ನಾಡಿನ ಏಳಿಗೆಗೆ ಅರಿಮೆಯೇ ಅಡಿಪಾಯ

ಪ್ರಶಾಂತ ಸೊರಟೂರ.

ಕಳೆದ ಒಂದು ವರುಶದಿಂದ ಕನ್ನಡದಲ್ಲಿ ಹಿಂದೆಂದೂ ಆಗದಂತಹ ಬರಹಗಳ ಹೊನಲು ಹರಿದುಬರುತ್ತಿದೆ. ಅದರಲ್ಲೂ ಒಂದು ನಾಡಿನ ಕಲಿಕೆ, ಆ ಮೂಲಕ ದುಡಿಮೆ ಮತ್ತು ಏಳಿಗೆಗೆ ಅಡಿಪಾಯವಾಗಿರುವ ಅರಿಮೆ ಮತ್ತು ಚಳಕದ ಬರಹಗಳು ಹೊನಲಿನಲ್ಲಿ ಎಡೆಬಿಡದೇ ಮೂಡಿಬರುತ್ತಿವೆ. ಮದ್ದರಿಮೆ, ಬಾನರಿಮೆ, ಆಟದರಿಮೆ, ಎಣಿಕೆಯರಿಮೆ, ಚಳಕದರಿಮೆ ಹೀಗೆ ಬಗೆ ಬಗೆಯ ಅರಿಮೆಯ ಬರಹಗಳು ಹೊನಲಿನಲ್ಲಿ ಮೂಡಿಬಂದಿರುವುದು ನಿಮಗೆ ಗೊತ್ತೇ ಇದೆ.

ಹೊನಲು ತಂಡದೊಡನೆ ಕಯ್ ಜೋಡಿಸಿ ಅರಿಮೆಯ ಹೊನಲು ಹರಿಸುತ್ತಿರುವ ಎಲ್ಲರಿಗೂ ನನ್ನಿಗಳು.

’ಹೊನಲು’ ಮಿಂಬಾಗಿಲಿನ ಮೊದಲ ಹುಟ್ಟುಹಬ್ಬ ಹತ್ತಿರವಾಗುತ್ತಿರುವ ಈ ನಲ್ ಹೊತ್ತಿನಲ್ಲಿ, ಎಲ್ಲರ ಕನ್ನಡದತ್ತ ನಾನೇಕೆ ಹೊರಳಿದೆ? ಅರಿಮೆಯ ಬರಹಗಳತ್ತ ನನ್ನ ಒಲವೇಕೆ? ಮುಂತಾದವುಗಳ ಕುರಿತು ಈ ಕೆಳಗಿನ ಓಡುತಿಟ್ಟದಲ್ಲಿ ಅನಿಸಿಕೆ ಹಂಚಿಕೊಂಡಿರುವೆ.

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: