ಪರಿಚೆಪದಗಳಿಂದ ಪಡೆದ ಹೆಸರುಪದಗಳು

ಡಿ.ಎನ್.ಶಂಕರ ಬಟ್.

ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-೩

ಇಂಗ್ಲಿಶ್‌ನಲ್ಲಿ ಮುಕ್ಯವಾಗಿ ness ಮತ್ತು ity ಎಂಬ ಎರಡು ಹಿನ್ನೊಟ್ಟುಗಳನ್ನು ಬಳಸಿ ಪರಿಚೆಪದಗಳಿಂದ ಹೆಸರುಪದಗಳನ್ನು ಪಡೆಯಲಾಗುತ್ತದೆ, ಮತ್ತು ಇವು ಪರಿಚೆಪದಗಳು ತಿಳಿಸುವ ಪರಿಚೆಗಳನ್ನು ಹೆಸರಿಸಲು ಬಳಕೆಯಾಗುತ್ತವೆ:

pada_sarani_3_pic1
ಇದಕ್ಕೆ ಬದಲು, ness ಎಂಬುದು ಎಲ್ಲಾ ಬಗೆಯ ಪರಿಚೆಪದಗಳೊಂದಿಗೂ ಬರಬಲ್ಲುದಾಗಿದ್ದು, ಪರಿಚೆಯನ್ನು ಹೆಸರಿಸುವುದೇ ಅದರ ಮುಕ್ಯ ಕೆಲಸವಾಗಿದೆ. ಇದಲ್ಲದೆ, ಪರಿಚೆಪದ ತಿಳಿಸುವ ಪರಿಚೆಯನ್ನು ಅದು ಹೆಚ್ಚು ನೇರವಾಗಿ ತಿಳಿಸಬಲ್ಲುದು.ity ಎಂಬುದು ಮುಕ್ಯವಾಗಿ ಲ್ಯಾಟಿನ್‌ನಿಂದ ಎರವಲಾಗಿ ಪಡೆದ ಪರಿಚೆಪದಗಳ ಬಳಿಕ, ಅದರಲ್ಲೂ able, al ಮತ್ತು ar ಎಂಬವುಗಳಲ್ಲಿ ಕೊನೆಗೊಳ್ಳುವವುಗಳ ಬಳಿಕ ಬರುತ್ತದೆ. ಹೆಚ್ಚಿನೆಡೆಗಳಲ್ಲೂ ಈ ಒಟ್ಟಿನಿಂದ ಪಡೆದ ಹೆಸರುಪದಗಳು ಪರಿಚೆಪದ ತಿಳಿಸುವ ಪರಿಚೆಯನ್ನು ಹೆಸರಿಸುವ ಕೆಲಸವನ್ನಶ್ಟೇ ನಡೆಸುತ್ತವೆ; ಆದರೆ, ಹಲವು ಪದಗಳಲ್ಲಿ ಅವಕ್ಕೆ ಬೇರೆಯೇ ಹುರುಳು ಬಂದಿದೆ.

ಈ ಎರಡು ಒಟ್ಟುಗಳಿರುವ ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಕನ್ನಡದ ಪರಿಚೆಪದಗಳಿಗೆ ತನ ಎಂಬ ಒಟ್ಟನ್ನು ಸೇರಿಸುವ ಒಂದು ಹಮ್ಮುಗೆಯನ್ನು ಬಳಸಿದರೆ ಸಾಕು; ಆದರೆ ಬೇರೊಂದು ಕಾರಣಕ್ಕಾಗಿ, ಕನ್ನಡದಲ್ಲೂ ಎರಡು ಬಗೆಯ ಹಮ್ಮುಗೆಗಳನ್ನು ಬಳಸಬೇಕಾಗುತ್ತದೆ:

ಇಂಗ್ಲಿಶ್ ಪರಿಚೆಪದಗಳು ತಿಳಿಸುವ ಪರಿಚೆಯನ್ನು ಕನ್ನಡದಲ್ಲಿ ಪರಿಚೆಪದಗಳೇ ತಿಳಿಸುತ್ತಿರಬಲ್ಲುವು, ಇಲ್ಲವೇ ಹೆಸರುಪದಗಳೂ ತಿಳಿಸುತ್ತಿರಬಲ್ಲುವು. ಎತ್ತುಗೆಗಾಗಿ, ಇಂಗ್ಲಿಶ್‌ನ good, novel, nice ಎಂಬಂತಹ ಪರಿಚೆಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಒಳ್ಳೆ, ಹೊಸ, ಚೊಕ್ಕ ಎಂಬಂತಹ ಪರಿಚೆಪದಗಳಿವೆ; ಆದರೆ, ಇಂಗ್ಲಿಶ್‌ನ happy, regular, similar ಎಂಬಂತಹ ಪರಿಚೆಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಪರಿಚೆಪದಗಳಿಲ್ಲ; ಇದಕ್ಕೆ ಬದಲು, ಅವು ತಿಳಿಸುವ ಪರಿಚೆಯನ್ನು ಹೆಸರಿಸುವಂತಹ ಸೊಮ್ಮು, ಓಜೆ, ಹೋಲಿಕೆ ಎಂಬಂತಹ ಹೆಸರುಪದಗಳು ಬಳಕೆಯಲ್ಲಿವೆ.

ಹಾಗಾಗಿ, ಕೆಳಗೆ ವಿವರಿಸಿದ ಹಾಗೆ, ಇಂಗ್ಲಿಶ್ ಪರಿಚೆಪದಗಳಿಗೆ ಸಾಟಿಯಾಗಬಲ್ಲ ಪದಗಳು ಕನ್ನಡದಲ್ಲಿ ಇವೆಯೋ ಇಲ್ಲವೋ ಎಂಬುದರ ಮೇಲೆ ಹೊಸಪದಗಳನ್ನು ಕಟ್ಟುವಲ್ಲಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಬೇಕಾಗುತ್ತದೆ:

(ಕ) ಇಂಗ್ಲಿಶ್‌ನ ಪರಿಚೆಪದಗಳಿಗೆ ಸಾಟಿಯಾಗುವ ಪರಿಚೆಪದಗಳು ಕನ್ನಡದಲ್ಲಿ ಇವೆಯಾದರೆ, ಅವಕ್ಕೆ ತನ ಒಟ್ಟನ್ನು ಸೇರಿಸಿ ಇಂಗ್ಲಿಶ್‌ನ ness ಇಲ್ಲವೇ ity ಒಟ್ಟುಗಳಿರುವ ಪದಗಳಿಗೆ ಸಾಟಿಯಾಗಿರುವಂತಹ ಪದಗಳನ್ನು ಪಡೆಯಲು ಬರುತ್ತದೆ:

pada_sarani_3_pic2

(ಚ) ಇಂಗ್ಲಿಶ್‌ನ ಪರಿಚೆಪದಗಳು ತಿಳಿಸುವ ಪರಿಚೆಯನ್ನು ಹೆಸರಿಸುವಂತಹ ಹೆಸರುಪದಗಳೇ ಕನ್ನಡದಲ್ಲಿವೆಯಾದರೆ, ಅವನ್ನೇ ಇಂಗ್ಲಿಶ್‌ನ ness ಇಲ್ಲವೇ ity ಒಟ್ಟುಗಳಿರುವ ಪದಗಳಿಗೆ ಸಾಟಿಯಾಗುವಂತೆ ಬಳಸಬಹುದು, ಮತ್ತು ಒಟ್ಟುಗಳಿಲ್ಲದ ಇಂಗ್ಲಿಶ್ ಪರಿಚೆಪದಗಳಿಗೆ ಸಾಟಿಯಾಗುವಂತೆ ಈ ಹೆಸರುಪದಗಳಿಗೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪದರೂಪಗಳನ್ನು ಉಂಟುಮಾಡಿಕೊಳ್ಳಬಹುದು; ಎಂದರೆ, ಇಂತಹ ಕಡೆಗಳಲ್ಲಿ ness ಇಲ್ಲವೇ ity ಒಟ್ಟುಗಳಿರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದಲ್ಲಿ ಒಟ್ಟುಗಳಿಲ್ಲದ ಪದಗಳನ್ನು ಬಳಸಬೇಕಾಗುತ್ತದೆ, ಮತ್ತು ಒಟ್ಟುಗಳಿಲ್ಲದ ಪದಗಳಿಗೆ ಬದಲಾಗಿ ಒಟ್ಟುಗಳಿರುವ ಪದಗಳನ್ನು ಬಳಸಬೇಕಾಗುತ್ತದೆ:

pada_sarani_3_pic3

ಕೆಲವು ಕಡೆಗಳಲ್ಲಿ ಇಂಗ್ಲಿಶ್ ಪರಿಚೆಪದಗಳಿಗೆ ಮತ್ತು ಅವುಗಳಿಗೆ ಒಟ್ಟುಗಳನ್ನು ಸೇರಿಸಿ ಪಡೆದ ಹೆಸರುಪದಗಳಿಗೆ ಬೇರೆ ಬೇರೆ ಪದಗಳು ಕನ್ನಡದಲ್ಲಿರುವುದನ್ನು ಕಾಣಬಹುದು; ಇಂತಹ ಕಡೆಗಳಲ್ಲಿ ಪರಿಚೆಪದಗಳಿಗೆ ತನ್ನ ಒಟ್ಟನ್ನು ಸೇರಿಸಿ ಹೆಸರುಪದಗಳನ್ನು ಮತ್ತು ಹೆಸರುಪದಗಳಿಗೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪರಿಚೆಪದರೂಪಗಳನ್ನು ಬೇರೆ ಬೇರಾಗಿ ಪಡೆಯಲು ಬರುತ್ತದೆ:

pada_sarani_3_pic4

ಇಂಗ್ಲಿಶ್‌ನ ness ಇಲ್ಲವೇ ity ಒಟ್ಟುಗಳಿರುವ ಪದಗಳಿಗೆ ಸಾಟಿಯಾದ ಕನ್ನಡ ಪದಗಳಲ್ಲಿ ಬೇರೆಯೂ ಕೆಲವು ಒಟ್ಟುಗಳು ಬಳಕೆಯಾಗಿರುವುದನ್ನು ಕಾಣಬಹುದು:

pada_sarani_3_pic5

ಮೇಲಿನ ಕನ್ನಡ ಪದಗಳಲ್ಲಿ ಪು ಮತ್ತು ಮೆ ಎಂಬ ಒಟ್ಟುಗಳು ಇಂಗ್ಲಿಶ್‌ನ ness ಮತ್ತು ity ಒಟ್ಟುಗಳಿಗೆ ಬದಲಾಗಿ ಬಳಕೆಯಾಗಿವೆ. ಆದರೆ, ಇವು ತನ ಒಟ್ಟಿನಶ್ಟು ಹರವಿನವಲ್ಲ; ಹಾಗಾಗಿ, ಇಂಗ್ಲಿಶ್ ಪದಗಳಿಗೆ ಸಾಟಿಯಾಗುವ ಹೊಸ ಪದಗಳನ್ನು ಉಂಟುಮಾಡುವಲ್ಲಿ ಇವನ್ನು ಬಳಸಹೋಗುವ ಬದಲು ಉದ್ದಕ್ಕೂ ತನ ಎ೦ಬುದನ್ನೇ ಬಳಸುವುದು ಒಳ್ಳೆಯದು.
ಇಂಗ್ಲಿಶ್‌ನಲ್ಲಿಯೂ ness ಮತ್ತು ity ಎಂಬ ಹಿನ್ನೊಟ್ಟುಗಳನ್ನು ಮಾತ್ರವಲ್ಲದೆ cy/ce, ance/ence, ism ಎಂಬಂತಹ ಬೇರೆಯೂ ಕೆಲವು ಹಿನ್ನೊಟ್ಟುಗಳನ್ನು ಪರಿಚೆಪದಗಳಿಂದ ಹೆಸರುಪದಗಳನ್ನು ಪಡೆಯುವಲ್ಲಿ ಬಳಸಲಾಗುತ್ತದೆ (adequacy, convergence, importance, idealism), ಮತ್ತು ಕನ್ನಡದ ಪು, ಹು ಮತ್ತು ಮೆ ಒಟ್ಟುಗಳ ಹಾಗೆ ಅವುಗಳಿಗೆ ಹೆಚ್ಚಿನ ಹರವಿಲ್ಲ.

ಈ ಹೆಚ್ಚಿನ ಒಟ್ಟುಗಳು ಬಂದಿರುವಲ್ಲೂ (ಕ) ಇಂಗ್ಲಿಶ್ ಪರಿಚೆಪದಗಳಿಗೆ ಸಾಟಿಯಾಗಬಲ್ಲ ಪರಿಚೆಪದಗಳು ಕನ್ನಡದಲ್ಲಿದ್ದರೆ, ಅವಕ್ಕೆ ತನ ಒಟ್ಟನ್ನು ಸೇರಿಸಿ ಹೊಸ ಹೆಸರುಪದಗಳನ್ನು ಪಡೆಯಬಹುದು, ಮತ್ತು (ಚ) ಇಂಗ್ಲಿಶ್‌ನ ಹೆಸರುಪದಗಳಿಗೆ ಸಾಟಿಯಾಗಬಲ್ಲ ಹೆಸರುಪದಗಳಿದ್ದರೆ, ಅವಕ್ಕೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪರಿಚೆರೂಪಗಳನ್ನು ಪಡೆಯಬಹುದು:

pada_sarani_3_pic6

ತಿರುಳು:
ಇಂಗ್ಲಿಶ್ ಪರಿಚೆಪದ(adjective)ಗಳಿಂದ ಹೆಸರುಪದ(noun)ಗಳನ್ನು ಪಡೆಯಲು ಮುಕ್ಯವಾಗಿ ity ಮತ್ತು ness ಎಂಬ ಎರಡು ಒಟ್ಟುಗಳನ್ನು ಬಳಸಲಾಗುತ್ತದೆ; ಈ ಒಟ್ಟುಗಳಿರುವ ಹೆಸರುಪದಗಳಿಗೆ ಸಾಟಿಯಾಗಬಲ್ಲ ಹೊಸ ಪದಗಳನ್ನು ಕನ್ನಡದಲ್ಲಿ ಕಟ್ಟಲು ತನ ಎಂಬ ಒಟ್ಟನ್ನು ಬಳಸಲು ಬರುತ್ತದೆ.

ಆದರೆ, ಕೆಲವೆಡೆಗಳಲ್ಲಿ ಇಂಗ್ಲಿಶ್ ಪರಿಚೆಪದಗಳಿಗೆ ಸಾಟಿಯಾಗಬಲ್ಲ ಪರಿಚೆಪದಗಳು ಕನ್ನಡದಲ್ಲಿ ಸಿಗುವುದಿಲ್ಲ; ಇದಕ್ಕೆ ಬದಲು, ಪರಿಚೆಯನ್ನು ಹೆಸರಿಸುವ ಮತ್ತು ity ಇಲ್ಲವೇ ness ಒಟ್ಟುಗಳಿರುವ ಪದಗಳಿಗೆ ಸಾಟಿಯಾಗಬಲ್ಲ ಹೆಸರುಪದಗಳು ಕನ್ನಡದಲ್ಲಿ ಇರುತ್ತವೆ, ಇಲ್ಲವೇ ಅಂತಹವನ್ನು ಹೊಸದಾಗಿ (ಮುಕ್ಯವಾಗಿ ಎಸಕಪದ(verb)ಗಳಿಂದ) ಕಟ್ಟಲು ಬರುತ್ತದೆ; ಇಂತಹ ಕಡೆಗಳಲ್ಲಿ ಹೀಗೆ ಕಟ್ಟಿದ ಹೆಸರುಪದಗಳಿಗೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪರಿಚೆರೂಪಗಳನ್ನು ಪಡೆಯಬಹುದು.

(ಇಂಗ್ಲಿಶ್ ನುಡಿಯ ಹಿನ್ನೊಟ್ಟುಗಳು ಎಂಬ ಈ ಪಸುಗೆ ಇಂಗ್ಲಿಶ್ ಪದಗಳಿಗೆ…-೪ರಲ್ಲಿ ಮುಂದುವರಿಯುತ್ತದೆ)

<< ಬಾಗ-2

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.