ಮಾಡಿ ಸವಿಯೋಣ ಕಾಶಿ ಹಲ್ವ!

ಕಲ್ಪನಾ ಹೆಗಡೆ

kashi_halva

ಬೇಕಾಗುವ ಪದಾರ್‍ತಗಳು:

  • 5 ಕೆ. ಜಿ.ಕುಂಬಳಕಾಯಿ
  • 2 ಕೆ. ಜಿ. ಸಕ್ಕರೆ
  • ಚಿಟಿಕೆ ಉಪ್ಪು
  • ಅರ್‍ದ ಲೋಟ ಹಾಲು
  • 100 ಗ್ರಾಂ ತುಪ್ಪ
  • 5 ಎಸಳು ಕೇಸರಿ

ಮಾಡುವ ಬಗೆ:

ಕುಂಬಳಕಾಯಿಯನ್ನು ತುರಿದು ಬೇಯಿಸಲಿಕ್ಕೆ ಬೇಕಾಗುವಶ್ಟು ಜ್ಯೂಸನ್ನು ಉಳಿಸಿ, ಉಳಿದ ಜ್ಯೂಸನ್ನು ಚೆನ್ನಾಗಿ ಹಿಂಡಿಕೊಳ್ಳಿ. ಹಾಲನ್ನು ಹಾಕಿ 10 ನಿಮಿಶ ಬೇಯಿಸಿಕೊಳ್ಳಿ. ಚಿಟಿಕೆ ಉಪ್ಪು, ಕೇಸರಿ ಹಾಗೂ ಸಕ್ಕರೆಯನ್ನು ಹಾಕಿ ಪಾಕ ಬರುವ ತನಕ (ಪಾತ್ರೆ ಬಿಡುವ ತನಕ) ಮಿಕ್ಸ್ ಮಾಡುತ್ತಾ ಇರಿ. ತುಪ್ಪ ಹಾಕಿ ಇಳಿಸಿ. ತಯಾರಿಸಿದ ಕಾಶಿ ಹಲ್ವವನ್ನು ತಟ್ಟೆಗೆ ಹಾಕಿ ಸವಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: