸಾರಿಗೆಯ ಹರಿಕಾರ ಮತ್ತು ತಾವು ಇತರರಿಗಿಂತ ಬೇರೆಯೇ (ನಮ್ಮ ಉಪ್ಪಿಯಂತೆ!) ಎಂದು ಹೊಸ ಹಮ್ಮುಗೆಗಳ ಮೂಲಕ ಯಾವಾಗಲೂ ಸುದ್ದಿಯಲ್ಲಿರುವ ಎಲೊನ್ ಮಸ್ಕ್ (Elon Musk) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರೆನೊ-ನಿಸಾನ್ ಕೂಟದ ಕಾರ‍್ಲೊಸ್ ಗೋಸ್ನರಂತೆ ಯಾವತ್ತಿಗೂ ಚುರುಕಿನ ಚಟುವಟಿಕೆಗಳಿಂದ ಕೂಡಿರುವ 42 ರ ಹರೆಯದ ಮಸ್ಕ್, ಈ ಬಾರಿ ತಾವು ಕೂಡ ತಾನಾಗೇ ಓಡುವ ಕಾರುಗಳನ್ನು ತಯಾರಿಸುವ ಹೆಬ್ಬಯಕೆಯನ್ನು ಹೇಳಿಕೊಂಡಿದ್ದಾರೆ. […]

  3. 14/01/2014

    […] ಮೋಟರ‍್ಸ್ ನ ಕೊಳವೆ ಸಾರಿಗೆ, ಕೊರಿಯಾದ ಮಡಚಿಡುವ ಕಾರುಗಳು, ಏರ‍್ಬಸ್‍ನ […]

  4. 11/08/2014

    […] ಮನದಲ್ಲಿ ಮೂಡಿರಲುಬಹುದು. ಏಲೊನ್ ಮಸ್ಕರ ಕೊಳವೆ ಸಾರಿಗೆಯು ಇತ್ತಿಚೀಗೆ ಜಗತ್ತಿನೆಲ್ಲರ […]

ಅನಿಸಿಕೆ ಬರೆಯಿರಿ: