‘ಕಂಪ್ಯೂಟರ್‍’ನಲ್ಲಿ ಕನ್ನಡ ಬರವಣಿಗೆ ಎಶ್ಟು ಸುಲಬ?

ಸುನಿಲ್ ಮಲ್ಲೇನಹಳ್ಳಿ.

Kannada_Keyboard

ಕೆಲವು ದಿನಗಳ ಹಿಂದೆ ಗೆಳೆಯರೊಬ್ಬರು ನನ್ನನ್ನು ಕೇಳುತ್ತಾ ಕಂಪ್ಯೂಟರ್‍ ನಲ್ಲಿ ಕನ್ನಡದ ಅಕ್ಶರಗಳನ್ನು ಬರೆಯುವುದು ಹೇಗೆ? ಯಾವ ತಂತ್ರಾಂಶ (Software) ಅಳವಡಿಸಿಕೊಳ್ಳಬೇಕು? ಇಂಟರ್‍ನೆಟ್ ಸಹಾಯವಿಲ್ಲದೆ ಬರೆಯಬಹುದಾ? ವಿವರವಾಗಿ ತಿಳಿಸೆಂದು ಹೇಳಿದ್ದರು.

ನಾಲ್ಕಾರು ವರುಶಗಳಿಂದ ಕಂಪ್ಯೂಟರ್‍ ನಲ್ಲಿ ಕನ್ನಡ ಪದಗಳನ್ನು ನಿಯತವಾಗಿ ಬರೆಯುವುದ ಅಬ್ಯಾಸ ಮಾಡಿಕೊಂಡು ಬಂದಿರುವ ಮತ್ತು ಬರವಣಿಗೆಯನ್ನೇ ಹವ್ಯಾಸವಾಗಿರಿಸಿಕೊಂಡಿರುವ ನನ್ನಂತ ಬಹಳಶ್ಟು ಕನ್ನಡ ಬಾಂದವರಿಗೆ ಕಂಪ್ಯೂಟರ್‍ ನಲ್ಲಿ ಕನ್ನಡ ಪದಗಳನ್ನು ಬರೆಯುವುದೆಂದರೆ ಅದರಲ್ಲೇನಿದೆ ಕಶ್ಟ? ಬಹಳ ಸುಲಬವಾಗಿ ಬರೆದುಬಿಡಬಹುದು ಎಂದು ನಿಸ್ಸಂಶಯವಾಗಿ ಹೇಳುತ್ತೇವೆ. ಆದರೆ ನಿತ್ಯ ಕಂಪ್ಯೂಟರ್‍ ಬಳಸುತ್ತಿದ್ದರೂ ಕನ್ನಡದ ಒಂದು ಪದವನ್ನು ಬರೆಯಲು ಪ್ರಯತ್ನಿಸದವರು ಅತವಾ ಬರೆಯುವ ಇಚ್ಚೆ ಇದ್ದರೂ ಬರವಣಿಗೆಗಾಗಿ ಅಬಿವ್ರುದ್ದಿಪಡಿಸಿರುವ ತಂತ್ರಾಂಶಗಳ ಬಗ್ಗೆ ಪೂರ್‍ಣವಾದ ಮಾಹಿತಿ ಸಂಗ್ರಹಿಸದವರು ಇಂತಹವರಿಗೆ ಕಂಪ್ಯೂಟರ್‍ ನಲ್ಲಿ ಕನ್ನಡದ ಪದಗಳನ್ನು ಬರೆಯುವುದೆಂದರೆ ತುಸು ತ್ರಾಸದ ಕೆಲಸವೇ ಸರಿ!

2006ರ ಮದ್ಯಬಾಗದಲ್ಲಿ ನಾನು ಕಂಪ್ಯೂಟರ್‍ ಎಂಬ ಮಾಯಾ ಪೆಟ್ಟಿಗೆಯಲ್ಲಿ ಕನ್ನಡದ ಪದಗಳನ್ನು ಹೇಗೆ ಬರೆಯುವುದು ಎಂದು ತಲೆ ಕೆಡಿಸಿಕೊಂಡು, ಏನೂ ತೋಚದೆ ಸುಮ್ಮನಿದ್ದೆ. ಇದಕ್ಕೆ ಹೊಂದುವಂತೆ ಅಂತರ್‍ಜಾಲದಲ್ಲಿ (Internet) ಯಾವ್ಯಾವ ತಂತ್ರಾಂಶಗಳು ಕನ್ನಡದ ಬರವಣಿಗೆಗಾಗಿಯೇ ಜನ್ಮ ಪಡೆದುಕೊಂಡಿದ್ದಾವೆ ಎನ್ನುವ ವಿಚಾರವೂ ನನಗೆ ಆಗ ಗೊತ್ತಿರಲಿಲ್ಲ. ಒಮ್ಮೊಮ್ಮೆ ಕನ್ನಡ ರಾಜ್ಯೋತ್ಸವದ ಶುಬ ಸಂದೇಶಗಳನ್ನು ಕಳುಹಿಸುವಾಗ ‘MS Paint’ ನಲ್ಲಿ ಕನ್ನಡ ರಾಜ್ಯೋತ್ಸವದ ಶುಬಾಶಯವೆಂದು (ಕಲರ್‍ ಕಲರಾಗಿ) ಬರೆದು JPEGಗೆ ಪರಿವರ್‍ತಿಸಿ ಸ್ನೇಹಿತರಿಗೆಲ್ಲ ಇ-ಮೇಲ್ ಮಾಡುತ್ತಿದ್ದದ್ದುಂಟು!

ದಿನಗಳು ಕಳೆದಂತೆ ಗೆಳೆಯರಿಂದ ಬರಹ ಹಾಗೂ ನುಡಿ ತಂತ್ರಾಂಶಗಳ ಬಗ್ಗೆ ಅಲ್ಪ-ಸ್ವಲ್ಪ ಅರಿವು ಸಂಪಾದಿಸಿ. ಈ ಎರಡೂ ತಂತ್ರಾಂಶಗಳನ್ನು ನನ್ನ ಕಂಪ್ಯೂಟರ್‍ ನಲ್ಲಿ ಅಳವಡಿಸಿ (Install) ಕನ್ನಡದಲ್ಲಿ ಬರೆಯುವುದನ್ನು ರೂಡಿ ಮಾಡಿಕೊಂಡೆ. ಆ ಸಮಯದಲ್ಲಿ ಯೂನಿಕೋಡ್ (Unicode) ಬಗ್ಗೆ ಗೊತ್ತಿರಲಿಲ್ಲವಾದ್ದರಿಂದ ಬರಹ ಅತವಾ ನುಡಿಯನ್ನು ಉಪಯೋಗಿಸಿಕೊಂಡು ಬರೆದ ಲೇಕನಗಳನ್ನು PDF ರೂಪಕ್ಕೆ ತಂದು ಸ್ನೇಹಿತರಿಗೆ ಕಳುಹಿಸುತ್ತಿದ್ದೆ!

ನಂತರದ ದಿನಗಳಲ್ಲಿ ಬರಹ ಅತವಾ ನುಡಿಯಲ್ಲಿ ಬರೆದ ಲೇಕನಗಳನ್ನು ಯೂನಿಕೋಡ್ ರೂಪಕ್ಕೆ ಪರಿವರ್‍ತಿಸುವುದನ್ನು ಕಲಿತೆ, ಇದರಿಂದ ಬ್ಲಾಗ್ ನಲ್ಲಿ ಲೇಕನಗಳನ್ನು ಪ್ರಕಟಿಸಲು ಅನುಕೂಲವಾಯಿತು (ಬ್ಲಾಗ್ ಅನ್ನು ಕಟ್ಟಿದ್ದು ಸ್ನೇಹಿತರ ಸಹಾಯದಿಂದಲೇ!). ನೋಡು, ನೋಡುತ್ತಿದ್ದಂತೆಯೇ ಬಾಶಾ ಬರಹಗಳ ಬಗ್ಗೆ ಮಾಹಿತಿ ತಂತ್ರಜ್ಞಾನದಲ್ಲಿ ವಿವಿದ ಅವಿಶ್ಕಾರಗಳಾಗಿ ಕನ್ನಡ ಹಾಗೂ ಇನ್ನಿತರ ಬಾರತೀಯ ಬಾಶೆಗಳಲ್ಲಿ ಬರೆಯಲು ಗೂಗಲ್ ನವರು “Google Indic Transliteration” ಅನ್ನುವುದನ್ನು ಸುಲಬವಾಗಿ ಮತ್ತು ಸರಾಗವಾಗಿ ಬರೆಯುವ ರೀತಿಯಲ್ಲಿ ಅಬಿವ್ರುದ್ದಿಪಡಿಸಿದ್ದರು.

