ಕನ್ನಡಕ್ಕೆ ಹೊಸ ಪದಗಳ ಹೊಳೆ ಹರಿಯಬೇಕಿದೆ
– ವಿವೇಕ್ ಶಂಕರ್.
ನಲ್ಮೆಯ ’ಹೊನಲು’ ಮಿಂಬಾಗಿಲಿಗೆ ಇನ್ನೇನು ಕೆಲ ನಾಳುಗಳಲ್ಲಿ ಮೊದಲ ಹುಟ್ಟುಹಬ್ಬ. ಈ ಹೊತ್ತಿನಲ್ಲಿ ಹಿಂದಿರುಗಿ ನೋಡಿದಾಗ ಹೊನಲಿನಲ್ಲಿ ಹರಿದುಬಂದ ಬರಹಗಳ ಹೊಳೆ ಕಂಡು ಬೆರಗು ಮತ್ತು ನಲಿವಾಗುತ್ತದೆ.
’ಎಲ್ಲರ ಕನ್ನಡ’ವು ಕನ್ನಡಿಗರ ಕೂಡಣವನ್ನು ಹೊಸದಾದ ಸರಿದಾರಿಯತ್ತ ಕೊಂಡೊಯ್ಯುತ್ತಿರುವುದು ಹೊನಲಿನಲ್ಲಿ ಮೂಡಿಬರುತ್ತಿರುವ ಬರಹಗಳು ಮತ್ತು ಹೊಸ ಬರಹಗಾರರ ಪಾಲ್ಗೊಳ್ಳುವಿಕೆಗಳೇ ಎತ್ತಿ ತೋರಿಸುತ್ತಿವೆ.
ನಮ್ಮಿಂದಾಗದು, ಕನ್ನಡದಿಂದಾಗದು ಎಂದು ಕಯ್ ಚಲ್ಲುತ್ತಾ ಎರವಲಿಗೆ ಜೋತುಬಿದ್ದಿದ್ದ ಕನ್ನಡಿಗರು ಇಂದು ಹೊನಲಿನಲ್ಲಿ ಹೊಸದಾದ ಅಪ್ಪಟ ಕನ್ನಡದ್ದೇ ಪದಗಳ ಹೊಳೆ ಹರಿಸುತ್ತಿರುವುದು ಸಂತಸದ ವಿಶಯ.
ಯಾವುದೇ ನುಡಿಗೆ ಪದಗಳೇ ಉಸಿರು. ನುಡಿ ಬೆಳೆದು ಹೆಮ್ಮರವಾಗಬೇಕಾದರೆ ಆ ನುಡಿಯಾಡುಗರು ಹೊಸ ಪದಗಳನ್ನು ಕಟ್ಟುವತ್ತ ಗಮನಹರಿಸಬೇಕಾಗಿದ್ದು ತುಂಬಾ ಅರಿದಾದ ಕೆಲಸ. ಈ ನಿಟ್ಟಿನಲ್ಲಿ ಕನ್ನಡದ್ದೇ ಪದಗಳನ್ನೇಕೆ ಕಟ್ಟಬೇಕು? ಇಲ್ಲಿ ಎಲ್ಲರ ಕನ್ನಡ ಹೇಗೆ ನೆರವಾಗಬಲ್ಲದು? ಕನ್ನಡದ್ದೇ ಪದಗಳನ್ನು ಕಟ್ಟುವ ಕೆಲಸ ಈಗ ಯಾವ ದಿಕ್ಕಿನಲ್ಲಿ ಸಾಗಿದೆ? ಮುಂತಾದ ವಿಶಯಗಳ ಕುರಿತು ಕೆಳಗಿನ ಓಡುತಿಟ್ಟದಲ್ಲಿ ನಾನು ಮಾತನಾಡಿರುವೆ.
ಬನ್ನಿ, ಕನ್ನಡದ ಈ ಕಟ್ಟಣೆಯ ಕೆಲಸದಲ್ಲಿ ಎಲ್ಲರೂ ಪಾಲ್ಗೊಳ್ಳೋಣ.
[youtube http://www.youtube.com/watch?v=OdqTxA3hTyI&w=560&h=315]
ಇತ್ತೀಚಿನ ಅನಿಸಿಕೆಗಳು