ನುಡಿರಾಜ್ಯಗಳು ಬರೀ ಬಾವನಾತ್ಮಕತೆಗಲ್ಲ
– ಕಿರಣ್ ಬಾಟ್ನಿ.
ಯೂರೋಪಿನಲ್ಲಿ ನುಡಿವಾರು ದೇಶಗಳು ಹುಟ್ಟಿಕೊಂಡಿದ್ದು ಮತ್ತು ಈಗಲೂ ಗಟ್ಟಿಯಾಗಿ ನಿಂತಿರುವುದು ಬರೀ ಬಾವನಾತ್ಮಕತೆಯಿಂದೇನು? ಜರ‍್ಮನ್ನರು ಜರ‍್ಮನಿಯನ್ನು ಒಬ್ಬ ’ಜರ‍್ಮನ್ ಮಾತೆ’ಯಾಗಿಸಿ, ನಾಡಿನಲ್ಲೆಲ್ಲ ಆಕೆಯ ಮೂರ‍್ತಿಗಳನ್ನು ನಿಲ್ಲಿಸಿ, ದಿನಾಲೂ ಹೂವು ಊದುಬತ್ತಿ ತೆಂಗಿನಕಾಯಿ ಇಟ್ಟು, ಹಾಲೆರೆದು, ಅಡ್ಡಬಿದ್ದು ಕಣ್ಣೀರಿಡುವುದಕ್ಕಾಗಿ ಕಟ್ಟಿಕೊಂಡಿದ್ದಾರೇನು? ಪ್ರೆಂಚರು, ಪೋರ‍್ಚುಗೀಸರು, ಸ್ಪೇನಿಶರು, ಇಸರೇಲಿಗಳು, ಜಪಾನಿಗಳು – ಹೀಗೆ ಯಾರಾದರೂ ಈ ಬಾವನಾತ್ಮಕತೆಯಲ್ಲಿ ಮೆರೆಯುವುದಕ್ಕಾಗಿ ತಂತಮ್ಮ ದೇಶಗಳನ್ನು ಕಟ್ಟಿಕೊಂಡಿದ್ದಾರೆಯೇ? ಇಲ್ಲ ತಾನೇ?
ಹಾಗಾದರೆ ಈ ಬಾವನಾತ್ಮಕತೆಯ ಚವ್ಕಟ್ಟನ್ನು ಮೀರಿ ಬಾರತದ ನುಡಿವಾರು ರಾಜ್ಯಗಳನ್ನು ಕಲ್ಪಿಸಿಕೊಳ್ಳಲು ನಮ್ಮಲ್ಲಿ ಕೆಲವರಿಗೆ ಬಹಳ ತೊಂದರೆಯಾಗುತ್ತದಲ್ಲ? ’ಅಕಂಡ ಬಾರತ’ದ ಹಿತಕ್ಕಾಗಿ ರಾಜ್ಯಗಳಿಗೆ ಇದಕ್ಕಿಂತ ಹೆಚ್ಚಿನ ಪ್ರಾಮುಕ್ಯತೆ ಕೊಡುವುದು ಸರಿಯಲ್ಲ ಎಂಬ ಅನಿಸಿಕೆ ಇಂತವರಲ್ಲಿ ಕೆಲವರಲ್ಲಿ ಬೇರೂರಿರುತ್ತದೆ. ಇದೇನು ಸರಿಯಲ್ಲ, ಏಕೆಂದರೆ ಗಟ್ಟಿಯಿಲ್ಲದ ಇಟ್ಟಗೆಗಳಿಂದ ಗಟ್ಟಿಯಾದ ಮನೆಯನ್ನು ಕಟ್ಟಲಾಗುವುದಿಲ್ಲ. ಸರಿಯೆಂದು ಒಪ್ಪಿದರೂ ಈ ’ಅಕಂಡ ಬಾರತ’ ಎಂಬುದೇನು ಸ್ವರ‍್ಗವೇ? ಮುಕ್ತಿಯಂತೆ ಇದು ಎಲ್ಲ ಗುರಿಗಳಿಗೂ ಮಿಗಿಲಾದುದೇ? ಅಲುಗಾಡಿಸಲಾಗದ ಬೆಟ್ಟವಿದ್ದಂತೆಯೇ?
ಜಗತ್ತಿನಲ್ಲಿ ಅಕಂಡತೆಯಿಂದ ಮೆರೆದು ಕೊನೆಗೆ ಮಣ್ಣುಪಾಲಾದ ರಾಶ್ಟ್ರಗಳ ದೊಡ್ಡ ಪಟ್ಟಿಯೇ ಇದೆ. ಇದೇ ಬಾರತಕ್ಕೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಮೊದಲು ಸೇರಿಕೊಂಡಿದ್ದು ಕಡೆಗೆ ಬೇರೆ ಆಗಲಿಲ್ಲವೇ? ಈಗ ಯಾರಾದರೂ ಅದಕ್ಕಾಗಿ ಕಣ್ಣೀರಿಡುತ್ತಿದ್ದಾರೇನು? ಇಲ್ಲ ತಾನೇ? ಹಾಗಾದರೆ ಈ ಅಕಂಡತೆಗೆ ಎಲ್ಲಿಲ್ಲದ ಪ್ರಾಮುಕ್ಯತೆ ಕೊಡಬೇಕಿಲ್ಲ ಎಂದಾಯಿತಲ್ಲ? ಆದ್ದರಿಂದ ’ಅಕಂಡ ಬಾರತ! ಅಕಂಡ ಬಾರತ!’ ಎಂಬ ಪೊಳ್ಳು ಕಾರಣವನ್ನು ಕೊಟ್ಟು ನುಡಿರಾಜ್ಯಗಳು ಅಂಬೆಗಾಲಿಟ್ಟರೆ ಸಾಕು, ನಡೆಯುವುದೆಲ್ಲ ಬೇಕಿಲ್ಲ; ತೊದಲಿದರೆ ಸಾಕು, ಮಾತಾಡುವುದೆಲ್ಲ ಬೇಕಿಲ್ಲ; ನುಡಿವಾರು ರಾಜ್ಯಗಳ ಬದಲಾಗಿ ’ಆಡಳಿತ’ಕ್ಕಾಗಿ ಆಯತಾಕಾರದ ರಾಜ್ಯಗಳನ್ನು ಮಾಡಿಕೊಂಡರೂ ಸಾಕು; ಎಂದೆಲ್ಲ ತಿಳಿದುಕೊಳ್ಳುವುದು ಸರಿಯಲ್ಲವೆಂದಾಯಿತು. ಹಿಂದೆ ಇದನ್ನೆಲ್ಲ ಅರಿತುಕೊಳ್ಳುವವರು ಹೆಚ್ಚು ಮಂದಿ ಇರಲಿಲ್ಲ. ಈಗ ಇರುವುದರಿಂದ ಬಾರತದ ಅಕಂಡತೆಯನ್ನು ಉಳಿಸಿಕೊಳ್ಳಲು ಇಂತಹ ನಾಟಕಗಳೆಲ್ಲ ನಡೆಯುವುದಿಲ್ಲ.
ಇನ್ನು ಬಾವನಾತ್ಮಕತೆ. ಕನ್ನಡಿಗರೆಲ್ಲರಿಗೂ ಸಮಾನವಾದ ಕನ್ನಡವೆಂಬುದಿದೆ. ತಮಿಳರಿಗೆಲ್ಲ ಸಮಾನವಾದ ತಮಿಳಿದೆ. ಹೀಗೆ ಬೇರೆ ಬೇರೆ ನುಡಿಜನಾಂಗದವರಿಗೆ ತಂತಮ್ಮ ನುಡಿಯೆಂಬುದು ಸಮಾನವಾದುದಿದೆ. ಇನ್ನು ಬಾರತೀಯರಿಗೆಲ್ಲ ಸಮಾನವಾದುದು ಏನಿದೆ? ಇರುವುದು ಬರೀ ಇದೇ ಸುಡುಗಾಡು ಬಾವನಾತ್ಮಕತೆ! ಕನ್ನಡಿಗರು ’ಕನ್ನಡಾಂಬೆ’ಯ ಮುಂದೆ ಊದುಬತ್ತಿ, ತೆಂಗಿನಕಾಯಿ ಇಟ್ಟು, ಹಾಲೆರೆದು, ಅಡ್ಡಬಿದ್ದು ಕಣ್ಣೀರಿಟ್ಟರೆ ಅದರ ಜೊತೆಗೆ ಅವರೆಲ್ಲರೂ ಆಡುವ ನುಡಿಯೆಂಬುದಿದೆ, ಆ ನುಡಿಯಿಂದಲೇ ಅವರೆಲ್ಲರ ಕಲಿಕೆ, ದುಡಿಮೆ, ಒಗ್ಗಟ್ಟು ಮತ್ತು ಏಳಿಗೆಗಳು ಆಗಬಲ್ಲವು, ಬೇರೊಂದು ನುಡಿಯಿಂದಲ್ಲ ಎಂಬುದೂ ಇದೆ. ಆದರೆ ’ಬಾರತಾಂಬೆ’ಯ ಮುಂದೆ ಅವನ್ನೆಲ್ಲ ಇಟ್ಟು ಕಣ್ಣೀರಿಟ್ಟರೆ ಏನು ಉಪಯೋಗ? ಬಾರತೀಯರೆಲ್ಲರ ಏಳಿಗೆಗೆ ಬೇಕಾದ ಯಾವ ಸರಕನ್ನು ಆ ’ಬಾರತಾಂಬೆ’ ಮಾತ್ರ ಒದಗಿಸಬಲ್ಲಳು? ಉತ್ತರ: ಏನೂ ಇಲ್ಲ. ಆದ್ದರಿಂದ ’ಅಕಂಡ ಬಾರತ! ಅಕಂಡ ಬಾರತ!’ ಎಂದು ಕೂಗಾಡುವವರಿಗೇ ಬಾವನಾತ್ಮಕತೆಯ ರೋಗ ಹತ್ತಿರುವುದು, ನುಡಿವಾರು ರಾಜ್ಯಗಳ ಪರವಾಗಿ ನಿಲ್ಲುವವರಿಗಲ್ಲ.
ಕಡೆಯದಾಗಿ ಒಂದು ಮುಕ್ಯವಾದ ಮಾತು. ಮೇಲೆ, ಜನರು ತಮ್ಮ ನುಡಿಯಿಂದಲೇ ಏಳಿಗೆ ಹೊಂದಬಲ್ಲರು ಎಂದೆ. ಆದರೆ ಇದರಲ್ಲೂ ಈ ’ಅಕಂಡ ಬಾರತ’ದ ಉಪಾಸಕರಿಗೆ ನಂಬಿಕೆಯಿಲ್ಲ. ಅವರಿಗೆ ಅದೇಕೋ ಏಳಿಗೆ ಹಾಗಿರಲಿ, ಬಾರತೀಯರ ಉಳಿವು ಕೂಡ ತಂತಮ್ಮ ನುಡಿಯಿಂದ ಆಗಲಾರದೆಂಬ ಅನಿಸಿಕೆಯಿದೆ. ಕಲಿಕೆ, ದುಡಿಮೆ, ಏಳಿಗೆ – ಇವೆಲ್ಲವೂ ಇಂಗ್ಲಿಶಿನಿಂದ ಬಂದುಬಿಡುತ್ತವೆ ಎಂಬ ಅನಿಸಿಕೆ ಕೆಲವರಿಗಿದೆ; ಇನ್ನು ಕೆಲವರಿಗೆ ’ಬಾರತಾಂಬೆ’ ಮಾಟ-ಮಂತ್ರ ಮಾಡಿ ಎಲ್ಲವನ್ನೂ ಕೊಟ್ಟುಬಿಡುತ್ತಾಳೆ ಎಂಬ ಅನಿಸಿಕೆಯೇ ಇರಬೇಕು.
ಇವರಿಬ್ಬರದೂ ಬಹಳ ಹಳೆಯ ರೋಗ: ಬಾರತದ ’ಅಕಂಡತೆ! ಅಕಂಡತೆ!’ ಎಂದು ಅರ‍್ತವಿಲ್ಲದೆ ಜಪಿಸುತ್ತ ಹತ್ತಿರದ್ದೆಲ್ಲವನ್ನೂ ತೆಗಳುವುದು, ಉಪಯೋಗಕ್ಕೆ ಬಾರದ್ದೆನ್ನುವುದು! ತಮ್ಮದೇ ನುಡಿಯನ್ನು ಕೀಳೆಂದು ಹೇಳಿಕೊಳ್ಳುವುದು, ಏನೂ ಉಪಯೋಗವಿಲ್ಲದ್ದೆಂದು ಸಾರಿಕೊಳ್ಳುವುದು! ತಮ್ಮ ಕಲಿಕೆ, ಆರೋಗ್ಯ, ನೀರಾವರಿ, ವಿದ್ಯುತ್ತು, ಇವುಗಳಾವುವೂ ತಮ್ಮ ಕಯ್ಯಲ್ಲಿ ಪೂರಯ್ಸಲು ಆಗುವುದಿಲ್ಲ, ’ಅಕಂಡ ಬಾರತ’ದ ಒಡೆಯರುಗಳು ತಮ್ಮನ್ನು ನಾಯಿಗಳಂತೆ ಸಾಕದೆ ಹೋದರೆ ಇವಾವುವೂ ನಮಗೆ ದಕ್ಕುವುದಿಲ್ಲ ಎಂದುಕೊಳ್ಳುವ ರೋಗ! ಆದ್ದರಿಂದಲೇ ಇವರಿಗೆ ನುಡಿವಾರು ರಾಜ್ಯಗಳೆಂದರೆ ಬರೀ ಬೂಟಾಟಿಕೆಯೆನಿಸುವುದು. ಇಂತವರಿಂದ ’ಕಂಡ’ ನಾಡೂ ಒಡೆಯುತ್ತದೆ, ’ಅಕಂಡ ಬಾರತ’ವೂ ಒಡೆಯುತ್ತದೆ. ಇಂತವರ ಮಾತುಗಳಿಂದ ಮರುಳಾಗದಿರುವುದು ಒಳ್ಳೆಯದು.
(ತಿಟ್ಟ: fijipundit.blogspot.com)
Akhanda bharatha swargave antiralla ? Swarga yaakogodilla antha heLilvalla taavu. Namma deshadalli halavaaru raajyagalidave. ondondu raajyakku tannade aadantha strong points idaave, natural resources nu hange ide. Akhanda bharatha vaadaga raajyagaLu ondakkondu support madkondu ondu Bhavya bharatha katbahudu.
Enuu odgisalla antha sulabhavagi heLbiTTidira. Nim raajya raajya antha koogadidre swartha hortu berenu baralla. Pakistan, Taliban thara odedu chindi chindi agbidteve. Pakistana bangladesha chooradaga kaneeru haakiroru laksha gattale jana idru ..rajya rajya antha hoDdadire munde Ade thara kaneeridbekaagi baruthe. Ade ideology itkonndu munde hodre rajya choor choor agi Nam mane odeyuva kaala nu barbahudu. Enantira ?
Ivella heLidru Hindi herike nija . adu eddu kaanuthe Karnataka dalli. Aadare adanna justify madakke intha bhavanatmakate pollu annodu sari Alla ansthu nange. Namma itihaasa vannu nam ancestors tumba hoDdaadidaare Bhavya bharatha kattoke but pade pade muslimara akramana dinda raajara swartha dinda britishara kutantra e prayasa vannu soliside. Innu e nimma Kannadakke samaana sthaana anno prayasa Vanna bharatha vannu choor choor madokke upayogisabedi kannadakke samaana sthaana padeyoke upoyogisabeku alve
Nimma bhaashe Kannada anda matrakke karnatakadalli bere bhashegaLe ilve? Hange nodidre namge Kannada herike Agtide ansuthe.. Kannadambe antha henge heLtiro bharathambe antha heLoke naachike yaake.
Jai Karnataka Jai Bhartha anni.
Jai Karnataka madkoloke thu Bharatha anbardu ansuthe nange. Yochane oduvavarge bittidu