ಮುಂದಿನ ವರುಶ ಕಾಲ್ಚೆಂಡು ವಿಶ್ವ ಕಪ್!
– ರಗುನಂದನ್.
ನಾಲ್ಕು ವರುಶಕ್ಕೊಮ್ಮೆ ನಡೆಯುವ ಕಾಲ್ಚೆಂಡು ವಿಶ್ವಕಪ್ ಮುಂದಿನ ವರುಶ ಬ್ರೆಜಿಲಿನಲ್ಲಿ ನಡೆಯಲಿದೆ. 12 ಜೂನ್ ಇಂದ 13 ಜುಲಯ್ ವರೆಗೂ ನಡೆಯುವ ಈ ಆಟಕೂಟದಲ್ಲಿ ಒಟ್ಟು 32 ತಂಡಗಳು ಪಾಲ್ಗೊಳ್ಳುತ್ತಿವೆ. 1978ರ ಬಳಿಕ ಮೊದಲ ಸರತಿ ತೆಂಕಣ ಅಮೇರಿಕಾದಲ್ಲಿ ವಿಶ್ವಕಪ್ ಜರುಗುತ್ತಿದ್ದು ಅಲ್ಲಿನ ಮಂದಿ ಈ ಕಾಲ್ಚೆಂಡು ಒಸಗೆಯನ್ನು (festival) ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಕಳೆದ ಸಲಿ ಸ್ಪೇನ್ ತಂಡ ನೆದೆರ್‍ಲ್ಯಾಂಡ್ಸ್ ತಂಡವನ್ನು 1-0 ಸೋಲಿಸಿ ವಿಶ್ವ ಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ವಿಶ್ವಕಪ್ ಗೆ ತಂಡಗಳನ್ನು ಆಯ್ಕೆ ಮಾಡುವ ಮುನ್ನ ಕ್ವಾಲಿಪಯರ್‍ಸ್ ಆಡಲಾಗುತ್ತೆ. ಕ್ವಾಲಿಪಯರ್‍ಸ್‍ನಲ್ಲಿ ಕಾಲ್ಚೆಂಡು ಆಡುವ ದೇಶಗಳನ್ನು ಬೇರೆ ಬೇರೆ ಗುಂಪುಗಳಾಗಿ ಬಿಡಿಸಿ ಅವರ ನಡುವೆ ಪಂದ್ಯಗಳನ್ನು ಆಡಿಸಲಾಗುತ್ತದೆ. ಅದರಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದವರು ವಿಶ್ವಕಪ್ ಗೆ ಆಯ್ಕೆಯಾಗುತ್ತಾರೆ. ಬೇರೆ ಬೇರೆ ಗುಂಪುಗಳಿಂದ ಆಯ್ಕೆಯಾದ ತಂಡಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ಗುಂಪು |
ತಂಡಗಳು |
ಆಪ್ರಿಕಾ(5) | 1. ಆಲ್ಜೀರಿಯಾ
2. ಕ್ಯಾಮರೂನ್ 3. ಗಾನಾ 4. ಅಯ್ವರಿ ಕೋಸ್ಟ್ 5. ನಯ್ಜೀರಿಯಾ |
ಏಶಿಯಾ-ಓಶಿಯಾನಿಯಾ(4) | 1. ಆಸ್ಟ್ರೇಲಿಯಾ
2. ಇರಾನ್ 3. ಜಪಾನ್ 4. ತೆಂಕಣ ಕೊರಿಯಾ |
ಯೂರೋಪ್(13) | 1. ಬೆಲ್ಜಿಯಮ್
2. ಬೋಸ್ನಿಯಾ-ಹೆರ್‍ಜಿಗೋವಿನ 3. ಕ್ರೊವೇಶಿಯಾ 4. ಇಂಗ್ಲೆಂಡ್ 5. ಪ್ರಾನ್ಸ್ 6. ಜರ್‍ಮನಿ 7. ಗ್ರೀಸ್ 8. ಇಟಲಿ 9. ಸ್ಪೇನ್ 10. ನೆದರ್‍ಲ್ಯಾಂಡ್ಸ್ 11. ಪೋರ್‍ಚುಗಲ್ 12. ರಶ್ಯಾ 13. ಸ್ವಿಟ್ಜರ್‍ಲ್ಯಾಂಡ್ |
ಬಡಗಣ ಮತ್ತು ನಡುವಣ ಅಮೇರಿಕಾ(4) | 1. ಕಾಸ್ಟ ರಿಕಾ
2. ಹೊಂಡುರಾಸ್ 3. ಯು.ಎಸ್.ಎ. 4. ಮೆಕ್ಸಿಕೊ |
ತೆಂಕಣ ಅಮೇರಿಕಾ(6) | 1. ಅರ್‍ಜೆಂಟೀನ
2. ಬ್ರೆಜಿಲ್ 3. ಕೊಲಂಬಿಯಾ 4. ಇಕ್ವೆಡಾರ್ 5. ಚಿಲಿ 6. ಉರುಗ್ವೆ |
ಯಾರು ಗೆಲ್ಲಬಹುದು ?
ಆಗಲೇ ಕಾಲ್ಚೆಂಡು ತಿಳಿವಿಗರು ಮುಂದಿನ ವಿಶ್ವಕಪ್ಪಿನಲ್ಲಿ ಯಾರು ಗೆಲ್ಲಬಹುದೆಂಬ ಮುನ್ನುಡಿಗಳನ್ನು ಆಡಲು ಶುರು ಮಾಡಿದ್ದಾರೆ. ಅವರ ಪ್ರಕಾರ ಗೆಲ್ಲುವ ಕುದುರೆಗಳಾವುವು ಎಂಬುದನ್ನು ನೋಡೋಣ.
ಜರ್‍ಮನಿ – ಈಗಿನ ತಲೆಮಾರಿನ ಒಳ್ಳೆ ಚಳಕವುಳ್ಳ ಕಾಲ್ಚೆಂಡು ಆಟಗಾರರು ಜರ್‍ಮನಿ ತಂಡದಲ್ಲಿದ್ದಾರೆ.
ಅರ್‍ಜೆಂಟೀನ – ಲಿಯೋನೆಲ್ ಮೆಸ್ಸಿ ಸುತ್ತ ಕಟ್ಟಿರುವ ತಂಡವು ಈಗ ಬಲಾಶಾಲಿಯಾಗಿದೆ.
ಬ್ರೆಜಿಲ್ – ತವರಿನಲ್ಲಿ ಆಡುತ್ತಿರುವ ಒಳಿತು ಅವರ ಕಡೆಗಿದೆ. ಒಳ್ಳೆಯ, ಹರೆಯದ ಆಟಗಾರರಿದ್ದಾರೆ.
ಸ್ಪೇನ್ – ಕಳೆದ ಸಲಿಯ ಚಾಂಪಿಯನ್‍ಗಳು. ಕ್ಸಾವಿ ಹರ್‍ನಾಂಡೇಜ್ ಇಲ್ಲದೆಯೂ ಆಡುವ ಜಾಣ್ಮೆ ಬೆಳೆಸಿಕೊಂಡಿದ್ದಾರೆ.
ಹಾಲೆಂಡ್ – ಈ ಸಲಿ ಹಾಲೆಂಡಿಗೆ ಕಶ್ಟವೆಂದೇ ಹೇಳಬೇಕು. ಆರ್‍ಯೆನ್ ರಾಬ್ಬೆನ್ ಮತ್ತು ವ್ಯಾನ್ ಪರ್‍ಸಿ ಬಿಟ್ಟರೆ ಬೇರೆ ಆಟಗಾರರು ಅಶ್ಟು ಅನುಬವ ಇಲ್ಲದವರು.
(ಚಿತ್ರ ಸೆಲೆ: 123rf.com)
1 Response
[…] ಪಾಲ್ಗೊಳ್ಳಲಿರುವ ತಂಡಗಳ ಬಗ್ಗೆ ಹಿಂದಿನ ಬರಹದಲ್ಲಿ ನೋಡಿದ್ದೆವು. ಕಳೆದ ಶುಕ್ರವಾರದಂದು ವಿಶ್ವ […]