ಕೆಲವು ವರುಶಗಳ ಸಾರ್‍ತಕ ಸೇವೆಯ ನಂತರ ಈಗ್ಗೆ ಬೆರಳೆಣಿಕೆ ದಿನಗಳ ಹಿಂದೆಯಶ್ಟೆ ‘Google Indic Transliteration’ ಅನ್ನು ಅಂತರ್‍ಜಾಲ ಜಗತ್ತಿನಿಂದ ಹಿಂತೆಗೆದು ಅದಕ್ಕಿಂತಲೂ ಹೆಚ್ಚು ಸ್ನೇಹಿಯಾದ ತಂತ್ರಜ್ಞಾನವನ್ನು www.google.com/inputtools ನಲ್ಲಿ ಗೂಗಲ್ ನವರು ಅಬಿವ್ರುದ್ದಿಪಡಿಸಿದ್ದಾರೆ.

ಗೂಗಲ್ ನವರ ಈ ಹೊಸ ಉತ್ಪನ್ನದ ಬಗ್ಗೆ ಸ್ವಲ್ಪ ವಿಸ್ತಾರವಾಗಿ ಬರೆಯುವುದು ಹೆಚ್ಚು ಸೂಕ್ತವೆಂದು ನನ್ನ ಅಬಿಪ್ರಾಯ. ಏಕೆಂದರೆ ಇದರಲ್ಲಿರುವ ತಂತ್ರಜ್ಞಾನವು ಉಪಯೋಗಿಸುವವರ ಅಪ್ತ ಸ್ನೇಹಿಯಾಗಿದೆ ಮತ್ತು “Google Indic Transliteration” ಗಿಂತ ಹೆಚ್ಚು ನಿಕರ ಹಾಗೂ ಸರಾಗತೆಯನ್ನು ಹೊಂದಿದೆ ಅಲ್ಲದೆ ಇಂಟರ್‍ನೆಟ್ ಸಹಾಯವಿಲ್ಲದೆ ವರ್‍ಡ್ ಡಾಕ್ಯುಮೆಂಟ್ ಅತವಾ ನೋಟ್ ಪ್ಯಾಡ್ ನಲ್ಲಿ ಕನ್ನಡದ ಪದಗಳನ್ನು ಬರೆಯಬಹುದು.

ಗೂಗಲ್ ಇನ್ಪುಟ್ ಟೂಲ್ (Google Input Tools)ಅನ್ನು ಕಂಪ್ಯೂಟರ್‍ ನಲ್ಲಿ ಅಳವಡಿಸಿಕೊಳ್ಳುವ ವಿದಾನಗಳು;

1.  www.google.com/inputtools ಈ ಲಿಂಕ್ ಅನ್ನು ಇಂಟರ್‍ನೆಟ್ ನಲ್ಲಿ ತೆರೆದಾಗ, ಕಾಣಸಿಗುವ “on windows”ನ ಮೇಲೆ ಕ್ಲಿಕ್ಕಿಸಿ. ನಂತರ ಬರುವ Choose Your Language ಅನ್ನುವಲ್ಲಿ ನಿಮ್ಮ ಬಾಶೆಯನ್ನು ಆಯ್ಕೆ ಮಾಡಿಕೊಂಡು ತಂತ್ರಾಂಶವನ್ನು ಡವ್ನ್ಲೋಡ್ ಮಾಡಿ ನಿಮ್ಮ ಕಂಪ್ಯೂಟರ್‍ ನಲ್ಲಿ ಅಳವಡಿಸಿಕೊಳ್ಳಿ. ಅಲ್ಲಿಗೆ ಅಳವಡಿಸಿಕೊಳ್ಳುವ ಕೆಲಸ ಮುಗಿದ ಹಾಗೆ. ನಿಮ್ಮ ಕಂಪ್ಯೂಟರ್‍ ನಲ್ಲಿರುವ “ಟ್ಯಾಸ್ಕ್ ಬಾರ್‍” ಬಲ ಬದಿಯಲ್ಲಿ “EN” ಅತವಾ “KD” ಎಂದು ಇರುತ್ತೆ. “EN” ಅನ್ನು ಆಯ್ಕೆ ಮಾಡಿಕೊಂಡರೆ ಇಂಗ್ಲೀಶ್ ನಲ್ಲಿ ಬರೆಯಲು , “KD” ಅನ್ನು ಆಯ್ಕೆ ಮಾಡಿಕೊಂಡರೆ ಕನ್ನಡದಲ್ಲಿ ಬರೆಯಲು ತಂತ್ರಾಂಶವು ಅನುವುಮಾಡಿಕೊಡುತ್ತೆ.

ಬರಿ ಗೂಗಲ್ ನವರ ತಂತ್ರಾಂಶವಲ್ಲದೆ ಕನ್ನಡ ಹಾಗೂ ಇನ್ನಿತರ ಬಾರತೀಯ ಬಾಶೆಗಳ ಬರವಣೆಗೆಗೆ ಹುಟ್ಟಿಕೊಂಡಿರುವ ವಯ್ವಿದ್ಯ ರೀತಿಯ ತಂತ್ರಾಂಶಗಳನ್ನು ಈ ಕೆಳಗೆ ನಮೂದಿಸಿರುವ ಬೇರೆ,ಬೇರೆ ವೆಬ್ ಲಿಂಕ್ ಗಳಿಂದ ಡವ್ನ್ಲೋಡ್ ಮಾಡಿಕೊಳ್ಳಬಹುದು.

2. www.baraha.com (ಇದು ಕರ್‍ನಾಟಕದಲ್ಲಿ ಹೆಚ್ಚು ಜನಪ್ರಿಯವಾದ ಮತ್ತು ಬಹಳಶ್ಟು ಕನ್ನಡ ಬರಹಗಾರರು ಉಪಯೋಗಿಸುವ ವೆಬ್ ತಾಣ. ಬರಹ ಡಾಟ್ ಕಾಮ್ ನಲ್ಲಿ ತಂತ್ರಾಂಶದ ಜೊತೆ ಇಂಗ್ಲೀಶ್ ಪದಗಳಿಗೆ ಕನ್ನಡ ಪದಗಳನ್ನು ತಿಳಿಸುವ “ಕನ್ನಡ ನಿಗಂಟು” ಕೂಡ ಇದೆ, ಅದಲ್ಲದೆ ಓದಲು ಸಾಕಶ್ಟು ಕನ್ನಡದ ಬ್ಲಾಗ್ ಬರಹಗಳು ಸಹ ಇಲ್ಲಿವೆ)

3. www.quillpad.in

4. kannada.indiatyping.com

5. www.karunadu.gov.in

ಇಲ್ಲಿಯವರೆಗೂ ಕಂಪ್ಯೂಟರ್‍ ಗಾಗಿ ಅಬಿವ್ರುದ್ದಿಪಡಿಸಿರುವ ಕನ್ನಡ ತಂತ್ರಾಂಶಗಳ ಬಗ್ಗೆ ತಿಳಿದುಕೊಂಡೆವು. ಅದೇ ರೀತಿ ಮೊಬಯ್ಲ್ ಗಳಲ್ಲಿ ಕನ್ನಡ ಬರಹವನ್ನು ಬರೆಯಬಹುದೇ? ಹವ್ದೆನ್ನುವುದಾದರೆ, ಹೇಗೆ ಬರೆಯಬಹುದು ಅನ್ನುವುದನ್ನು ತಿಳಿಯೋಣ.

ಮೊಬಯ್ಲ್ ಗಳು ಅನ್ ಡ್ರಾಯಿಡ್ ದಾಗಿದ್ದರೆ ವಿಬಿನ್ನ ಬಾಶಾ ಬರಹಕ್ಕೆ ಸಹಾಯ ಮಾಡುವ Application (App)ಗಳನ್ನು ಪ್ಲೇ ಸ್ಟೋರ್‍ ನಿಂದ ಉಚಿತವಾಗಿ ಡವ್ನ್ ಲೋಡ್ ಮಾಡಿ ಮೊಬಯ್ಲ್ ನಲ್ಲಿ ಅಳವಡಿಸಿಕೊಳ್ಳಬೇಕು. ಅವುಗಳಲ್ಲಿ ಪ್ರಮುಕವಾದ ‘Apps’ ಗಳೆಂದರೆ

1. ಮಲ್ಟಿ ಲಿಂಗ್ ಕೀಬೋರ್‍ಡ್ (play.google.com)

2. ಕನ್ನಡ ಪ್ರಯ್ಡ್ ಎಡಿಟರ್‍ (Kannad.editor)

ಕಂಪ್ಯೂಟರ್‍ ನಲ್ಲೋ ಇಲ್ಲವೇ ಮೊಬಯ್ಲ್ ನಲ್ಲೋ ಒಮ್ಮೆ ಕನ್ನಡ ಅಕ್ಶರಗಳ ಬರೆಯುವ ಪ್ರಯತ್ನ ಮಾಡಿನೋಡಿ. ಮತ್ತೆ ಇಂಗ್ಲೀಶ್ ನಲ್ಲಿ ಬರೆಯುವ ಮನಸ್ಸು ನಿಮ್ಮದಾಗಿರುವುದಿಲ್ಲ. ನೀವೇ ಹೇಳುವಿರಿ ಕಂಪ್ಯೂಟರ್‍ ನಲ್ಲಿ ಕನ್ನಡ ಬರವಣಿಗೆ ಎಶ್ಟು ಸುಲಬ ಅಲ್ಲವೇ? ಎಂದು.

(ಚಿತ್ರಸೆಲೆ: www.thehindu.com

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.