ಮಲೆನಾಡು ಶಯ್ಲಿ ಕೋಳಿ ಸಾರು

ರೇಶ್ಮಾ ಸುದೀರ್.

Koli_Saaru

ಬೇಕಾಗುವ ಪದಾರ್‍ತಗಳು

ಶುಚಿ ಮಾಡಿದ ಕೋಳಿ —— 1 ಕೆಜಿ
ನೀರುಳ್ಳಿ ————————– 2 ಗಡ್ಡೆ
ಬೆಳ್ಳುಳ್ಳಿ ————————– 1 ಗಡ್ಡೆ
ಅಚ್ಚಕಾರದಪುಡಿ ————- 4 ಟೀಚಮಚ
ದನಿಯಪುಡಿ ——————– 1 ಟೀಚಮಚ
ಅರಿಶಿನ ————————- 1 ಚಿಟಿಕೆ
ಚಕ್ಕೆ —————————— 1/2 ಇಂಚು
ಲವಂಗ ————————- 2
ಪುಲಾವ್ ಎಲೆ —————- 1

ಮಸಾಲೆ

1 ಗಡ್ದೆ ನೀರುಳ್ಳಿ, 1 ಗಡ್ದೆ ಬೆಳ್ಳುಳ್ಳಿಯನ್ನು 2ಟೀಚಮಚ ಎಣ್ಣೆಯಲ್ಲಿ ಹುರಿದುಕೊಳ್ಳಬೇಕು. ಇದಕ್ಕೆ ಚಕ್ಕೆ, ಲವಂಗ ಹಾಕಿ ಹುರಿದುಕೊಂಡು, ಕಾರದ ಪುಡಿ ಹಾಗೂ ದನಿಯ ಪುಡಿಯನ್ನು ಹಾಕಿ ಸಲ್ಪ ಬಿಸಿ ಮಾಡಿ ಕೊಳ್ಳಬೇಕು. ಈ ಮಿಶ್ರಣ ತಣ್ಣಗಾದ ನಂತರ ಮಿಕ್ಸಿ(ನುಣ್ಣಗೆ) ಮಾಡಿಕೊಳ್ಳಬೇಕು.

ಮಾಡುವ ವಿದಾನ

ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ 2 ಟೇಬಲ್ ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಅದಕ್ಕೆ ಪುಲವ್ ಎಲೆಯನ್ನು ಹಾಕಿ. ತೆಳುವಾಗಿ ಕತ್ತರಿಸಿದ ನೀರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಈಗ ಶುಚಿ ಮಾಡಿದ ಕೋಳಿಯನ್ನು ಹಾಕಿ ಅರಿಶಿನ ಮತ್ತು ಉಪ್ಪು ಹಾಕಿ. ಕೋಳಿ ನೀರು ಬಿಡುತ್ತಾ ಬರುತ್ತದೆ. ಆ ನೀರು ಆರಿದ ನಂತರ ಮಿಕ್ಸಿ ಮಾಡಿಟ್ಟ ಮಸಾಲೆ, ರುಚಿಗೆ ತಕ್ಕಹಾಗೆ ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಒಂದು ವಿಶಲ್ ಕೂಗಿಸಿ. ಕುಕ್ಕರ್ ಬಿಸಿ ಆರಿದ ನಂತರ ಸಾರು ಸಲ್ಪ ಗಟ್ಟಿ ಅಗಿದೆಯ ನೋಡಿ ಅಗಿಲ್ಲದಿದ್ದರೆ ಸಲ್ಪ ಹೊತ್ತು ಮುಚ್ಚಳ ತೆಗೆದು ಕುದಿಸಿ. ಈ ಸಾರಿಗೆ ಕಾಯಿ ಹಾಕಿಲ್ಲ. ಅಕ್ಕಿ ರೊಟ್ಟಿ ಅತವಾ ಚಪಾತಿಯೊಂದಿಗೆ ಚೆನ್ನಾಗಿ ಹೊಂದುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: