ಹೆಸರುವಾಸಿಯಾದ ಕಂಪನಿಯೊಂದು ಸೋಲುತ್ತಿರುವುದೇಕೆ?
– ವಿವೇಕ್ ಶಂಕರ್.
ನಿಂಟೆಂಡೋ ಎಂಬುದು ಹೆಸರುವಾಸಿಯಾದ, ಹಲವು ಮಿನ್ಕೆಯ (electronic) ಮಾಡುಗೆಗಳನ್ನು ಮಾಡುವ ಕೂಟ. ಇದು ಮಕ್ಕಳಿಗಾಗಿ ಕಂಪ್ಯೂಟರ್ ಆಟಗಳನ್ನು ಉಂಟುಮಾಡುತ್ತದೆ. ಕೆಲವು ತಿಂಗಳ ಹಿಂದೆ ಈ ಕೂಟ ವಯ್-ಯೂ(Wii-U) ಮತ್ತು ನಿಂಟೆಂಡೋಲಾಂಡ್ (Nintendoland) ಎಂಬ ಮಾಡುಗೆಗಗಳನ್ನು ಬಿಡುಗಡೆ ಮಾಡಿತ್ತು. ನಿಂಟೆಂಡೋಲಾಂಡ್ ಹಲವು ಆಟಗಳಿರುವ ಒಂದು ಮಾಡುಗೆ.
ಆದರೆ ಪಯ್ಪೋಟಿಯ ಇಂದಿನ ಜಗತ್ತಿನಲ್ಲಿ ಇವರ ಮಾಡುಗೆಗಳು ಹೆಚ್ಚು ಗೆಲುವು ಕಾಣುತ್ತಿಲ್ಲ. ವಯ್-ಯೂ ಬಿಡುಗಡೆ ಮಾಡಿ ಆರು ತಿಂಗಳು ಕಳೆದರೂ ಬರಿ 4,60,000 ವಯ್-ಯೂ ಚೂಟಿಗಳು ಮಾರಾಟವಾಗಿವೆ. ಅವರು ಈ ವರುಶ ಹಾಕಿಕೊಂಡಿದ್ದ ಗುರಿಯಲ್ಲಿ ಇದು ಬರಿ 5%. ಇವರ ಎದುರಾಳಿಗಳಿಗೆ ಹೋಲಿಸಿದರಂತೂ ಇದು ತುಂಬಾ ಕಡಿಮೆ. ಸೋನಿ ಹಾಗೂ ಮಯ್ಕ್ರೋಸಾಪ್ಟ್ ಕೂಟಗಳು ೨೪ ಗಂಟೆಯೊಳಗೆ ಮಾಡುವ ಮಾರಾಟವನ್ನು ಇವರು ಒಂಬತ್ತು ತಿಂಗಳಾದರೂ ತಲುಪಲಾಗಿಲ್ಲ. ಹೆಸರುವಾಸಿಯಾದ ಕೂಟವೊಂದು ಹೀಗೆ ಸೋಲುತ್ತಿರುವುದೇಕೆ? ಇವರ ತೊಂದರೆ, ತೊಡಕುಗಳೇನು?
ನಿಂಟೆಂಡೋ ಉಂಟುಮಾಡುವ ಆಟಗಳ ಜೊತೆ ಆಟದವತ್ತಿಗೆ (gamepad) ಬರುತ್ತದೆ. ಇದು ಆಟವಾಡುವಾಗ ಬಳಸುವ ಒಂದು ನೆರವುಬಿಡಿ (accessory). ಆದರೆ ಈ ಆಟದವತ್ತಿಗೆ ಬೇಕೇ ಅಂತ ಹಲವಾರು ಕೇಳುತ್ತಿದ್ದಾರೆ. ಈ ಮಾತು ಬರಿ ಈಗಿನ ಆಟಗಳ ಬಗ್ಗೆ ಅಶ್ಟೇ ಅಲ್ಲ, ಮುಂಬರುವ ಆಟಗಳ ಬಗ್ಗೆಯೂ ಮೂಡಿ ಬಂದಿರುವ ಮಾತು. ಈ ಆಡದವತ್ತಿಗೆ ಇಲ್ಲದಿದ್ದರೆ ನಿಂಟೆಂಡೋ ಅವರ ಮಾಡುಗೆಗಳ ಬೆಲೆಯನ್ನು 200 ಡಾಲರ್ ಕಡಿಮೆ ಮಾಡಬಹುದು.
ಈಗಿರುವ ಎಕ್ಸ್-ಬಾಕ್ಸ್ (X-box) ಗೆ 500 ಡಾಲರ್ ಹಾಗೂ ಪಿ.ಎಸ್-4(PS-4)ಗೆ 400 ಡಾಲರ್ ಬೆಲೆ ಬಾಳುವ ಮಾಡುಗೆಗಳ ಮುಂದೆ ನಿಂಟೆಂಡೋ ಬಳಕೆದಾರರ ಗಮನವನ್ನು ತಟ್ಟನೆ ಸೆಳೆಯುತ್ತಾದರೂ ಅದರ ಆಟದವತ್ತಿಗೆಯ ಬೆಲೆಯೇ ಅದರ ಬೇಡಿಕೆಯನ್ನು ಕುಗ್ಗಿಸುತ್ತಿದೆ.
’ವಯ್-ಯೂ’ ಅಲ್ಲಿರುವ ತೊಂದರೆಗಳನ್ನು ಬಗೆಹರಿಸುವುದರ ಕುರಿತು ಈ ಕೂಟ ಇನ್ನೂ ಗಮನಹರಿಸದಿರುವುದು ಅವರ ಸೋಲಿಗೆ ಇನ್ನೊಂದು ಮುಕ್ಯ ಕಾರಣ. ಮಾರುಕಟ್ಟೆಯಿಂದ ಕಲಿತು, ಬಳಕೆದಾರರ ಬೇಡಿಕೆಗಳನ್ನು, ಅವರ ದೂರುಗಳನ್ನು ಕೂಡಲೇ ಗಮನಿಸಿ ಸರಿಯಾದ ಕೆಲಸ ಮಾಡದಿದ್ದರೇ ಕಂಪನಿಗಳು ಹೇಗೆ ಸೋಲು ಕಾಣುತ್ತವೆ ಅನ್ನುವುದಕ್ಕೆ ನಿಂಟೆಂಡೋ ಬಲುದೊಡ್ಡ ಎತ್ತುಗೆ.
(ತಿಟ್ಟದ ಹಾಗೂ ಒಸಗೆಯ ಸೆಲೆ: wired)
ಇತ್ತೀಚಿನ ಅನಿಸಿಕೆಗಳು